ಪರಿಸರ ಸ್ನೇಹಿ ಗಣೇಶನ ಪೂಜಿಸಿ: ಬೆಂಗಳೂರಿನ ಬೆಳಕು ಸಂಸ್ಥೆಯ ಮನವಿ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 21: ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶನ ಮೂರ್ತಿಯಿಂದ ಪರಿಸರದ ಮೇಲಾಗುವ ಹಾನಿಯ ಕುರಿತು ಜನಜಾಗೃತಿ ಮೂಡಿಸುವ ವವಿನೂತನ ಕಾರ್ಯಕ್ರಮವನ್ನು ಬೆಂಗಳೂರಿನ ಬೆಳಕು ಸಂಸ್ಥೆ ಮಾಡುತ್ತಿದೆ.

ಗಣೇಶ ಕೂರಿಸಿದ ಮೇಲೆ ಇವನ್ನು ಮರೆಯಬೇಡಿ

ಅದಕ್ಕೆಂದೇ ಸಂಸ್ಥೆಯ ವತಿಯಿಂದ ರಾಸಾಯನಿಕ ವಸ್ತುಗಳ ಮಿಶ್ರಣದಿಂದ ಮಾಡಿದ ಗೌರಿ-ಗಣೇಶನ ಮೂರ್ತಿಯ ಬದಲಾಗಿ ಶುದ್ಧ ಮಣ್ಣಿನಿಂದ ಮಾಡಿದ ವಿಗ್ರಹ ಪೂಜಿಸುವಂತೆ ಕರಪತ್ರದೊಂದಿಗೆ ಮನೆಗೊಂದು ಮಣ್ಣಿನ ಗೌರಿ ಗಣೇಶ ಪ್ರತಿಮೆಯನ್ನು ನೀಡುವ ಮೂಲಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Bengaluru: Use eco friendly Ganesha to save our planet: Belaku organistation

ಈ ಕಾರ್ಯಕ್ರಮಕ್ಕೆ ಮಾಜಿ ಸಚಿವರಾದ ಎಸ್. ಎ ರಾಮದಾಸ್ ಹಾಗೂ 1ನೇ ವಾರ್ಡ್ ನ ನಗರ ಪಾಲಿಕಾ ಸದಸ್ಯರಾದ ಬಿ.ವಿ ಮಂಜುನಾಥ್‍ ರವರು ಕಾರ್ಯಕ್ರಮಕ್ಕೆ ಚಾಲನೆ ನಿಡಿದರು.

ನಂತರ ಮಾತನಾಡಿದ ಅವರು, ಹಿಂದು ಸಂಸ್ಕೃತಿಯಲ್ಲಿ ಶ್ರದ್ಧಾ ಭಕ್ತಿಗಳಿಂದ ವಿಘ್ನವಿನಾಶಕ ಗಣಪತಿಯನ್ನು ಪ್ರತಿವರ್ಷವೂ ಪೂಜಿಸುತ್ತಾ ಬರುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮುಂತಾದ ನೀರಿನಲ್ಲಿ ಕರಗದ ಮತ್ತು ಪರಿಸರಕ್ಕೆ ಹಾಗೂ ನಮ್ಮ ನಂಬಿಕೆಗೆ ಹಾನಿಯುಂಟು ಮಾಡುವ ರಾಸಾಯನಿಕ ವಸ್ತುಗಳ ಮಿಶ್ರಣದಿಂದ ತಯಾರಿಸಿದ ಗಣಪತಿ ಪ್ರತಿಮೆಗಳು ಮಾರುಕಟ್ಟೆಯನ್ನು ಪ್ರವೇಶಿಸಿರುವುದು ದೌರ್ಭಾಗ್ಯದ ಸಂಗತಿ, ನಮ್ಮ ಕಲಾವಿದರು ತಯಾರಿಸಿದ ರಾಸಾಯನಿಕ ರಹಿತ ಗೌರಿ ಗಣಪತಿ ವಿಗ್ರಹಗಳನ್ನು ಪಡೆದು ಅದನ್ನು ಪೂಜಿಸಿ ಎಂದು ಕರೆನೀಡಿದರು.

ವಿಸರ್ಜನೆ ಬಳಿಕ ಗಿಡವಾಗಿ ಬೆಳೆಯಲಿದ್ದಾನೆ ಪರಿಸರ ಸ್ನೇಹಿ ಗಣಪ!

ಬೆಳಕು ಸಂಸ್ಥೆಯ ಸಂಚಾಲಕ ಕೆ.ಎಂ ನಿಶಾಂತ್ ರವರು ಮಾತನಾಡಿ ನಮ್ಮ ದೇಶದ ಮೇಲೆ ಆಂತರಿಕವಾಗಿ ಅತಿಕ್ರಮಣ ಮಾಡಲು ಹೊಂಚುಹಾಕುತ್ತಿರುವ ಚೀನಾ ದೇಶದ ಉತ್ಪನ್ನಗಳನ್ನು ಬಹಿಷ್ಕರಿಸಿ ಸಂಪೂರ್ಣ ದೇಶಿ ವಸ್ತುಗಳನ್ನು ಬಳಸುವ ಮೂಲಕ ನಮ್ಮ ದೇಶದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯೋಣ ಎಂದರು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕ ಕೆ.ಎಂ ನಿಶಾಂತ್, ಸಹ ಸಂಚಾಲಕ ಧನುಷ್, ಸುಭಾಷ್, ವಿನಯ್, ಅಕ್ಷಯ್, ದೀಪಕ್, ಸಂತೋಷ್, ಗಣೇಶ್, ಸುಮುಖ್, ಋತ್ವಿಕ್ ಮೊಹೊಲ್ಲಾ ನಿವಾಸಿಗಳಾದ ವೆಂಕಟೇಶ್, ಮದನ್ ಹಾಗೂ ಅನೇಕ ಹಿರಿಯರು, ಮುಖಂಡರುಗಳು, ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Please use eco friendly Ganesha statue to save our environment and planet, Belaku organistation of Bengaluru requested people in the occation of Gowri and Ganesha festival which will be taking place on 24th and 25th August.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ