ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ವಿಶ್ವವಿದ್ಯಾಲಯ ವಿಭಜನೆ: ಆಗಸ್ಟ್ ನಿಂದ ಹೊಸ ವಿವಿಗಳ ಕಾರ್ಯಾರಂಭ

ಕಳೆದ ವರ್ಷ ತೀವ್ರ ವಿವಾದವೆಬ್ಬಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯ ವಿಭಜನೆ ಕಾಲ ಸನ್ನಿಹಿತ. ಮೂರು ವಿಭಾಗಗಳಾಗಿ ಬೆಂಗಳೂರು ವಿವಿ ವಿಂಗಡಣೆ. ಪ್ರತಿ ವಿಭಾಗಗಕ್ಕೂ ಪ್ರತ್ಯೇಕ ವಿವಿ ಸ್ಥಾನಮಾನ.

|
Google Oneindia Kannada News

ಬೆಂಗಳೂರು, ಜೂನ್ 9: ಕಳೆದ ವರ್ಷ ಭಾರೀ ವಿವಾದಕ್ಕೀಡಾಗಿದ್ದ ಬೆಂಗಳೂರು ವಿಶ್ವವಿದ್ಯಾಲಯ ವಿಭಜನೆ ಈ ಶೈಕ್ಷಣಿಕ ವರ್ಷದಿಂದ ಸಾಕಾರಗೊಳ್ಳಲಿದೆ.

ವಿವಿಯು ಇನ್ನು ಉತ್ತರ ವಿಭಾಗ, ದಕ್ಷಿಣ ವಿಭಾಗ ಹಾಗೂ ಕೇಂದ್ರ ವಿಭಾಗಳೆಂಬ ಮೂರು ವಿಭಾಗಗಳಲ್ಲಿ ಅಸ್ತಿತ್ವಕ್ಕೆ ಬರಲಿದೆ. ಇದೇ ವರ್ಷ ಆಗಸ್ಟ್ ನಿಂದ ಈ ಹೊಸ ವಿವಿಗಳು ಅಸ್ತಿತ್ವಕ್ಕೆ ಬರಲಿದೆ.

[ಅರ್ಜುನ ಪ್ರಶಸ್ತಿಗೆ ಕನ್ನಡದ ಕುವರ ರೋಹನ್ ಬೋಪಣ್ಣ ಹೆಸರು ಶಿಫಾರಸು]

Bengaluru University will be divided into three separate units by August 2017

ಈಗಿರುವ ವಿಶ್ವ ವಿದ್ಯಾಲಯವು ದಕ್ಷಿಣ ವಿವಿ ಎಂದು ಪರಿಗಣಿಸಲ್ಪಡಲಿದ್ದು, ಇಲ್ಲಿನ ಆಡಳಿತ ಮಂಡಳಿಯು ಯಥಾವತ್ತಾಗಿ ಹಾಗೆಯೇ ಮುಂದುವರಿಯುತ್ತದೆ.

ಆದರೆ, ಉತ್ತರ ಹಾಗೂ ಕೇಂದ್ರ ವಿಶ್ವವಿದ್ಯಾಲಯಗಳಿಗೆ ಹೊಸ ಕುಲಪತಿ, ಕುಲಸಚಿವರು ಹಾಗೂ ಸಿಂಡಿಕೇಟ್ ಸದಸ್ಯರ ನೇಮಕಾತಿಗಳು ಪ್ರತ್ಯೇಕವಾಗಿ ಆಗಲಿವೆ. ಅದರ ಜತೆಯಲ್ಲೇ ಪ್ರತ್ಯೇಕವಾಗಿ ಲಾಂಛನ,

ದೇವನ ಹಳ್ಳಿಯ ಸಮೀಪ ಬೆಂಗಳೂರು ವಿವಿ ಉತ್ತರ ವಿಶ್ವವಿದ್ಯಾಲಯವು ಅಸ್ತಿತ್ವಕ್ಕೆ ಬರಲಿದ್ದು, ಇದಕ್ಕಾಗಿ ಅಲ್ಲಿ 115 ಎಕರೆ ಮಂಜೂರಾಗಿದೆ. ಸದ್ಯಕ್ಕೆ ಉತ್ತರ ವಿವಿಯು ಕೋಲಾರದಲ್ಲಿ ತಾತ್ಕಾಲಿಕವಾಗಿ ನೆಲೆಯೂರಲಿದ್ದು, ಕೇಂದ್ರ ವಿವಿಯು ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸಲಿದೆ. ತಮ್ಮ ಸ್ವಂತ ಕಟ್ಟಡಗಳು ನಿರ್ಮಾಣವಾದ ಮೇಲೆ ಅವು ಈ ಸ್ಥಾನಗಳನ್ನು ತೊರೆಯಲಿವೆ.

[ನಮ್ಮ ಮೆಟ್ರೋ ಹಂತ 1: ಉಪಯೋಗ ಪಡೆಯಲಿದ್ದಾರೆ 5 ಲಕ್ಷ ಜನ!]

ವಿಜಯನಗರ, ಬೊಮ್ಮನಹಳ್ಳಿ, ಪದ್ಮನಾಭನಗರ, ಆನೇಕಲ್, ಬೆಂಗಳೂರು ದಕ್ಷಿಣ, ಯಶವಂತಪುರ, ರಾಜರಾಜೇಶ್ವರಿ ನಗರ, ದಾಸರಹಳ್ಳಿ, ಮಹಾಲಕ್ಷ್ಮಿ ಬಡಾವಣೆ, ನೆಲಮಂಗಲ, ಗೋವಿಂದರಾಜ ನಗರ, ಮಾಗಡಿ, ರಾಮನಗರ, ಕನಕಪುರ ಮತ್ತು ಚನ್ನಪಟ್ಟಣ ವಿವಿಗಳು ಬೆಂಗಳೂರು ದಕ್ಷಿಣ ವಿ.ವಿ ವ್ಯಾಪ್ತಿಗೆ ಬರಲಿವೆ.

ಶಾಂತಿನಗರ, ಬ್ಯಾಟರಾಯನಪುರ, ಯಲಹಂಕ, ಮಲ್ಲೇಶ್ವರ, ಹೆಬ್ಬಾಳ, ಶಿವಾಜಿನಗರ, ಗಾಂಧಿನಗರ, ಚಿಕ್ಕಪೇಟೆ, ಬಸವನಗುಡಿ, ಬಿಟಿಎಂ ಬಡಾವಣೆ, ಜಯನಗರ, ರಾಜಾಜಿನಗರ ಪ್ರಾಂತ್ಯಗಳು ಬೆಂಗಳೂರು ಕೇಂದ್ರ ವಿ.ವಿ ಸುಪರ್ದಿಗೆ ಒಳಪಡಲಿವೆ.

ಇನ್ನು, ಕೋಲಾರ, ಮಾಲೂರು, ಕೆ.ಆರ್‌. ಪುರ, ಪುಲಿಕೇಶಿನಗರ, ಸರ್ವಜ್ಞನಗರ, ಸಿ.ವಿ. ರಾಮನ್‌ ನಗರ, ಮಹದೇವಪುರ, ಗೌರಿಬಿದನೂರು, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ದೇವನಹಳ್ಳಿ, ಹೊಸಕೋಟೆ ಮತ್ತು ದೊಡ್ಡಬಳ್ಳಾಪುರ - ಇವು ಬೆಂಗಳೂರು ಉತ್ತರ ವಿ.ವಿ ವ್ಯಾಪ್ತಿಗೆ ಒಳಪಡಲಿವೆ.

English summary
Bengaluru University will be divided into three units and each unit will work as separate university by August 1st of this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X