ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂಎನ್ ಸಿ-ದೇಶೀಯ ಕಂಪನಿಗಳಿಗೂ ಬೆಂಗಳೂರಲ್ಲೇ ಕಚೇರಿ ಬೇಕಂತೆ!

|
Google Oneindia Kannada News

ಬೆಂಗಳೂರು, ಏಪ್ರಿಲ್ 12: ದೇಶದಲ್ಲಿ 2020ನೇ ಇಸವಿ ವೇಳೆಗೆ ಅತಿ ಹೆಚ್ಚು ವಿಶೇಷ ಆರ್ಥಿಕ ವಲಯಗಳನ್ನು ಹೊಂದಲಿರುವ ಬೆಂಗಳೂರಿನಲ್ಲಿ ಕಚೇರಿ ಜಾಗಗಳಿಗಾಗಿ ಭಾರಿ ಬೇಡಿಕೆ ಉಂಟಾಗಿದೆ.

ದೇಶದ ಅತಿ ಹೆಚ್ಚು ವಿವಿಧ ಕಂಪನಿಗಳ ಕಚೇರಿಗಳಿಗಾಗಿ ಬೇಡಿಕೆ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವ ಬೆಂಗಳೂರು ದೇಶದ ಒಟ್ಟು ಬೇಡಿಕೆಯ ಶೇ.39ರಷ್ಟು ಭಾಗನ್ನು ಹೊಂದಿದೆ. ಬೆಂಗಳೂರಿನಂತರ ದೆಹಲಿ ಹಾಗು ಹೈದರಾಬಾದ್ ನಂತರ ಸ್ಥಾನದಲ್ಲಿದ್ದು, ತಲಾ ಶೇ.14ರಷ್ಟು ಬೇಡಿಕೆಯನ್ನು ಹೊಂದಿದೆ. ತಮಿಳಿನಾಡಿನ ಚೆನ್ನೈ ಶೇ.13ರಷ್ಟು, ಮಹಾರಾಷ್ಟ್ರದ ಪುಣೆ ಶೇ. 12ರಷ್ಟನ್ನು ಹೊಂದಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

2020ರ ವೇಳೆಗೆ ದೇಶದಲ್ಲಿ ಸ್ಥಾಪನೆಗೊಳ್ಳಬಹುದಾದ ವಿಶೇಷ ಆರ್ಥಿಕ ವಲಯಗಳ ಬಹುರಾಷ್ಟ್ರೀಯ ಹಾಗೂ ರಾಷ್ಟ್ರೀಯ ಕಂಪನಿಗಳು ತಮ್ಮ ಕೇಂದ್ರ ಕಚೇರಿಗಳನ್ನು ಬೆಂಗಳೂರಿನಲ್ಲಿ ತೆರೆಯಲು ಹೆಚ್ಚು ಆಸಕ್ತಿಯನ್ನು ಹೊಂದಿವೆ. ಹೀಗಾಗಿ ಬೆಂಗಳೂರು ನಗರದಲ್ಲಿ ಸರಿ ಸುಮಾರು 15.6ಮಿಲಿಯನ್ ಚದರಡಿ ಜಾಗವನ್ನು ಈ ಕಂಪನಿಗಳಿಗಾಗಿ ನೀಡಲಿದ್ದು, ಒಟ್ಟು 40 ಮಿಲಿಯನ್ ಚದರಡಿಗಾಗಿ ಬೇಡಿಕೆ ಉಂಟಾಗಿದೆ.

Bengaluru tops the list in demand for office space

ಈ ಕುರಿತು ಸಮೀಕ್ಷೆ ನಡೆಸಿರುವ ಕೊಲಾಯರ್ಸ್ ಇಂಟರ್ ನ್ಯಾಷನಲ್ ಇಂಡಿಯಾ ದೇಶದಲ್ಲಿ ಸ್ಥಾಪನೆಗೊಳ್ಳಬಹುದಾದ ವಿಶೇಷ ಆರ್ಥಿಕ ವಲಯಗಳು ಹಾಗೂ ಅವುಗಳಿಗೆ ಬೇಕಾದ ಕಚೇರಿ ಜಾಗ ಮೂಲ ಸೌಕರ್ಯ ಕುರಿತಂತೆ ಅಧ್ಯಯನ ನಡೆಸಿದೆ. ಈ ಅಧ್ಯಯನ ಪ್ರಕಾರ ಅನೇಕರು ಆದಾಯ ತೆರಿಗೆಯನ್ನು ಉಳಿಸಿಕೊಳ್ಳಲು ಕಟ್ಟಡಗಳನ್ನು ಬಾಡಿಗೆ ಆದಾರದ ಮೇಲೆ ನೀಡಲು ಮುಂದೆ ಬರುತ್ತಿದ್ದಾರೆ.

ಹಲಸೂರು ಕೆರೆ ಅಭಿವೃದ್ಧಿಗೆ ಪ್ರೆಸ್ಟೀಜ್ ಕಂಪನಿ ಆಸಕ್ತಿಹಲಸೂರು ಕೆರೆ ಅಭಿವೃದ್ಧಿಗೆ ಪ್ರೆಸ್ಟೀಜ್ ಕಂಪನಿ ಆಸಕ್ತಿ

ವಿಶೇಷ ಆರ್ಥಿಕ ವಲಯಗಳೆಂದು ಗುರುತಿಸಲ್ಪಟ್ಟ ಜಾಗಗಳಲ್ಲಿ ಹೆಚ್ಚು ಆದಾಯ ತೆರಿಗೆ ಉಳಿತಾಯದ ಲಾಭಗಲನ್ನು ಸರ್ಕಾರ ಒದಗಿಸಿಸರುವುದರಿಂದ ಬಹುರಾಷ್ಟ್ರೀಯ ಕಂಪನಿಗಳು ಬೆಂಗಳೂರನ್ನು ಆಯ್ಕೆ ಮಾಡಿಕೊಳ್ಳುತ್ತಿವೆ ಎಂದು ವರದಿ ಬಹಿರಂಗ ಪಡಿಸಿದೆ.

ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಕಂಪನಿಗಳು ತಮ್ಮ ಕಚೇರಿಗಳನ್ನು ಬೆಂಗಳೂರಿನಂತಹ ಆದಾಯ ತೆರಿಗೆ ವಿನಾಯಿತಿ ಸೌಲಭ್ಯವಿರುವ ನಗರಗಳಲ್ಲಿ ಸ್ಥಾಪಿಸಲು ಮುಂದೆ ಬರುತ್ತಿದ್ದು ಈ ನಗರಗಳ ಪೈಕಿ ಬೆಂಗಳೂರು ಅತಿ ಹೆಚ್ಚು ಅಚ್ಚುಮೆಚ್ಚಿನ ತಾಣವಾಗಿದೆ.

ಭಾರತದ ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳಲ್ಲಿ ತಲಾ 30 ವಿಶೇಷ ಆರ್ಥಿಕ ವಲಯಗಳಿದ್ದರೆ ಮಹಾರಾಷ್ಟ್ರದಲ್ಲಿ 27 ನಂತರ ಕರ್ನಾಟಕದಲ್ಲಿ ಒಟ್ಟು 27 ವಿಶೇಷ ಆರ್ಥಿಕ ವಲಯಗಳಿದ್ದು ದೇಶದಲ್ಲಿ ಮೂರನೇ ಸ್ಥಾನವನ್ನು ಪಡೆದಿದೆ. ಬೆಂಗಳೂರಿನ ಮಾನ್ಯತಾ ಎಂಬಸ್ಸಿ ಬ್ಯುಸಿನೆಸ್ ಪಾರ್ಕ್, ಎಂಬಸ್ಸಿ ಟೆಕ್ ವಿಲೇಜ್, ಆರ್‌ಎಂಜಡ್ ಎಕೋ ವರ್ಲ್ಡ್ ಹಾಗೂ ಸೆಸ್ನಾ ಬ್ಯುಸಿನೆಸ್ ಪಾರ್ಕ್ ನಂತಹ ವಿಶೇಷ ವಲಯಗಳಲ್ಲಿ ಸಿಸ್ಕೋ ಇಂಟೆಲ್ ಲೋವೆಸ್ ಕಂಪನಿಗಳು ತಮ್ಮ ಕಚೇರಿಗಳನ್ನು ಹೊಂದಿವೆ.

English summary
Bengaluru is still favourite for multinational and our own contry's companies to set up their offices on basis of rent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X