ವಿಡಿಯೋ: ಗಾಯಾಳುವಿಗೆ ಸದಾನಂದ ಗೌಡರ ಆರೈಕೆ

Written By:
Subscribe to Oneindia Kannada

ಬೆಂಗಳೂರು, ಜುಲೈ, 02: ಸದಾ ನಗುಮೊಗದಲ್ಲೇ ಇರುವ ಕೇಂದ್ರ ಕಾನೂನು ಸಚಿವ ಸದಾನಂದ ಗೌಡ ಮಾನವೀಯತೆ ಮೆರೆದಿದ್ದಾರೆ. ಅಪಘಾತಗೊಂಡು ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ವಾಹನ ಸವಾರನಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲು ಮಾಡಿಸಿದ್ದಾರೆ.[ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಎಲ್ಲಿಗೆ ಬಂತು?]

ಮಲ್ಲೇಶ್ವರಂ ಕಚೇರಿಯಲ್ಲಿ ನಡೆಯಲಿದ್ದ ಬಿಜೆಪಿ ಪದಾಧಿಕಾರಿಗಳ ಸಭೆಗೆ ಸದಾನಂದ ಗೌಡ ಆಗಮಿಸುತ್ತಿದ್ದರು. ಈ ವೇಳೆ ಸಂಜಯನಗರದ ಬಳಿ ಕಾರು ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಬೈಕ್ ಸವಾರನನ್ನು ಕಂಡಿದ್ದಾರೆ.[ಕೇಂದ್ರ ಸಂಪುಟ ಪುನಾರಚನೆ: ರಾಜ್ಯದ 1 ವಿಕೆಟ್ ಡೌನ್?]

accident

ತಕ್ಷಣ ಕಾರಿನಿಂದ ಇಳಿದು ತಮ್ಮ ಬೆಂಗಾವಲು ಪಡೆಯವರೊಂದಿಗೆ ಸ್ಥಳಕ್ಕೆ ಧಾವಿಸಿ ಗಾಯಾಳುವಿಗೆ ತಮ್ಮ ವಾಹನದಲ್ಲಿಯೇ ಇದ್ದ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಮೂಲಕ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಲು ಸೂಚನೆ ನೀಡಿದ್ದಾರೆ. ಕೇಂದ್ರದ ಮಂತ್ರಿ ಪದವಿ ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ ಗೌಡರ ಸಾಮಾಜಿಕ ಕಾರ್ಯ ಪ್ರಶಂಸೆಗೆ ಅರ್ಹವಾಗಿದೆ.[ಇದು ಸದಾನಂದ ಗೌಡರ ಮಗನ ಮದುವೆ]

ವಿಡಿಯೋ ಇಲ್ಲಿದೆ

ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್ ತೀರ್ಥಹಳ್ಳಿ ಸಮೀಪ ಕೆರೆಯಲ್ಲಿ ಬಿದ್ದಿದ್ದ ಕುಟುಂಬನ್ನು ರಕ್ಷಣೆ ಮಾಡಿದ್ದರು. ಸಚಿವ ಯುಟಿ ಖಾದರ್, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸಹ ಅಪಘಾತದಲ್ಲಿ ಗಾಯಗೊಂಡಿದ್ದ ಕುಟುಂಬಕ್ಕೆ ನೆರವು ನೀಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru: Union Minister for Law and Justice D.V. Sadananda Gowda helped accident victim at Sanjaya Nagar Bengaluru on July 2, 2016. Minister arranged first aid for a victim from his car first aid box and left the place after ensuring a safety of person.
Please Wait while comments are loading...