ಸಾವಿರಾರು ಮೀನು ಸಾವು: ಹೆಬ್ಬಾಳ ಕೆರೆಗೂ ಮಾಲಿನ್ಯದ ಕಳಂಕ?

Written By:
Subscribe to Oneindia Kannada

ಬೆಂಗಳೂರು, ಮೇ. 30: ಬೆಂಗಳೂರಿನ ಹೆಬ್ಬಾಳದ ಕೆರೆಯಲ್ಲಿ ಸಾವಿರಾರು ಮೀನುಗಳು ಮೃತಪಟ್ಟಿವೆ. ಸತ್ತು ನೀರಿನ ಮೆಲೆ ತೇಲುತ್ತಿದ್ದ ಮೀನುಗಳನ್ನು ಆಡಳಿತ ತೆರವು ಮಾಡಿದೆ. ಕಳೆದ ತಿಂಗಳು ಹಲಸೂರಿನ ಕೆರೆಯ ದಂಡೆಯಲ್ಲಿ ಸಾವಿರಾರು ಮೀನುಗಳು ಸತ್ತು ಬಿದ್ದಿದ್ದವು.

ಮನುಷ್ಯರ ದುರಾಸೆಯ ಮಾಲಿನ್ಯಕ್ಕೆ ಜಲಚರಗಳು ಬಲಿಯಾಗುತ್ತಲೇ ಇವೆ. ಭಾನುವಾರ ಮತ್ತು ಸೋಮವಾರ ಕೆರೆ ದಂಡೆಯಲ್ಲಿ ಸಾವಿರಾರು ಮೀನುಗಳು ಸತ್ತು ಬಿದ್ದಿದ್ದವು.[ಹಲಸೂರು ಕೆರೆ ಮಾಲಿನ್ಯಕ್ಕೆ ಬಲಿಯಾದ ಸಾವಿರಾರು ಮೀನುಗಳು]

lake

ನಗರದಲ್ಲಿ ಮಳೆಯಾಗುತ್ತಿದ್ದು ಕೆರೆಗೆ ಕಲುಷಿತ ನೀರು ಸೇರ್ಪಡೆಯಾಗುವುದು ಹೆಚ್ಚಿದೆ. ಭಾನುವಾರವೇ ಮೀನುಗಳು ಸತ್ತಿದ್ದವು. ಆದರೆ ಅದು ಸೋಮವಾರ ಜನರ ಗಮನಕ್ಕೆ ಬಂದಿದೆ.[ಬೆಂಗಳೂರು: ಬೆಳ್ಳಂದೂರು ಕರೆ ಮತ್ತೆ ವಿಷದ ಒಡಲು]

ಹೆಬ್ಬಾಳ ಕೆರೆ 150 ಎಕರೆ ವಿಸ್ತಾರವಾಗಿದೆ. ಪಕ್ಷಿ ವೀಕ್ಷಣೆ ಕಾರಣಕ್ಕೆ ಪ್ರವಾಸಿಗರು ಸಹ ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಚರಂಡಿ ನೀರು ಮತ್ತು ರಾಸಾಯನಿಕಗಳು ಕೆರೆಗೆ ಹರಿದು ಬಂದಿದ್ದು ಜಲಚರಗಳು ಸಾವನ್ನಪ್ಪಿವೆ.

ಬೆಂಗಳೂರು ಕೆರೆಗಳ ಮಾಲಿನ್ಯದ ಕತೆ ಹೊಸದೇನಲ್ಲ. ವಿಷದ ಒಡಲಾಗಿ ನೊರೆ ಹರಿಸುವ ಬೆಳ್ಳಂದೂರು ಕೆರೆ, ಕಲುಷಿತಗೊಂಡಿರುವ ಜೆಪಿ ನಗರದ ಕೆರೆ, ಹಲಸೂರು ಕೆರೆ ಸಾಲಿಗೆ ಇದೀಗ ಹೆಬ್ಬಾಳ ಕೆರೆಯೂ ಸೇರಿದೆ. ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ಇದೆಲ್ಲದರ ಪರಿಹಾರಕ್ಕೆ ನೈಜ ಕಾಳಜಿ ಪ್ರದರ್ಶನ ಮಾಡುವುದು ಯಾವ ಕಾಲಕ್ಕೋ??

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hundreds of dead fish were seen floating on Hebbal Lake on Sunday. By Monday, May 30, though most of the dead fish were cleared off and a few were seen floating on the lake.
Please Wait while comments are loading...