ಬೆಂಗಳೂರು ರಸ್ತೆಗಿಳಿಯಲಿವೆ 150 ಎಲೆಕ್ಟ್ರಿಕಲ್ ಬಸ್

Posted By: Gururaj
Subscribe to Oneindia Kannada

ಬೆಂಗಳೂರು, ನವೆಂಬರ್ 27 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಗರದಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಸಂಚಾರ ನಡೆಸಲು ಸಿದ್ಧತೆ ನಡೆಸಿದೆ. 150 ಬಸ್ಸುಗಳನ್ನು ಸಂಸ್ಥೆ ಗುತ್ತಿಗೆ ಪಡೆಯಲಿದೆ.

2014ರಲ್ಲಿ ಮೂರು ಎಲೆಕ್ಟ್ರಿಕ್ ಬಸ್ಸುಗಳ ಪ್ರಾಯೋಗಿಕ ಸಂಚಾರ ನಗರದಲ್ಲಿ ನಡೆದಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು. ದುಬಾರಿಯಾದ ಬೆಲೆ ಎಂಬ ಕಾರಣಕ್ಕೆ ಈ ಬಸ್ಸುಗಳನ್ನು ಖರೀದಿ ಮಾಡಿರಲಿಲ್ಲ.

ಬೆಂಗಳೂರಿನ ರಸ್ತೆಗಿಳಿಯಲಿದೆ ದೇಶದ ಮೊಟ್ಟಮೊದಲ ಎಲೆಕ್ಟ್ರಿಕ್ ಬಸ್

Bengaluru to get 150 electric buses

ಈಗ ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರವನ್ನು ಪುನಃ ಆರಂಭಿಸಲು ಮುಂದಾಗಿದೆ. ಅದಕ್ಕಾಗಿ 150 ಬಸ್ಸುಗಳನ್ನು ಪಡೆಯಲಾಗುತ್ತದೆ. ಬಸ್ಸುಗಳನ್ನು ಖರೀದಿ ಮಾಡದೆ, ಗುತ್ತಿಗೆ ಪಡೆದು ಓಡಿಸಲು ಚಿಂತನೆ ನಡೆಸಲಾಗುತ್ತಿದೆ.

ಬಿಎಂಟಿಸಿ ವಾಯು ವಜ್ರ ಬಸ್ಸಿನಲ್ಲಿ ಸೀಟು ಕಾಯ್ದಿರಿಸಿ!

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜ್ ಈ ಕುರಿತು ಮಾಹಿತಿ ನೀಡಿದ್ದಾರೆ. 'ಇವು ಹೊಸ ತಂತ್ರಜ್ಞಾನವನ್ನು ಹೊಂದಿರುವ ಬಸ್ಸುಗಳು. ಈ ಬಸ್ಸುಗಳನ್ನು ಗುತ್ತಿಗೆ ಪಡೆಯಲಿದ್ದೇವೆ. ಇದಕ್ಕಾಗಿ ಶೀಘ್ರವೇ ಟೆಂಡರ್ ಕರೆಯಲಾಗುತ್ತದೆ' ಎಂದು ಹೇಳಿದ್ದಾರೆ.

ಐಟಿ ಉದ್ಯೋಗಿಗಳನ್ನು ಸೆಳೆಯಲು ಮುಂದಾದ ಬಿಎಂಟಿಸಿ

'ಟಾಟಾ ಕಂಪನಿ ಎಲೆಕ್ಟ್ರಿಕ್‌ ಬಸ್ಸುಗಳನ್ನು ಪೂರೈಕೆ ಮಾಡಲು ಆಸಕ್ತಿ ತೋರಿದೆ. ಬಸ್ ತಯಾರು ಮಾಡು ಎಲ್ಲಾ ಕಂಪನಿಗಳನ್ನು ಟೆಂಡರ್‌ಗೆ ಆಹ್ವಾನಿಸಲಾಗುತ್ತದೆ. ನಂತರ ತೀರ್ಮಾನ ಕೈಗೊಳ್ಳಲಾಗುತ್ತದೆ' ಎಂದು ಪೊನ್ನುರಾಜ್ ತಿಳಿಸಿದ್ದಾರೆ.

ಟಾಟಾ ಮೋಟಾರ್ಸ್ ಈಗ ಎಲೆಕ್ಟ್ರಿಕ್ ಬಸ್ ಉತ್ಪಾದನೆಯನ್ನು ಆರಂಭಿಸಿದೆ. ಧಾರವಾಡ ಮತ್ತು ಉತ್ತರ ಪ್ರದೇಶದ ಲಖನೌನಲ್ಲಿರುವ ಘಟಕಗಳಲ್ಲಿ ಬಸ್ಸುಗಳು ಉತ್ಪಾದನೆಯಾಗುತ್ತವೆ.

9 ಮತ್ತು 12 ಮೀಟರ್ ಉದ್ದದ ಎರಡು ಮಾದರಿಯ ಬಸ್ಸುಗಳನ್ನು ಟಾಟಾ ಸಂಸ್ಥೆ ತಯಾರು ಮಾಡುತ್ತದೆ. 12 ಮೀಟರ್ ಉದ್ದ ಬಸ್ಸುಗಳ ಬೆಲೆ 1.8 ಕೋಟಿ ರೂ.ಗಳಾಗಿವೆ. 6 ಗಂಟೆಗಳ ಕಾಲ ಬ್ಯಾಟರಿ ಚಾರ್ಜ್ ಮಾಡಿದರೆ 100 ರಿಂದ 120 ಕಿ.ಮೀ. ಸಂಚಾರ ನಡೆಸಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bangalore Metropolitan Transport Corporation's (BMTC) all set to invite tender for 150 electric buses. BMTC will take buses on lease.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ