ತಾತ್ಕಾಲಿಕ ಎಟಿಎಂ ಈ ಬೆಂಗಳೂರು ಟ್ರಾಫಿಕ್ ಪೊಲೀಸು!

By: ಅನಂತನಾಗ್
Subscribe to Oneindia Kannada

ಬೆಂಗಳೂರು, ನವೆಂಬರ್ 09 : ಐನೂರು ರುಪಾಯಿಗೆ ಚಿಲ್ಲರೆ ಇಲ್ಲದೆ ಪರದಾಡುತ್ತಿರುವುದು ಬೆಂಗಳೂರಿನ ಎಲ್ಲ ಬಡಾವಣೆಗಳಲ್ಲಿ ಸರ್ವೇಸಾಮಾನ್ಯವಾಗಿದೆ. ಎಲ್ಲ ವ್ಯಾಪಾರಿಗಳು ಐನೂರು ರುಪಾಯಿ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಆದರೆ, ಇಲ್ಲೊಬ್ಬ ಟ್ರಾಫಿಕ್ ಪೊಲೀಸರೊಬ್ಬರು ಐನೂರು ನೋಟನ್ನು ಖುಷಿಯಾಗಿಯೇ ಪಡೆಯುತ್ತಿರುವುದು ನಮ್ಮ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಟ್ರಾಫಿಕ್ ನಿಮಯ ಉಲ್ಲಂಘಿಸಿದವರಿಗೆ ದಂಡ ಹಾಕಲೇಬೇಕು, ಹಾಕಿಸಿಕೊಂಡವರು ಹಣ ನೀಡಲೇಬೇಕು. ದಂಡ ಕೊಡುವವರು ಐನೂರು ರುಪಾಯಿ ತೆಗೆದರೆ ಏನು ಮಾಡುವುದು? [ತರಕಾರಿ ಕೊಳ್ಳುವ ಮುನ್ನ ಚಿಲ್ರೆ ಇದೆಯಾ ನೋಡ್ಕೊಳ್ಳಿ!]

Bengaluru traffic police accepting rs 500 notes

ಪೊಲೀಸರಿಗೆ ಬೇರೆ ದಾರಿಯೇ ಇಲ್ಲ. ಒಂದು ತಮ್ಮಲ್ಲಿರುವ ಚಿಲ್ಲರೆ ನೋಟುಗಳನ್ನು ಕೊಟ್ಟು ಕಳುಹಿಸಬೇಕು ಅಥವಾ ದಂಡ ತೆಗೆದುಕೊಳ್ಳದೆ ಎಚ್ಚರಿಕೆ ಕೊಟ್ಟು ವಾಪಸ್ ಕಳುಹಿಸಬೇಕು. ವಿಚಿತ್ರ ಸಂದಿಗ್ಧತೆಯಲ್ಲಿ ಸಂಚಾರಿ ಪೊಲೀಸರಿದ್ದಾರೆ.

ಜಯನಗರದ ಸೌತ್ ಎಂಡ್ ಸರ್ಕಲ್ ಬಳಿ, ನಮ್ಮ ಮೆಟ್ರೋ ಕೆಳಗಡೆ, ಸಂಚಾರಿ ನಿಯಮ ಉಲ್ಲಂಘಿಸುವವರಿಗಾಗಿ ಕಾದು ಕುಳಿತಿದ್ದ ಟ್ರಾಫಿಕ್ ಪೊಲೀಸರೊಬ್ಬರು ದಂಡವನ್ನು ಐನೂರು ರುಪಾಯಿ ರೂಪದಲ್ಲೇ ಸ್ವೀಕರಿಸಿ, ಚಿಲ್ಲರೆ ಕೊಟ್ಟು ಕಳುಹಿಸುತ್ತಿದ್ದಾರೆ. ಚಿಲ್ಲರೆ ಇಲ್ಲದಿದ್ದರೆ ಇದ್ದಷ್ಟನ್ನು ಇಸಿದುಕೊಂಡು ಅಥವಾ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದಾರೆ. [ಹಳೇ 500, 1,000 ರುಪಾಯಿ ನೋಟು ಏನು ಮಾಡೋದು: ಪ್ರಶ್ನೋತ್ತರಗಳು..]

ಚಿಲ್ಲರೆ ಇದ್ದೂ ಐನೂರು ತೋರಿಸುವ ತರಲೆಗಳಿಗೂ ಕಡಿಮೆಯೇನಿಲ್ಲ. ಕೆಲವರಂತೂ, ಚಿಲ್ಲರೆ ಪಡೆಯುವ ಸಲುವಾಗಿ ಹಳೆ ಕೇಸನ್ನು ನೆನಪಿಸಿ ದಂಡ ಕಟ್ಟಿ ಚಿಲ್ಲರೆ ಪಡೆಯುತ್ತಿದ್ದಾರೆ. ಪರಿಸ್ಥಿತಿಯ ಲಾಭ ಪಡೆದು ದಂಡ ಕಟ್ಟದೆ ತಪ್ಪಿಸಿಕೊಂಡವರು ಹಲವರು. ಚೀಟಿ ಪಡೆಯದೆ ದಂಡ ಇಸಿದುಕೊಂಡರೆ ಪೊಲೀಸರಿಗೂ ಸ್ವಲ್ಪ ಲಾಭ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ban on Rs 500 and Rs 1000 is causing lot of practical problems in Bengaluru. Traffic police are accepting fine but stuggling to manage. Near south end circle a traffic police was caught accpting 500 rupee note from a traffic violator.
Please Wait while comments are loading...