ವಿಡಿಯೋ : ಬೆಂಗಳೂರಿನ ಪುಟ್ಟ ಬಾಲಕಿಯನ್ನು ಬೆಲ್ಟಿನಿಂದ ಬಾರಿಸಿದ ರಾಕ್ಷಸಿ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 04 : ಪುಟ್ಟ ಬಾಲಕಿಯನ್ನು ಬೆಲ್ಟಿನಿಂದ ಬಾರಿಸಿದ ಬೆಂಗಳೂರಿನ ನೆಲಮಂಗಲದ ಟ್ಯೂಷನ್ ಟೀಚರನ್ನು ಶಿಕ್ಷಕಿ ಅನ್ನಬೇಕೋ ರಾಕ್ಷಸಿ ಅನ್ನಬೇಕೋ ನೀವೇ ನಿರ್ಧರಿಸಿ.

ಮನೆಗೆಲಸ ಮಾಡಿಲ್ಲವೆಂದು ಆಕ್ರೋಶಗೊಂಡ ಟೀಚರ್, 2ನೇ ಕ್ಲಾಸಿನಲ್ಲಿ ಓದುತ್ತಿರುವ 7 ವರ್ಷದ ಪುಟ್ಟ ಬಾಲಕಿಯನ್ನು ಲೆದರ್ ಬೆಲ್ಟ್ ತೆಗೆದುಕೊಂಡು, ಮೈಮೇಲೆ ಬಾಸುಂಡೆ ಮೂಡುವಂತೆ ಬಾರಿಸಿದ್ದಾಳೆ. ಈ ಘಟನೆ ನಡೆದಿರುವುದು ಮಂಗಳವಾರ ರಾತ್ರಿಯಂದು.

ನೆಲಮಂಗಲದ ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿರುವ ಬಾಲಕಿ ಟ್ಯೂಷನ್ ಮುಗಿಸಿಕೊಂಡು ರಾತ್ರಿ ಮನೆಗೆ ಮರಳಿದಾಗ ಆಕೆಯ ಮೈಮೇಲೆಲ್ಲ ಬಾಸುಂಡೆ ಮೂಡಿರುವುದನ್ನು ನೋಡಿ ಪಾಲಕರು ಹೌಹಾರಿದ್ದಾರೆ. ಏನಾಯಿತೆಂದು ಕೇಳಿದಾಗ, ಲತಾ ಟೀಚರ್ ಬೆಲ್ಟ್ ತೆಗೆದುಕೊಂಡು ಹೊಡೆದಿದ್ದಾರೆ ಎಂದು ಅಳುತ್ತ ಹೇಳಿದ್ದಾಳೆ. [ಹುಣಸೂರು: ಶಿಕ್ಷಕಿಯ ಹಿಗ್ಗಾಮುಗ್ಗಾ ಥಳಿತಕ್ಕೆ ವಿದ್ಯಾರ್ಥಿ ಅಸ್ವಸ್ಥ]

Bengaluru Tuition teacher beats child with belt for not doing homework

ಕೋಪೋದ್ರಿಕ್ತರದ ಪಾಲಕರು ನೆಲಮಂಗಲ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ನೀಡಿರುವುದು ತಿಳಿಯುತ್ತಿದ್ದಂತೆ ಲತಾ ಪರಾರಿಯಾಗಿದ್ದಾರೆ.

ಪೊಲೀಸರ ಪ್ರಕಾರ, ಲತಾ ಅವರು ಓದಿನಲ್ಲಿ ಹಿಂದಿದ್ದ ಮಕ್ಕಳಿಗೆಲ್ಲ ಹೊಡೆಯುತ್ತಿದ್ದರು. ಆದರೆ, ಪಾಲಕರು ಮಕ್ಕಳನ್ನೇ ದೂರುತ್ತಿದ್ದರು. ಇದೇ ರೀತಿ ಹಲವಾರು ಮಕ್ಕಳಿಗೂ ಲತಾ ಹೊಡೆದಿದ್ದಾರೆ. ಇದೇ ಮೊದಲ ಬಾರಿಗೆ ಲತಾ ವಿರುದ್ಧ ಅಧಿಕೃತವಾಗಿ ಪೊಲೀಸರಿಗೆ ದೂರು ನೀಡಲಾಗಿದೆ. [ಭಾಳ ಒಳ್ಳೇಯವ್ರು ನಮ್ ಮಿಸ್ಸು, ಊರಿಗೆಲ್ಲಾ ಫೇಮಸ್ಸು]

ಪಾಲಕರಿಗೆ ಪ್ರಶ್ನೆಗಳು : ಎರಡನೇ ತರಗತಿ ಓದುತ್ತಿರುವ ಮಕ್ಕಳನ್ನು ಟ್ಯೂಷನ್ನಿಗೆ ಏಕೆ ಕಳುಹಿಸುತ್ತೀರಿ? ಎರಡನೇ ತರಗತಿಯ ಪಾಠಗಳನ್ನು ಮಕ್ಕಳಿಗೆ ಮನೆಯಲ್ಲಿಯೇ ಹೇಳಿ ಕೊಡಲು ಸಾಧ್ಯವಿಲ್ಲವೆ? ಎರಡನೇ ತರಗತಿ ಮಕ್ಕಳು ಕೂಡ ಮನೆಪಾಠಕ್ಕೆ ಹೋಗುವಂತಾದರೆ, ಶಾಲೆಯಲ್ಲಿ ಏನು ಕಲಿಸುತ್ತಿದ್ದಾರೆ? [ಹಾಸನದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಶಿಕ್ಷಕ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A tuition teacher in Nelamangala, Bengaluru rural district has been booked for beating 2nd class girl child with belt severely for not doing homework. The teacher is on the run. Who parents send 2nd class students for tuition? Can't they teach simple things at home?
Please Wait while comments are loading...