ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂಜಿನಿಯರ್ ಮದುಮಗನಂತೆ ಕುದುರೆ ಏರಿ ಬಂದಿದ್ದು ಏಕೆ ಗೊತ್ತಾ?

By Nayana
|
Google Oneindia Kannada News

ಬೆಂಗಳೂರು, ಜೂನ್ 16: ದಿನದಿಂದ ದಿನ್ಕಕೆ ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ಮಿತಿ ಮೀರುತ್ತಿದೆ, ಹೀಗಿರುವಾಗ ಟ್ರಾಫಿಕ್‌ನಿಂದ ಬೇಸತ್ತು ಸಾಫ್ಟ್‌ವೇರ್‌ ಎಂಜಿನಿಯರ್‌ ಒಬ್ಬರು ಕುದುರೆ ಏರಿ ಕೆಲಸಕ್ಕೆ ತೆರಳಿ ಎಲ್ಲರ ಗಮನ ಸೆಳೆದಿದ್ದಾರೆ.

ಎಂಜಿನಿಯರ್ ರೂಪೇಶ್‌ ಕುಮಾರ್ ಅವರು ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿದ್ದರು, ತಮ್ಮ ಕೊನೆಯ ಕೆಲಸದ ದಿನ ಕುದುರೆ ಏರಿಎ ಆಫೀಸಿಗೆ ಹಾಜರಾದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ. ರಾಜಸ್ತಾನ ಮೂಲದ ಅವರು ದೊಮ್ಮಲೂರಿನ ರಿಂಗ್ ರಸ್ತೆಯಲ್ಲಿರುವ ಸಾಫ್ಟ್‌ವೇರ್ ಕಂಪನಿಯಲ್ಲಿ ಕಳೆದ 8 ವರ್ಷಗಳಿಂದ ಸಾಫ್ಟ್‌ವೇರ್ ಎಂಜಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.

Bengaluru Techie Rides Horse To Work On Last Day To Protest Traffic

ಬೆಂಗಳೂರು ಟ್ರಾಫಿಕ್ ನಿರ್ವಹಣೆ ಶಾಲಾ ಪಠ್ಯದಲ್ಲಿ ಅಳವಡಿಕೆ ಬೆಂಗಳೂರು ಟ್ರಾಫಿಕ್ ನಿರ್ವಹಣೆ ಶಾಲಾ ಪಠ್ಯದಲ್ಲಿ ಅಳವಡಿಕೆ

ಸ್ವಂತ ಉದ್ದಿಮೆಯನ್ನು ಆರಂಭಿಸುವ ಉದ್ದೇಶದಿಂದ ರಾಜಿನಾಮೆ ನೀಡಿದ್ದ ಅವರು ರಿಂಗ್ ರಸ್ತೆಯ ಎಂಬೆಸ್ಸಿ ಗಾಲ್ಫ್‌ ಲಿಂಕ್‌ನಲ್ಲಿರುವ ಕಚೇರಿಗೆ ತೆರಳಲು ಕುದುರೆಯನ್ನು ಆಯ್ಕೆ ಮಾಡಿಕೊಂಡರು. ಕುದುರೆ ಏರಿ ಮದುಮಗನಂತೆ ಅವರು ಕಚೇರಿಗೆ ಬಂದ ಕೂಡಲೇ ಉದ್ಯೋಗಿಗಳಿಗೆ ಆಶ್ಚರ್ಯವೋ ಆಶ್ಚರ್ಯ, ಅವರ ಜತೆಗೆ ಎಲ್ಲರೂ ಸೆಲ್ಫೀ ಕ್ಲಿಕ್ಕಿಸಿಕೊಂಡರು.

Bengaluru Techie Rides Horse To Work On Last Day To Protest Traffic

ನನಗೆ ದೇಶದ ಬಗ್ಗೆ ಕಾಳಜಿ ಇದೆ, ಸಾಕಷ್ಟು ಟೆಕ್ಕಿಗಳು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಹಗಲೂ ರಾತ್ರಿ ದುಡಿಯುತ್ತಾರೆ, ಆ ಕಂಪನಿಯನ್ನು ಶ್ರೀಮಂತಗೊಳಿಸುತ್ತಾರೆ. ಅದರ ಬದಲು ಮನಸ್ಸಿನ ಒಂದೇ ಮನಸ್ಥಿತಿಯುಳ್ಳ ಎಂಜಿನಿಯರ್‌ಗಳು ಒಂದೆಡೆ ಕುಳಿತು ತಮ್ಮ ಉದ್ದಿಮೆಯನ್ನು ಆರಂಭಿಸುವುದು ಒಳ್ಳೆಯದು ಎಂದು ಹೇಳಿದ್ದಾರೆ.

English summary
Most people try to make their last day of work memorable, but this Bengaluru techie has managed to make his last working day go viral. Social media is flooded with pictures of a software engineer riding a horse to work, dressed in formals with a laptop bag slung around his shoulder.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X