'ದಡಾರ,ರುಬೆಲ್ಲಾ ಲಸಿಕೆ ಹಾಕಿಸಲು ಸಹಕಾರ ನೀಡದ ಶಾಲೆಗಳಿಗೆ ನೋಟೀಸ್'

Posted By: Ramesh
Subscribe to Oneindia Kannada

ಬೆಂಗಳೂರು, ಎಬ್ರವರಿ. 07 : ದಡಾರ ಮತ್ತು ರುಬೆಲ್ಲಾ ಲಸಿಕಾ ಹಾಕಿಸಲು ಸಹಕಾರ ನೀಡದ ಶಾಲೆಗಳಿಗೆ ನೋಟೀಸ್ ನೀಡಿ ಕ್ರಮ ಜರುಗಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಹೇಳಿದರು.

ಕುಮಾರ ಕೃಪಾ ರಸ್ತೆಯಲ್ಲಿರುವ ಭಾರತ ಸೇವಾದಳ ಶಾಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ದಡಾರ ಮತ್ತು ರುಬೆಲ್ಲಾ ಲಸಿಕಾ ಕಾರ್ಯಕ್ರಮಕ್ಕೆ ಸಚಿವ ತನ್ವೀರ್ ಸೇಠ್ ಚಾಲನೆ ನೀಡಿ ಮಾತನಾಡಿದ ಅವರು, ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನದಲ್ಲಿ ರಾಜ್ಯದ 1ಕೋಟಿ 16ಲಕ್ಷ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ ಎಂದರು.

Bengaluru three schools given notice for failing to organise awareness activities and allowing officials

ಬೆಂಗಳೂರಿನ ಕೋರಮಂಗಲದ ಒಂದು ಶಾಲೆ ಮತ್ತು ಕೆ.ಜಿ ಹಳ್ಳಿಯ ಎರಡು ಸೇರಿದಂತೆ ರಾಜ್ಯದ 17 ಶಾಲೆಗಳು ಈ ಲಸಿಕೆ ಹಾಕಿಸಲು ಸಹಕಾರ ನೀಡಿಲ್ಲವೆಂದು ಗಮನಕ್ಕೆ ಬಂದಿದೆ. ಅಂತಹ ಶಾಲೆಗಳಿ ನೋಟೀಸ್ ನೀಡಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಆದರೆ, ಕೆಲ ಶಾಲೆಗಳು ಮಾತ್ರ ಲಸಿಕೆ ಹಾಕಿಸಲು ಮಕ್ಕಳ ಪೋಷಕರು ಸಹಕಾರ ನೀಡಿಲ್ಲವೆಂದು ಕಾರಣ ನೀಡಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As many as three Bengaluru city schools have been issued notice for not giving consent to the Health and Family Welfare department to carry out Measles-Rubella (MR) vaccination drive.
Please Wait while comments are loading...