ವಿಶ್ವದ ಡೈನಾಮಿಕ್ ಸಿಟಿಗಳ ಪಟ್ಟಿಯಲ್ಲಿ ಬೆಂಗಳೂರು ನಂಬರ್ 1

Posted By:
Subscribe to Oneindia Kannada

ಬೆಂಗಳೂರು, ಜನವರಿ 18: ವಿಶ್ವದ ಡೈನಾಮಿಕ್ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನ ಪಡೆದಿದೆ. ವಿಶ್ವಮಟ್ಟದಲ್ಲಿ ತನ್ನದೇ ಆದ ವಿಶಿಷ್ಠ ಹೆಗ್ಗಳಿಕೆ ಪಡೆದಿರುವ ಬೆಂಗಳೂರಿನ ಖ್ಯಾತಿಗೆ ಈಗ ಮತ್ತೊಂದು ಮೆರುಗು ಬಂದಂತಾಗಿದೆ.

ಅಮೆರಿಕದ ಜೆಎಲ್ಎಲ್ ಗ್ಲೋಬಲ್ ರಿಸರ್ಚ್ ಕಂಪನಿಯು ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ವಿಶ್ವದ ಮಹಾ ನಗರಗಳಲ್ಲಿ ಕೈಗೊಂಡ ಸಮೀಕ್ಷೆಯಾಧಾರದಲ್ಲಿ ಈ ಪಟ್ಟಿಯನ್ನು ತಯಾರಿಸಲಾಗಿದೆ.

ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಿಕೆ, ಶಿಕ್ಷಣ, ಮೂಲಸೌಕರ್ಯ, ಅಗಾಧವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಹೊಂದಿಕೊಳ್ಳುವುದು ಸೇರಿದಂತೆ ದೇಶದ ಪ್ರಗತಿಗೆ ತಮ್ಮ ಕಾಣಿಕೆಯನ್ನೂ ನೀಡುತ್ತಿರುವ ವಿಚಾರಗಳನ್ನಾಧರಿಸಿ ಜಗತ್ತಿನ ಮೂವತ್ತು ನಗರಗಳನ್ನು ಗುರುತಿಸಲಾಗಿದೆ. ಈ ಪಟ್ಟಿಯಲ್ಲಿ ಬೆಂಗಳೂರು ನಂಬರ್ ಒನ್ ಸ್ಥಾನವನ್ನು ಪಡೆದಿದೆ. ಅಲ್ಲದೆ, ಕಳೆದ ಮೂರು ವರ್ಷಗಳಿಂದ ಈ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲೇ ಇರುತ್ತಿದ್ದ ಲಂಡನ್ ನಗರವನ್ನು ಬೆಂಗಳೂರು ಹಿಂದಿಕ್ಕಿದೆ.[ವಾಸಿಸಲು 'ನಮ್ಮ' ಬೆಂಗಳೂರು ಅತ್ಯುತ್ತಮ ನಗರ]

ಅಂದಹಾಗೆ, ಈ ಪಟ್ಟಿಯಲ್ಲಿ ಹೈದರಾಬಾದ್ ನಗರ ಟಾಪ್ 10ರಲ್ಲಿ ಕಾಣಿಸಿಕೊಂಡ ಭಾರತದ ಮತ್ತೊಂದು ನಗರವಾಗಿದೆ. ಉಳಿದಂತೆ, ಟಾಪ್ 10 ಡೈನಾಮಿಕ್ ನಗರಗಳ ಪಟ್ಟಿ ಇಂತಿದೆ. ಭಾರತದ ಇನ್ನಿತರ ಮಹಾನಗರಿಗಳಾದ ಹೈದರಾಬಾದ್, ಮುಂಬೈ, ಪುಣೆ, ಚೆನ್ನೈ ಸಹ ಪಟ್ಟಿಯಲ್ಲಿ ಸ್ಥಾನ ಪಡೆದಿವೆಯಾದರೂ, ಹೈದರಾಬಾದ್ ಹೊರತುಪಡಿಸಿ ಮಿಕ್ಕಲ್ಲವೂ ಟಾಪ್ 10ನಲ್ಲಿ ಕಾಣಿಸಿಕೊಳ್ಳುವಲ್ಲಿ ವಿಫಲವಾಗಿವೆ.

1. ಬೆಂಗಳೂರು
2. ಹೊ ಚಿ ಮಿನ್ ಸಿಟಿ
3. ಸಿಲಿಕಾನ್ ಸಿಟಿ
4. ಶಾಂಘೈ
5. ಹೈದರಾಬಾದ್
6. ಲಂಡನ್
7. ಹನೋಯ್
8. ಆಸ್ಟಿನ್
9. ನೈರೋಬಿ
10.ಬೋಸ್ಟನ್

ಸಂಶೋಧನೆಗೂ ತವರು

ಸಂಶೋಧನೆಗೂ ತವರು

ಅಂದಹಾಗೆ, ಬೆಂಗಳೂರಿಗೆ ಈ ನಂಬರ್ ಒನ್ ಸ್ಥಾನ ಪಡೆಯಲು ಮತ್ತೊಂದು ಕಾರಣವಿದೆ. ಈ ಮಹಾನಗರಿಯು ತನ್ನ ನಾಗರಿಕರಿಗೆ ಹಲವಾರು ಸೌಕರ್ಯಗಳನ್ನು ಕೊಟ್ಟಿರುವುದೇ ಮಾತ್ರವಲ್ಲ, ತನ್ನಲ್ಲಿ ಹಲವಾರು ಮಹತ್ವದ ಸಂಶೋಧನಾ ಸಂಸ್ಥೆಗಳನ್ನೂ ಹೊಂದಿರುವುದು ಈ ನಗರಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ.

ಸೈದರಾಬಾದ್ ಗೂ ಹೊಸ ಖ್ಯಾತಿ

ಸೈದರಾಬಾದ್ ಗೂ ಹೊಸ ಖ್ಯಾತಿ

ಬೆಂಗಳೂರಿನ ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎಂಬ ಖ್ಯಾತಿಗೆ ಸಡ್ಡು ಹೊಡೆದು ತನ್ನಲ್ಲೂ ಐಟಿ ಕಂಪನಿಗಳಿಗೆ ಆಶ್ರಯ ನೀಡಿದ ಆಂಧ್ರ ಪ್ರದೇಶದ ಮಹಾನಗರ ಹೈದರಾಬಾದ್, ಡೈನಾಮಿಕ್ ನಗರಗಳ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿದೆ. ತಂತ್ರಜ್ಞಾನದಲ್ಲಿ ಮುಂದಿದ್ದರೂ, ಮೂಲ ಸೌಕರ್ಯ ಹಾಗೂ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಸ್ಪಂದಿಸುವಲ್ಲಿ ಈ ನಗರಕ್ಕೆ ಕೊಂಚ ಕಡಿಮೆ ಅಂಕಗಳು ಲಭ್ಯವಾಗಿವೆ.

ಟಾಪ್ 15ರಲ್ಲಿ ಮಹಾರಾಷ್ಟ್ರದ ಪ್ರಮುಖ ನಗರ

ಟಾಪ್ 15ರಲ್ಲಿ ಮಹಾರಾಷ್ಟ್ರದ ಪ್ರಮುಖ ನಗರ

ದೇಶದ ಆರ್ಥಿಕ ರಾಜಧಾನಿ ಎಂದೇ ಕರೆಯಲ್ಪಡುವ ಮುಂಬೈ ಮಹಾನಗರಿಯ ಸಮೀಪದಲ್ಲೇ ಇರುವ ಪುಣೆ, ಕೂಡ ಇಂದು ತನ್ನಲ್ಲಿನ ಮೂಲ ಸೌಕರ್ಯಗಳಿಂದಾಗಿ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿದೆ. ಇತ್ತೀಚಿನ ವರ್ಷಗಳಲ್ಲಿ ಮುಂಬೈ ನಗರದ ವಿಸ್ತರಣಾ ರೂಪವಾಗಿಯೂ ಪೂನಾ ಬಿಂಬಿಸಲ್ಪಟ್ಟಿದೆ. ಆದರೆ, ತಂತ್ರಜ್ಞಾನ ಅಳವಡಿಕೆ ವಿಚಾರದಲ್ಲಿ ಅದು ಬೆಂಗಳೂರಿಗಿಂತ ತುಸು ಹಿಂದಿದೆ.

ಚೆನ್ನೈಗೆ ಪಟ್ಟಿಯಲ್ಲಿ ಹದಿನೇಳನೇ ಸ್ಥಾನ

ಚೆನ್ನೈಗೆ ಪಟ್ಟಿಯಲ್ಲಿ ಹದಿನೇಳನೇ ಸ್ಥಾನ

ದಕ್ಷಿಣ ಭಾರತದ ಮತ್ತೊಂದು ನಗರ ಚೆನ್ನೈ, ಈ ಪಟ್ಟಿಯಲ್ಲಿ 18ನೇ ಸ್ಥಾನ ಪಡೆದಿದೆ. ಅತಿ ಹೆಚ್ಚು ಮಾರುಕಟ್ಟೆಗಳು, ಉದ್ಯೋಗವಕಾಶಗಳನ್ನು ಹೊಂದಿದ್ದರೂ, ಈ ನಗರವು ತಂತ್ರಜ್ಞಾನವನ್ನು ಕ್ಷಿಪ್ರಗತಿಯಲ್ಲಿ ಅಳವಡಿಸಿಕೊಳ್ಳುವಲ್ಲಿ ಕೊಂಚ ಹಿಂದೆ ಬಿದ್ದಿರುವುದರಿಂದ ಅದು ಬೆಂಗಳೂರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿಲ್ಲ.

20ರ ನಂತರದ ಸ್ಥಾನಗಳಲ್ಲಿ ದೆಹಲಿ, ಮುಂಬೈ

20ರ ನಂತರದ ಸ್ಥಾನಗಳಲ್ಲಿ ದೆಹಲಿ, ಮುಂಬೈ

ದೇಶದ ರಾಜಧಾನಿ ದೆಹಲಿ ಹಾಗೂ ವಾಣಿಜ್ಯ ರಾಜಧಾನಿ ಮುಂಬೈ ನಗರಿಗಳು ಡೈನಾಮಿಕ್ ಸಿಟಿಗಳ ಪಟ್ಟಿಯಲ್ಲಿ ಬೆಂಗಳೂರಿನ ಆಜುಬಾಜಿಗೂ ಬಂದಿಲ್ಲ. ಇದಕ್ಕೆ ಕಾರಣ ಅಗಾಧವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಈ ನಗರಿಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಅಲ್ಲದೆ, ತಂತ್ರಜ್ಞಾನ ಅಳವಡಿಕೆಯ ಕೊರತೆ ಸೇರಿದಂತೆ ವಾಯುಮಾಲಿನ್ಯವೂ ಅಧಿಕವಾಗಿರುವುದು ಈ ನಗರಗಳ ಪ್ರಮುಖ ನಕಾರಾತ್ಮಕ ಅಂಶಗಳು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru has emerged most dynamic city in the world in an survey report prepared by an US firm. The garden city of India has beat the mega cities such as London, Shanghai etc.
Please Wait while comments are loading...