ನಮ್ಮ ಮೆಟ್ರೋ: ಡಿಸೆಂಬರ್ ನಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 18: ಬೆಂಗಳೂರಿನ ಬಹುಮುಖ್ಯ ಸಾರಿಗೆ ವ್ಯವಸ್ಥೆಯಾದ ನಮ್ಮ ಮೆಟ್ರೋದಲ್ಲಿ ಡಿಸೆಂಬರ್ ಹೊತ್ತಿಗೆ ಮೂರು ಹೆಚ್ಚುವರಿ ಬೋಗಿಗಳು ಸೇರಿಕೊಳ್ಳಲಿವೆ. ಇದರೊಂದಿಗೆ ಆರು ಕೋಚ್ ಗಳ ನಮ್ಮ ಮೆಟ್ರೋ ಟ್ರೈನು ಮಹಿಳೆಯರಿಗೆ ಪ್ರತ್ಯೇಕ ಬೋಗಿಗಳನ್ನೂ ಒದಗಿಸಲಿದೆ.

ನಮ್ಮ ಮೆಟ್ರೋದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೋಗಿ:ಜಾರ್ಜ್ ಹೇಳಿದ್ದೇನು?

ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲೂ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ನಮ್ಮ ಮೆಟ್ರೋದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೋಗಿ ನೀಡುವ ಕುರಿತು ಮಾತನಾಡಿದ್ದರು. ಇದೀಗ ಬಿಎಂಆರ್ ಸಿಎಲ್ (ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿ.)ಸಹ, ಡಿಸೆಂಬರ್ ಹೊತ್ತಿಗೆ ಹೊಸ ಬೋಗಿಗಳು ಸಿಗಲಿವೆ ಎಂದಿದೆ.

Bengaluru to get first 6 car metro train by December, women will get a separate coach!

ಬಿಇಎಂಎಲ್(ಭಾರತ್ ಅರ್ಥ್ ಮೂವರ್ಸ್ ಲಿ.) ಗೆ ಹೆಚ್ಚುವರಿ ಬೋಗಿಗಳಿಗಾಗಿ ಬಿಎಂಆರ್ ಸಿಎಲ್ ಮೊದಲೇ ಆರ್ಡರ್ ನೀಡಿತ್ತು. ಡಿಸೆಂಬರ್ ಹೊತ್ತಿಗೆ ಬೋಗಿಗಳು ಪೂರ್ಣಗೊಂಡು, ಬಿಎಂಆರ್ ಸಿಎಲ್ ಕೈಸೇರಲಿರುವ ಹಿನ್ನೆಲೆಯಲ್ಲಿ ಮೆಟ್ರೋ ಪ್ರಯಾಣಿಕರಿಗೆ ಈ ಸಿಹಿ ಸುದ್ದಿ ಲಭ್ಯವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BEML ltd is all set to supply the first six car metro to BMRCL by December. After this women will get a separate coach in Namma metro.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ