ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಸೈಬರ್ ಕೆಫೆಯಲ್ಲಿ 10ರೂ.ಗಾಗಿ ನಡೆಯಿತು ಟೆಕ್ಕಿಯ ಹತ್ಯೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 12: 10 ರೂಪಾಯಿ ವಿಚಾರಕ್ಕೆ ಸೈಬರ್ ಕೆಫೆ ನೌಕರ ಸಾಫ್ಟ್ ವೇರ್ ಎಂಜಿನಿಯರ್ ನನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಗಿರಿನಗರದ ನಿವಾಸಿ ಗುರುಪ್ರಶಾಂತ್ (31) ಕೊಲೆಯಾದ ವ್ಯಕ್ತಿ, ಸೈಬರ್ ಕೆಫೆ ನೌಕರ ಆರೋಪಿ ಕಾರ್ತಿಕ್ ನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಗುರುಪ್ರಶಾಂತ್ ಪತ್ನಿ ಮಮತಾ, ತ

ಬೆಂಗಳೂರಲ್ಲಿ ಟೆಕ್ಕಿ ವಿಜಯಲಕ್ಷ್ಮೀ ಹತ್ಯೆ, ದೆಹಲಿಯಲ್ಲಿ ಆರೋಪಿ ಬಂಧನಬೆಂಗಳೂರಲ್ಲಿ ಟೆಕ್ಕಿ ವಿಜಯಲಕ್ಷ್ಮೀ ಹತ್ಯೆ, ದೆಹಲಿಯಲ್ಲಿ ಆರೋಪಿ ಬಂಧನ

ಸೆಪ್ಟೆಂಬರ್ 6 ರಂದು ರಾತ್ರಿ ರೆಸ್ಯೂಮ್ ಪ್ರಿಂಟ್ ಪಡೆಯಲು ಸೈಬರ್ ಕೆಫೆಗೆ ಹೋಗಿದ್ದು, ಇ-ಮೇಲ್ ನಲ್ಲಿದ್ದ ರೆಸ್ಯೂಮ್ ಕಲರ್ ಪ್ರಿಂಟ್ ಕೊಡುವಂತೆ ಕೇಳಿದ್ದಾರೆ. ಈ ವೇಳೆ ಕಾರ್ತಿಕ್, ಕಪ್ಪು ಮತ್ತು ಬಿಳುಪಿನ ಪ್ರಿಂಟ್ ಕೊಟ್ಟು 10 ರೂ ಕೇಳಿದ್ದಾನೆ, ಕಪ್ಪು ಮತ್ತು ಬಿಳುಪಿನ ಕಲರ್ ಪ್ರಿಂಟ್ ಗೂ ವ್ಯತ್ಯಾಸ ಇಲ್ಲವಾ ಎಂದು ಗುರು ಪ್ರಶಾಂತ್ ಕೇಳಿದ್ದಾರೆ.

Bengaluru: Techie stabbed to death in cybercafe

ಅದಕ್ಕೆ ಅವರಿಬ್ಬರ ಮಧ್ಯೆ ಕಾದಾಟ ಉಂಟಾಗಿದೆ. ಸಂದರ್ಭದಲ್ಲಿ ಕೋಪಗೊಂಡ ಗುರುಪ್ರಶಾಂತ್ ಕಾರ್ತಿಕ್ ನ ಕೊರಳ ಪಟ್ಟಿ ಹಿಡಿದು ಯಾರ ಬಳಿ ಮಾತಾಡ್ತಾ ಇದ್ದೀಯ ಎಂದಿದ್ದಾರೆ ಅಷ್ಟಕ್ಕೇ ಪಕ್ಕದಲ್ಲಿದ್ದ ಸ್ಕ್ರೂ ಡ್ರೈವರ್ ತೆಗೆದುಕೊಂಡು ಗುರು ಪ್ರಶಾಂತ್ ಎಡಕಿವಿಗೆ ಚುಚ್ಚಿ ಹಲ್ಲೆ ನಡೆಸಿದ್ದಾನೆ.

ಬೆಂಗಳೂರಿನಲ್ಲಿ ಮಹಿಳಾ ಟೆಕ್ಕಿ ಉಸಿರುಗಟ್ಟಿಸಿ ಹತ್ಯೆಬೆಂಗಳೂರಿನಲ್ಲಿ ಮಹಿಳಾ ಟೆಕ್ಕಿ ಉಸಿರುಗಟ್ಟಿಸಿ ಹತ್ಯೆ

ಗುರುಪ್ರಸಾದ್ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ, ತೀವ್ರ ರಕ್ತಸ್ರಾವ ಉಂಟಾಗಿದೆ. ಅಲ್ಲೇ ಇದ್ದ ಜನರು ಆಟೋದಲ್ಲಿ ಹತ್ತಿರದ ರಾಧಾಕೃಷ್ಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಕ್ರೂ ಡ್ರೈವರ್ ಮೆದುಳಿಗೆ ತಾಗಿ ತೀವ್ರ ರಕ್ತ ಸ್ರಾವ ಉಂಟಾದ ಹಿನ್ನೆಲೆಯಲ್ಲಿ ಅವರು ಕೋಮಾಗೆ ಜಾರಿದ್ದರು.ಚಿಕಿತ್ಸೆ ಫಲಿಸದೆ ಮಂಗಳವಾರ ಅಸು ನೀಗಿದ್ದಾರೆ.

ಆದರೆ ಇನ್ನೊಂದು ದುರಾದೃಷ್ಟವೆಂದರೆ ಆತ ಮೃತಪಟ್ಟ ದಿನವೇ ಆತನ ಪತ್ನಿ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಗುರುಪ್ರಸಾದ್ ಸಂಬಂಧಿ ತಿಳಿಸಿದ್ದಾರೆ.

English summary
A 31-year-old software engineer, who walked into a South Bengaluru cybercafe on septmber 6 to get colour print of his resume and was stabbed in the left ear after an altercation with a staffer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X