ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಬೆಂಗಳೂರಲ್ಲಿ ದೇಶದ ಮೊದಲ ಇ ತ್ಯಾಜ್ಯ ಘಟಕ

By Mahesh
|
Google Oneindia Kannada News

ಬೆಂಗಳೂರು, ಜುಲೈ 03: 'ಮುಂದಿನ 4 ತಿಂಗಳಲ್ಲಿ ಬೆಂಗಳೂರಿನಲ್ಲಿ ದೇಶದ ಮೊದಲ ಇ-ತ್ಯಾಜ್ಯ ಮರುಬಳಕೆ ಘಟಕವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗುವುದು ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ್ ಕುಮಾರ್ ತಿಳಿಸಿದ್ದಾರೆ.

ಇದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನದ ದೂರದೃಷ್ಟಿಗೆ ಹೊಂದಿಕೆಯಾಗಲಿದ್ದು, ಇದು ಇ-ಸ್ವಚ್ಛ ಅಭಿಯಾನ ಎಂದಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆಗೊಳಿಸಿರುವ ಅವರು, ಇ-ತ್ಯಾಜ್ಯ ಎಂದು ಸಾಮಾನ್ಯವಾಗಿ ಉಲ್ಲೇಖಿಸಲ್ಪಡುವ ಹಾಳಾದ ಎಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ ಉಪಕರಣಗಳ ಪಾಲು ನಗರಪಾಲಿಕೆಯ ಘನ ತ್ಯಾಜ್ಯದಲ್ಲಿ ಅತಿವೇಗವಾಗಿ ಹೆಚ್ಚುತ್ತಿದೆ. 2017 ರಲ್ಲಿ ಸುಮಾರು44.7 ಮಿಲಿಯನ್ ಟನ್ ಇ-ತ್ಯಾಜ್ಯವು ವಿಶ್ವದಾದ್ಯಂತ ಉತ್ಪತ್ತಿಯಾಗಿದ್ದು, 2021 ರ ವೇಳೆಗೆ ಇದು 17.2 ರಷ್ಟು, ಅಂದರೆ 52.2 ಮಿಲಿಯನ್ ಮೆಟ್ರಿಕ್ ಟನ್ ನಷ್ಟು ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. (ಮೂಲ: ಜಾಗತಿಕ ಇ-ವೇಸ್ಟ್ ಮಾನಿಟರ್ 2017).

Bengaluru to get India’s first e-waste plant

ಇಪಿಎ ಯ ಇತ್ತೀಚಿನ ವರದಿಯ ಪ್ರಕಾರ, ಪ್ರತಿದಿನ ನಾವು 416,000 ಕ್ಕೂ ಹೆಚ್ಚು ಮೊಬೈಲ್ ಸಾಧನಗಳನ್ನು ಮತ್ತು 142,000 ಕಂಪ್ಯೂಟರ್ ಗಳನ್ನುಳನ್ನು ಕಸಕ್ಕೆ ಹಾಕುತ್ತಿದ್ದು ಅದನ್ನು ಮರುಬಳಕೆ ಮಾಡುವುದು ಅಥವಾ ಕಸದ ಗುಂಡಿಗಳಲ್ಲಿ ಮತ್ತು ಕಸ ಸುಡುವ ಘಟಕಗಳಲ್ಲಿ ಹಾಕುವ ಮೂಲಕ ಅವುಗಳನ್ನು ಇಲ್ಲವಾಗಿಸುತ್ತಿವೆ.

"ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ (ಅಸೋಚಾಂ) ಮತ್ತು ಕೆಪಿಎಂಜಿ 2016 ರಲ್ಲಿ ನಡೆಸಿದ ಅಧ್ಯಯನದಲ್ಲಿ ಇ-ವೇಸ್ಟ್ ಉತ್ಪಾದನೆಯಲ್ಲಿ ಅಗ್ರ ಐದು ದೇಶಗಳಲ್ಲಿ ಭಾರತವು ಒಂದಾಗಿದೆ. ಇಲ್ಲಿ ವಾರ್ಷಿಕವಾಗಿ 1.85 ದಶಲಕ್ಷ ಟನ್ನುಗಳಷ್ಟು ಇ-ತ್ಯಾಜ್ಯ ಉತ್ಪಾದನೆಯಾಗುತ್ತದೆ.

ಈ ಅಧ್ಯಯನದ ಪ್ರಕಾರ, ಭಾರತದ ಇ-ತ್ಯಾಜ್ಯದಲ್ಲಿ ಒಟ್ಟು 70% ರಷ್ಟು ಕಂಪ್ಯೂಟರುಗಳಿವೆ. ದೂರಸಂಪರ್ಕ ಸಾಧನಗಳು 12% ದಷ್ಟಿವೆ. ಇತರ ನಗರಗಳಿಗೆ ಹೋಲಿಸಿದಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ - ಮುಂಬೈ ಮತ್ತು ದೆಹಲಿಯು ವಾರ್ಷಿಕವಾಗಿ ಸುಮಾರು 92,000 ಟನ್ ಇ-ತ್ಯಾಜ್ಯವನ್ನು ಉತ್ಪಾದಿಸುತ್ತಿದೆ. ಪ್ರಸ್ತುತ, ಭಾರತದಲ್ಲಿ ಇ-ವೇಸ್ಟ್ ಉತ್ಪಾದನೆಯು 2020 ರಲ್ಲಿ 52 ಲಕ್ಷ ಟನ್ನುಗಳಷ್ಟು ತಲುಪಲಿದೆ ಎಂದು ಅಂದಾಜಿಸಲಾಗಿದೆ. ಹಾಗೂ ಪ್ರಸ್ತುತ 148 ಇ-ತ್ಯಾಜ್ಯ ಪರಿಷ್ಕರಣಾ ಘಟಕಗಳಿದ್ದು, ಇನ್ನೂ ಹೆಚ್ಚಿನ ಘಟಕಗಳ ಸ್ಥಾಪನೆಗೆ ಒತ್ತು ನೀಡಬೇಕಾಗಿದೆ.

ಇ-ತ್ಯಾಜ್ಯ ದಲ್ಲಿ ಹೆಚ್ಚುಕಡಿಮೆ 35% ನಷ್ಟು ಪ್ಲಾಸ್ಟಿಕ್ ಇದ್ದು, ಇವುಗಳು ಪಿಸಿ, ಎಬಿಎಸ್, ಎಚ್ ಐ ಪಿ ಎಸ್, ಪಿವಿಸಿ, ಇಪಾಕ್ಸಿ ಮುಂತಾದ ಹೆಚ್ಚಿನಕಾರ್ಯಕ್ಷಮತೆಯ ಪ್ಲಾಸ್ಟಿಕ್ ಹೊಂದಿರುತ್ತವೆ. ಹಾಗೂ ವಿವಿಧ ಅಮೂಲ್ಯ ಲೋಹಗಳನ್ನು ಕೂಡಾ ಹೊಂದಿರುತ್ತವೆ. ಇ-ತ್ಯಾಜ್ಯದ ಬಹುಪಾಲನ್ನು ಮರುಬಳಕೆ ಮಾಡಬಹುದಾದರೂ, ಇ-ತ್ಯಾಜ್ಯದ ಪ್ರಸ್ತುತ ಮರುಬಳಕೆ ಪ್ರಮಾಣವು ಆಶಾದಾಯಕವಾಗಿಲ್ಲ. ಭಾರತದಲ್ಲಿ ಇ-ತ್ಯಾಜ್ಯದಲ್ಲಿ ಕೇವಲ 1.5ರಷ್ಟು ಶೇಕಡ ಮಾತ್ರ ಅಸಂಘಟಿತ ವಲಯದ ಮೂಲಕ ಮರುಬಳಕೆಯಾಗುತ್ತಿದೆ. ಲೋಹಗಳನ್ನು ಪ್ರಮುಖವಾಗಿ ವಿದ್ಯು¯್ಲÉೀಪನಕ್ಕೋಸ್ಕರ ಉಪಯೋಗಿಸಲಾಗುತ್ತದೆ. ಆದರೆ ಹೆಚ್ಚಿನ ಕಾರ್ಯಕ್ಷಮತೆಯ ಪ್ಲಾಸ್ಟಿಕ್ ಗಳನ್ನು ತಿರಸ್ಕರಿಸಲಾಗುತ್ತದೆ, ಇದರಿಂದಾಗಿ ಕಸದ ಗುಡ್ಡೆಗಳು ಹೆಚ್ಚುತ್ತಿವೆ ಮತ್ತು ಇದು ವಿಲೇವಾರಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೆಚ್ಚಿನ ಶಕ್ತಿಯ ಮೌಲ್ಯವಿರುವ ಈ ಪ್ಲಾಸ್ಟಿಕುಗಳು ತಮ್ಮ ಕಾರ್ಯಕ್ಷಮತೆಯ ಮತ್ತು ಗುಣಲಕ್ಷಣಗಳನ್ನು ಬಹಳ ಕಾಲ ಉಳಿಸಿಕೊಳ್ಳುತ್ತವೆ. ಅವುಗಳನ್ನು ಸುಲಭವಾಗಿ ಪುನಃ ಸಂಸ್ಕರಿಸಬಹುದು ಮತ್ತು ಪರಿಸರ-ಸ್ನೇಹಿ ತಂತ್ರಗಳನ್ನು ಬಳಸಿ ಮರುಬಳಕೆ ಮಾಡಬಹುದು.

ಆದಾಗ್ಯೂ, ಕೀಬೋಡ್ರ್ಗಳಲ್ಲಿ ಕೇಬಲುಗಳಲ್ಲಿ ಮತ್ತು ಪ್ಲಾಸ್ಟಿಕ್ ಘಟಕಗಳಲ್ಲಿರುವ ಪ್ಲಾಸ್ಟಿಕ್ಕಿನಲ್ಲಿರುವ ಬ್ರೋಮಿನೇಟೆಡ್ ಫ್ಲೇಮ್ ರಿಟಾರ್ಡೆಂಟುಗಳ (ಬಿ ಎಫ್ ರ್ - ಬ್ರೋಮಿನ್ ಹಚ್ಚಿರುವ ಜ್ವಾಲೆ ನಿಯಂತ್ರಕಗಳು) ಉಪಸ್ಥಿತಿ ಮತ್ತು ಪ್ರಿಂಟೆಡ್ ಸಕ್ರ್ಯೂಟ್ ಬೋರ್ಡ್ ಗಳಲ್ಲಿ (ಪಿಸಿಬಿಗಳು) ಬಳಸಲಾಗುವ ಥರ್ಮೋಸೆಟ್ ಪ್ಲ್ಯಾಸ್ಟಿಕ್ ಗಳು ಮರು ಬಳಕೆಯಲ್ಲಿ ತೊಂದರೆಗಳನ್ನುಂಟುಮಾಡುತ್ತವೆ ಮತ್ತು ಅವುಗಳ ವ್ಯಾಪ್ತಿಯನ್ನು ಕುಗ್ಗಿಸುತ್ತವೆ.

ಸಿ ಐ ಪಿ ಟಿ (ಸೆಂಟ್ರಲ್ ಇನ್ಸಿಟ್ಯೂಟ್ ಆಫ್ ಪ್ಲಾಸ್ಟಿಕ್ಸ್ ಇಂಜಿನೀಯರಿಂಗ್ ಅಂಡ್ ಟೆಕ್ನಾಲಜಿ) ಸಂಸ್ಥೆಯು ಇ-ತ್ಯಾಜ್ಯ ಪ್ಲ್ಯಾಸ್ಟಿಕ್ ಗಳನ್ನು ಮರುಬಳಕೆ ಮಾಡುವ ತಂತ್ರಜ್ಞಾನಗಳು ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ ಘಟಕಗಳು, ಇತರ ರಚನಾತ್ಮಕ ಉಪಯೋಗಗಳನ್ನಾಗಿ ಪರಿವರ್ತಿಸಲು ಬೇಕಾದ ತಂತ್ರe್ಞÁನಗಳನ್ನು ಅಭಿವೃದ್ಧಿಪಡಿಸಿದೆ. ಬಿ ಎಫ್ ರ್ ಪ್ಲ್ಯಾಸ್ಟಿಕ್ ಮತ್ತು ಥರ್ಮೋಸೆಟ್ ಗಳ ಬಳಕೆಗೆ ತಂತ್ರಗಳನ್ನು ವಿನ್ಯಾಸಗೊಳಿಸಲಾಗಿದೆ. ಇತ್ತೀಚಿಗೆ, ಸಿಐಪಿಇಟಿಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗವು ಇ-ತ್ಯಾಜ್ಯದಿಂದ ಉತ್ತಮ ಗುಣಮಟ್ಟದ ಪ್ಲಾಸ್ಟಿಕನ್ನು ಪಡೆದುಕೊಳ್ಳಲು ಪೇಟೆಂಟ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ, ಇದನ್ನು ವಿವಿಧ ರೀತಿಗಳಲ್ಲಿ ಉಪಯೋಗಿಸಬಹುದಾಗಿದೆ. ಇದಲ್ಲದೆ, ದೇಶದ ಪ್ರಮುಖ ಐಟಿ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ಇ-ತ್ಯಾಜ್ಯದಿಂದ ಉತ್ಪತ್ತಿಯಾದ ಪ್ಲ್ಯಾಸ್ಟಿಕ್ ತ್ಯಾಜ್ಯಗಳ ಮರುಬಳಕೆಗಾಗಿ ಸಂಪೂರ್ಣ ಪರಿಹಾರವನ್ನು ಒದಗಿಸುವ ಉದ್ದೇಶದಿಂದ ಸಿ ಐ ಪಿ ಟಿ ಯು ಇ-ತ್ಯಾಜ್ಯ ಮರುಬಳಕೆ ಘಟಕವನ್ನು ಸ್ಥಾಪಿಸಲು ಉz್ದÉೀಶಿಸಿದೆ. ಇದು ಉತ್ತಮ ಗುಣಮಟ್ಟದ ಪ್ಲಾಸ್ಟಿಕ್ ಮತ್ತು ಲೋಹದ ತ್ಯಾಜ್ಯವನ್ನು ವೆಚ್ಚ-ಪರಿಣಾಮಕಾರಿ ಮತ್ತು ಬಾಳಿಕೆ ಬರುವ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಉದ್ಯಮಶೀಲತೆ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಇದನ್ನು ಸೂಕ್ತವಾದ ವ್ಯಾಪಾರ ಮಾದರಿಯಾಗಿ ಕೂಡ ಪರಿವರ್ತಿಸಬಹುದು.

ಇ-ತ್ಯಾಜ್ಯವನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಮತ್ತು ಸಂಸ್ಕರಿಸುವ ಪರಿಸರ-ಸ್ನೇಹಿ ತಂತ್ರಗಳನ್ನು ವಿನ್ಯಾಸಗೊಳಿಸಲಾಗುತ್ತದೆ. ಇದೇ ರೀತಿಯ ವ್ಯವಸ್ಥೆಗಳನ್ನು ಇತರ ಕೆಲವು ಪ್ರಮುಖ ನಗರಗಳಲ್ಲೂ ಅಭಿವೃದ್ಧಿ ಪಡಿಸಬಹುದು, ಇದರಿಂದ ಮರುಬಳಕೆಯನ್ನು ಜೀವನವಿಧಾನವಾಗಿ ಅಳವಡಿಸಿಕೊಳ್ಳುವ ಜತೆಗೆ ದೇಶದಲ್ಲಿ ಸಂಘಟಿತ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಮತ್ತು ನಿರ್ವಹಣೆ ವ್ಯವಸ್ಥೆಯಾಗಿಯೂ ಕೆಲಸ ಮಾಡಬಹುದು.

ದೇಶದ ಮೊದಲ ಇ-ತ್ಯಾಜ್ಯ ಮರುಬಳಕೆ ಘಟಕವನ್ನು ಮಾಹಿತಿ ತಂತ್ರಜ್ಞಾನದ ರಾಜಧಾನಿಯಾದ ಮುಂದಿನ 4 ತಿಂಗಳುಗಳಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲಾಗುವುದು. ಮತ್ತು ನಂತರ ಇಂತಹ ಘಟಕಗಳನ್ನು ದೇಶದ ಇತರೆಡೆಗಳಲ್ಲಿಯೂ ಸ್ಥಾಪಿಸಲಾಗುವುದು.

English summary
India's first e-waste recycling unit will come up in Bengaluru, Union minister of chemicals and fertilisers Ananth Kumar said. The unit, to be set up by the ministry, is likely to be ready in four months, and is in keeping with the Swachh Bharat Abhiyan drive, Kumar said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X