ಮನೆಯಲ್ಲೇ ಜೂಜಾಡು, ವಿಡಿಯೋ ಗೇಮ್‌ಗೂ ಹಣ ಕಟ್ಟಿ ನೋಡು!

Subscribe to Oneindia Kannada

ಬೆಂಗಳೂರು, ಮಾರ್ಚ್, 01: ನಗರದ ವಿವಿಧೆಡೆ ಜೂಜು ಅಡ್ಡೆ ಮೇಲೆ ದಾಳಿ ಮಾಡಿದ ಬೆಂಗಳೂರು ಅಪರಾಧ ದಳದ (ಸಿಸಿಬಿ)ಪೊಲೀಸರರು ಸುಮಾರು 20 ಜನರನ್ನು ಬಂಧಿಸಿ 1.5 ಲಕ್ಷ ರು. ನಗದನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ದರೋಡೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ

ಮೈಕೋ ಲೇಔಟ್ ಠಾಣಾ ವ್ಯಾಪ್ತಿಯ ಎನ್.ಎಸ್.ಪಾಳ್ಯದ ಮನೆಯೊಂದರ ಜೂಜು ಅಡ್ಡೆ ಮೇಲೆ ದಾಳಿ ಮಾಡಿ 12 ಜನರನ್ನು ಬಂಧಿಸಿದ್ದಾರೆ. ಬಸಪ್ಪ, ಮೂರ್ತಿ, ಆನಂದ , ಹರೀಶ್, ಅನಿಲ್ , ರಂಜನ್ ಕುಮಾರ್, ರಾಜೇಶ ,ದೀಪು , ಸತೀಶ್ , ಮೋಹನ್, ಹೇಮಂತ್ , ವಿಜಯ್ ಎಂಬರನ್ನು ಬಂಧಿಸಿ 1.41 ಲಕ್ಷ ರು. ನಗದು ವಶಪಡಿಸಿಕೊಂಡಿದ್ದಾರೆ.[ಆಫ್ರಿಕಾ ವಿದ್ಯಾರ್ಥಿಗಳ ರಾತ್ರಿ ರಂಪಾಟವೇನು ಕಡಿಮೆ ಇಲ್ಲ!]

gambling

ನಾಯಂಡಹಳ್ಳಿ, ಜೆಪಿ ನಗರ, ಶ್ರೀನಗರ, ಉತ್ತರಹಳ್ಳಿಗೆ ಸೇರಿದ ಆರೋಪಿಗಳು ಅಂದರ್-ಬಾಹರ್ ಆಟದಲ್ಲಿ ತೊಡಗಿದ್ದರು. ಪ್ರಮುಖ ಆರೋಪಿ ಶಿವಕುಮಾರ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.

ವಿಡಿಯೋ-ಗೇಮ್ಸ್ ಜೂಜಾಟದ ಅಡ್ಡೆ ಮೇಲೆ ದಾಳಿ
ಚಂದ್ರಾ ಲೇಔಟ್ ಪೊಲೀಸ್ ಠಾಣಾ ಸರಹದ್ದಿನ ವಿಡಿಯೋ ಗೇಮ್ ಅಡ್ಡೆಯೊಂದರ ಮೇಲೆ ದಾಳಿ ನಡೆಸಿ ನಾಲ್ಕು ಜನರನ್ನು ಬಂಧಿಸಿ 1,300 ರು., 10 ವಿಡಿಯೋ ಗೇಮ್ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ.[ಇರಾನಿ ಗ್ಯಾಂಗ್ ಸರಗಳ್ಳರು ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ?]

ಹಣವನ್ನು ಪಣವಾಗಿರಿಸಿಕೊಂಡು ವಿಡಿಯೋ ಗೇಮ್ ಆಡುತ್ತಿದ್ದರು ಎಂಬ ಮಾಹಿತಿ ಆಧರಿಸಿ ಕೇಂದ್ರ ಅಪರಾಧ ವಿಭಾಗದ ಸಿಸಿಬಿ ವಿಶೇಷ ವಿಚಾರಣಾ ದಳದ ಎಸಿಪಿ, ಇನ್ಸ್‍ಪೆಕ್ಟರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು. ಆರೋಪಿಗಳಾದ ಕಿರಣ್, ಶ್ರೀನಿವಾಸ್, ಸತೀಶ್, ಕುಮಾರಸ್ವಾಮಿ ಎಂಬುವರನ್ನು ಬಂಧಿಸಲಾಗಿದೆ.[ನೀವು ಕ್ಯಾಂಡಿ ಕ್ರಶ್ ಆಡುತ್ತೀರಾ?]

ದರೋಡೆ ಆರೋಪಿಗಳ ಬಂಧನ
ಎಸ್.ಆರ್.ನಗರ ವ್ಯಾಪ್ತಿಯಲ್ಲಿ ಪ್ರಕಾಶ್ ಎಂಬುವರಿಗೆ ಅಡ್ಡಗಟ್ಟಿ 5 ಲಕ್ಷ ರು. ಎಗರಿಸಿದ್ದ ಜೆಸಿ ರಸ್ತೆಯ ಕಿರಣ್ ಕುಮಾರ್ ಮತ್ತು ಸಿದ್ದಾಪುರದ ಬಾಲಾಜಿ ಬಿನ್ ವೆಂಕಟೇಶ್ ಎಂಬುವರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮತ್ತು ಹಲಸೂರು ಗೇಟ್ ಉಪ ವಿಭಾಗದ ತಿಮ್ಮಯ್ಯರವರ ಮಾರ್ಗದರ್ಶನದಲ್ಲಿ ಸಂಪಂಗಿರಾಮನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಎಂ.ಎನ್.ಮಂಜುನಾಥ್, ಪಿಎಸ್ ಐ ಬಿ.ಪುಟ್ಟೇಗೌಡ, ಹಜರೇಶ್ ಕಿಲ್ಲೇದಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru: The CCB conducted simultaneous raids on Two gambling dens in Bengaluru and arrested 15 people on charges of gambling. Police recovered 1.5 lakh rupees. Police conducted raids on Mico layout and Chandra layout.
Please Wait while comments are loading...