ಮಾದಕ ವಸ್ತು ಜಾಲ ಪತ್ತೆ: 57 ಕೆಜಿ ಗಾಂಜಾ ವಶ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್.29: ಖಚಿತ ಮಾಹಿತಿ ಅಧಾರದ ಮೇಲೆ ವಿಲ್ಸನ್ ಗಾರ್ಡನ್ ಪೊಲೀಸರು ಮಾದಕ ವಸ್ತುವಿನ ಜಾಲ ಪತ್ತೆ ಮಾಡಿ ರು 7.25 ಲಕ್ಷದ ಮೌಲ್ಯದ 57 ಕೆಜಿ ಗಾಂಜಾ ಸೇರಿದಂತೆ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಕೇಂದ್ರ ವಿಭಾಗದ ವಿಲ್ಸನ್ ಗಾರ್ಡನ್ ಪೊಲೀಸರು ಲಾಲ್ಬಾಗ್ ಮೈನ್ ಗೇಟ್ ಎದುರಿನಲ್ಲಿ ಗಾಂಜಾ ವ್ಯಾಪಾರ ಮಾಡಲು ದ್ವಿಚಕ್ರ ವಾಹನದಲ್ಲಿ ಬಂದಿದ್ದ ಮಹಮದ್ ಇಬ್ರಾಹಿಂ(30) ಮೇಲೆ ದಾಳಿ ಮಾಡಿ ಆತನ ಬಳಿಯಿದ್ದ 3.700 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಕೇಸು ದಾಖಲಿಸಿದರು.[ಕರಾವಳಿಯಲ್ಲಿ ಮಾದಕ ವಸ್ತು ಬ್ರೇಕ್ ಗೆ ಡಿಸಿ ಪಣ]

bengaluru three arrested, found 53 kg Marijuana

ಇಬ್ರಾಹಿಂ ಅನ್ನು ವಿಚಾರಣೆ ಗೊಳಪಡಿಸಿ ಆತನಿಗೆ ಯಾರು ಗಾಂಜಾ ಕೊಡುತ್ತಿದ್ದರೆಂಬುದನ್ನು ಬಾಯಿಬಿಡಿಸಿದ್ದು, ಇಬ್ರಾಹಿಂ ನೀಡಿದ ಮಾಹಿತಿ ಮೇರೆಗೆ ಶಿವ ಬಿನ್ ಯಲ್ಲಪ್ಪ (25)ಹಾಗೂ ರಮೇಶ ಬಿನ್ ರಾಮಸ್ವಾಮಿ(55) ಎಂಬುವವರನ್ನು ಬಂದಿಸಿದರು. ಅವರ ಬಳಿ ಇದ್ದ ಒಟ್ಟು 53 ಕೆಜಿ ಗಾಂಜಾವನ್ನು ವಶ ಪಡಿಸಿಕೊಂಡು ಪ್ರಕರಣ ದಾಖಲಿಸಿದರು.

ಈ ಮಾದಕ ವಸ್ತು ಮಾರಾಟ ಜಾಲದ ಆರೋಪಿಗಳನ್ನು ದಸ್ತಗಿರಿ ಮಾಡಿರುವ ಪೊಲೀಸರು ಸುಮಾರು 7,25,000/-ರೂ ಬೆಲೆ ಬಾಳುವ ಒಟ್ಟು 57.ಕೆ.ಜಿ ತೂಕದ ಗಾಂಜಾವನ್ನು ಹಾಗು ದ್ವಿ ಚಕ್ರ ವಾಹವನ್ನು ಅಮಾನತ್ತು ಮಾಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Central Wilson Gordon police found the Substance traffic in bengaluru. Three arrested and Seizure the 1.75 lakh of 53 kg Marijuana.
Please Wait while comments are loading...