ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಲಸೂರು ಕೆರೆ ಮಾಲಿನ್ಯಕ್ಕೆ ಬಲಿಯಾದ ಸಾವಿರಾರು ಮೀನುಗಳು

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 07: ಗಾರ್ಡನ್ ಸಿಟಿ ಬೆಂಗಳೂರಿನ ಮಾಲಿನ್ಯ ಮಿತಿ ಮೀರುತ್ತಿದೆ ಎಂಬುದಕ್ಕೆ ಸೋಮವಾರ ಬೆಳಗ್ಗೆ ದುರಂತ ಉದಾಹರಣೆ ಕಾಣಸಿಕ್ಕಿದೆ. ಹಲಸೂರಿನ ಕೆರೆಯ ದಂಡೆಯಲ್ಲಿ ಸಾವಿರಾರು ಮೀನುಗಳು ಸತ್ತು ಬಿದ್ದಿವೆ.

ಮೀನುಗಳ ಸಾವಿಗೆ ಇನ್ನೂ ಸರಿಯಾದ ಕಾರಣ ತಿಳಿದು ಬಂದಿಲ್ಲ. ಸ್ಥಳೀಯ ನಿವಾಸಿಗಳು, ಪರಿಸರವಾದಿಗಳ ಪ್ರಕಾರ, ಕೆರೆಗೆ ವಿಷಯುಕ್ತ, ಮಾಲಿನ್ಯಯುಕ್ತ ಪದಾರ್ಥಗಳು ಸೇರ್ಪಡೆಯಾಗುತ್ತಿವೆ. [ಬೆಂಗಳೂರು ಕೆರೆಗಳ ಸ್ಥಿತಿ ನೋಡಿ]

Bengaluru: Thousands of fish found dead in Ulsoor lake

ಪ್ರವಾಸಿಗರ ನೆಚ್ಚಿನ ಬೋಟಿಂಗ್, ವಿಹಾರ ತಾಣವಾಗಿದ್ದ ಹಲಸೂರಿನ ಕೆರೆ ಈಗ ಮಾಲಿನ್ಯಮಯವಾಗಿ ತನ್ನ ಅಂದ ಕಳೆದುಕೊಳ್ಳುತ್ತಿದೆ.


ಬೆಂಗಳೂರಿನ ಜಲಮಂಡಳಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೇರ ಹೊನೆ ಹೊರಬೇಕಾಗಿದೆ ಎಂದು ಸ್ಥಳೀಯ ನಿವಾಸಿ ಪುರುಷೋತ್ತಮ್ ಅವರು ಹೇಳಿದ್ದಾರೆ.

ಬೆಳ್ಳಂದೂರು ಕೆರೆ ದುರ್ನಾತ: ಬೆಳ್ಳಂದೂರು, ಯಮಲೂರು ಕೆರೆಯ ನೊರೆ ಹಾಗೂ ದುರ್ನಾತ ಹೊರಹೊಮ್ಮಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದು ನೆನಪಿರಬಹುದು. ಡಿಟರ್ಜೆಂಟ್ ಯುಕ್ತ ನೀರು ಕೆರೆಗೆ ಸೇರುತ್ತಿರುವುದು ನೊರೆಗೆ ಕಾರಣ ಎಂದು ತಿಳಿದು ಬಂದಿತ್ತು. ಕೊಳಚೆ ನೀರು ನೇರವಾಗಿ ಕೆರೆಗೆ ಸೇರುತ್ತಿತ್ತು. ಇದರ ತಡೆಗೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ನೊರೆ ಹಾಗೂ ಸುತ್ತಮುತ್ತಲಿನ ಪರಿಸರ ಹಾನಿಗೆ ಕಾರಣವಾಗಿತ್ತು.

ಈಗ ಹಲಸೂರಿನಲ್ಲೂ ಇದೇ ರೀತಿ ಸಮಸ್ಯೆ ಕಾಡುತ್ತಿದೆ. ಕಳೆದ ಎರಡು ವರ್ಷಗಳಿಂದ ಚರಂಡಿಯಿಂದ ಕಲುಷಿತ ನೀರು ನೇರವಾಗಿ ಕೆರೆಗೆ ಸೇರುತ್ತಿದೆ. ಹೀಗಾಗಿ ಆಮ್ಲಜನಕ ಕೊರತೆಯಿಂದ ಮೀನುಗಳು ಸಾವನ್ನಪ್ಪಿವೆ ಎಂದು ಪರಿಸರವಾದಿಗಳು ಹೇಳಿದ್ದಾರೆ.

English summary
Thousand of dead fish washed ashore of Ulsoor Lake due to rising water pollution on Monday, March 7 in Bengaluru. It seems Bangalore Water Supply and Sewerage Board(BWSSB) and Brahut Bengaluru Mahanagar Palike (BBMP) failed to clean up the badly polluted lake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X