ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಪಿಜಿಗೆ ನುಗ್ಗಿ ಐಟಿ ಉದ್ಯೋಗಿ ಮೇಲೆ ರೇಪ್

|
Google Oneindia Kannada News

ಬೆಂಗಳೂರು, ಆಗಸ್ಟ್, 31: ಕಳ್ಳತನ ಮಾಡಲೆಂದು ಪಿಜಿಯೊಂದಕ್ಕೆ ನುಗ್ಗಿದ ದುಷ್ಕರ್ಮಿ ಅಲ್ಲಿಯೇ ಇದ್ದ ಐಟಿ ಉದ್ಯೋಗಿಯೊಬ್ಬರ ಮೇಲೆ ಅತ್ಯಾಚಾರ ಎಸಗಿ ನಾಪತ್ತೆಯಾಗಿದ್ದಾನೆ.

ಪರಪ್ಪನ ಅಗ್ರಹಾರ ಠಾಣೆಯ ವೆಂಕಟರೆಡ್ಡಿ ಲೇಔಟ್ ವ್ಯಾಪ್ತಿಯ ಪಿಜಿಯೊಂದರಲ್ಲಿ ಪ್ರಕರಣ ನಡೆದಿದ್ದು ಸಿಲಿಕಾನ್ ಸಿಟಿಯಲ್ಲಿನ ಮಹಿಳಾ ಸುರಕ್ಷತೆ ಬಗ್ಗೆ ಮತ್ತೆ ಪ್ರಶ್ನೆ ಉದ್ಭವವಾಗಿದೆ.[ಮಲಗಿದ್ದ ಮಹಿಳೆ ಕೆನ್ನೆ ಕಚ್ಚಿ ಪರಾರಿಯಾದವ ಸಿಕ್ಕಿಬಿದ್ದ]

Bengaluru: Techie raped in her PG accommodation

ಆಗಸ್ಟ್ 26 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಗಸ್ಟ್ 26 ರ ಮಧ್ಯಾಹ್ನ ಪಿಜಿಗೆ ನುಗ್ಗಿದ ಕಳ್ಳ ಲ್ಯಾಪ್ ಟಾಪ್, ಮೊಬೈಲ್ ಗಳನ್ನು ದೋಚಲು ಮುಂದಾಗಿದ್ದಾನೆ. ಪಿಜಿಯಲ್ಲಿ ಏನೂ ಸಿಗದೆ ಇದ್ದಾಗ ಕಚೇರಿಗೆ ತೆರಳದೆ ಅಲ್ಲಿಯೇ ಇದ್ದ ಐಟಿ ಉದ್ಯೋಗಿ ಮೇಲೆ ಅತ್ಯಚಾರ ಎಸಗಿದ್ದಾನೆ.[ಸಿಲಿಕಾನ್ ಸಿಟಿ ಬೆಂಗಳೂರು ಪುರುಷರಿಗೂ ಸೇಫ್ ಅಲ್ಲ]

ಆಗಸ್ಟ್ 26ರ ಮಧ್ಯಾಹ್ನ ಈ ಪ್ರಕರಣ ನಡೆದಿದ್ದು ಬೆಂಗಳೂರಿನ ಪಿಜಿಗಳಲ್ಲಿನ ಮಹಿಳೆಯರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯನ್ನು ಘಟನೆ ಹುಟ್ಟುಹಾಕಿದೆ. ಎಚ್ ಎಎಲ್ ವ್ಯಾಪ್ತಿಯಲ್ಲಿ ಅಪಾರ್ಟ್ ಮೆಂಟ್ ನಲ್ಲಿ ಮಲಗಿದ್ದ ಮಹಿಳೆಯ ಮೇಲೆ ದೌರ್ಜನ್ಯ ಎಸಗಿ ಪರಾರಿಯಾದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

English summary
An unidentified person gained entry into the room and was trying to steal things when the woman woke up. He allegedly overpowered her and raped her. The woman whom is working with a leading IT company in the city, was raped at her paying guest accommodation in Parappana Agrahara Police station limits Venkatareddy Layout.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X