ಸಂಚಾರ ಪೊಲೀಸರ ಕೊರತೆ: ದಟ್ಟಣೆ ತಗ್ಗಿಸಲು ಹರಸಾಹಸ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 13: ನಗರದಲ್ಲಿ ಸಂಚಾರ ದಟ್ಟಣೆ ಮಿತಿ ಮೀರುತ್ತಿದೆ. ಆದರೆ ಸಂಚಾರ ಪೊಲೀಸರ ಸಂಖ್ಯೆ ಕಡಿಮೆ ಇದೆ. ಸಂಚಾರ ಪೊಲೀಸ್ ವಿಭಾಗದಲ್ಲಿ 1,260ಕ್ಕೂ ಅಧಿಕ ಹುದ್ದೆಗಳು ಖಾಲಿ ಇದೆ.

ಸದ್ಯ ಅಂದಾಜು 4 ಸಾವಿರ ಸಿಬ್ಬಂದಿಯೇ ನಗರದ ಸಂಚಾರ ದಟ್ಟಣೆ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಸೂಕ್ತ ರೀತಿಯಲ್ಲಿ ವಾಹನ ಸವಾರರಿಗೆ ಅನುಕೂಲ ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಸಂಚಾರ ಪೊಲೀಸರ ಮಾತಾಗಿದೆ.

ಸಂಚಾರ ವಿಭಾಗದಲ್ಲಿ ಒಟ್ಟು 5,267 ಹುದ್ದೆಗಳಿವೆ. ಇದರಲ್ಲಿ 1,265 ಹುದ್ದೆಗಳು ಖಾಲಿ ಇವೆ. ಬಾಕಿ ಇರುವ ಹುದ್ದೆಗಳಲ್ಲಿ ಕಾನ್ ಸ್ಟೆಬಲ್ ಹುದ್ದೆ ಅಧಿಕ ಪ್ರಮಾಣದಲ್ಲಿದೆ. ರಸ್ತೆ ಅಪಘಾತಗಳು ಸಂಭವಿಸಿದಾಗ ಸ್ಥಳಕ್ಕೆ ತೆರಳಿ ಆ ಪ್ರಕರಣವನ್ನು ನಿರ್ವಹಿಸುವುದಲ್ಲದೆ ಸುಗಮ ಸಂಚಾರಕ್ಕೆ ಎಡೆಮಾಡಿಕೊಡಬೇಕಿದೆ. ಇನ್ನೊಂದೆಡೆ ಪೊಲೀಸರ ಕೊರತೆ ಹಿನ್ನೆಲೆಯಲ್ಲಿ ಸಿಬ್ಬಂದಿ ಅವಧಿಗಿಂತ ಹೆಚ್ಚಿನ ಸಮಯ ಕೆಲಸ ಮಾಡಬೇಕಾಗಿದೆ.

Bengaluru traffic police suffering with work pressure

ಸಂಚಾರ ನಿಯಮ ಪಾಲಿಸಿ: ಖಾಲಿ ಇರುವ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡಿ, ಸಿಬ್ಬಂದಿ ಕೊರತೆ ನಿವಾರಿಸುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಸಾರ್ವಜನಿಕರು ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ, ಇನ್ನಷ್ಟು ವಾಹನಗಳು ರಸ್ತೆಗಿಳಿದರೂ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಸಂಚಾರ ವಿಭಾಗದ ಎಡಿಜಿಪಿ ಹಿತೇಂದ್ರ ಹೇಳಿದ್ದಾರೆ.

ಹುದ್ದೆ ಎಸಿಪಿ ಪಿಐ
ಪಿಎಸ್ಐ ಎಎಸ್ಐ ಎಚ್‌ಸಿ ಪಿಸಿ ಒಟ್ಟು
ಮಂಜೂರು ಸಿಬ್ಬಂದಿ 9 49 320 438 1,437 3,010 5,267
ಕಾರ್ಯ ನಿರ್ವಹಿಸುತ್ತಿರುವವರು 7 48
292 418 1,430 1,803 4,002
ಖಾಲಿ ಹುದ್ದೆ 2 1 28 20 7 207 1,265

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru city has around 75 lakhs vehicles including bus, car, trucks, jeep auto rickshaws, mini goods autos and others. You may be shocked knowing the all these 75 lakhs vehicle were maintained by only four thousand traffic police crews since the years.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ