ಮುಷ್ಕರ ಹಿಂದಕ್ಕೆ: ನಿಟ್ಟುಸಿರು ಬಿಟ್ಟ ವಾಹನ ಸವಾರರು

Subscribe to Oneindia Kannada

ಬೆಂಗಳೂರು, ಏಪ್ರಿಲ್, 5: ವಾಹನ ಸವಾರರು ಸದ್ಯಕ್ಕೆ ನಿಟ್ಟುಸಿರು ಬಿಡಬಹುದು. ವಿವಿಧ ಸೌಕರ್ಯಗಳಿಗೆ ಒತ್ತಾಯಿಸಿ ತೈಲ ಸಾಗಣೆ ಟ್ಯಾಂಕರ್​ ಚಾಲಕರು ಮತ್ತು ಕ್ಲೀನರ್​ಗಳು ಹಮ್ಮಿಕೊಂಡಿದ್ದ ಮುಷ್ಕರ ಕೈಬಿಟ್ಟಿದ್ದಾರೆ.

ಎಂದಿನಂತೆ ಮಹಾನಗರಕ್ಕೆ ಟ್ಯಾಂಕರ್ ಗಳ ಮೂಲಕ ಅಗತ್ಯ ಇಂಧನ ಸರಬರಾಜಾಗಲಿದೆ. ಚಾಲಕರು ಹಾಗೂ ಕ್ಲೀನರ್ ಸಂಘದ ಜೊತೆ ಐಒಸಿ ಅಧಿಕಾರಿಗಳು ಮತ್ತು ಪೆಟ್ರೋಲ್ ಬಂಕ್ ಮಾಲೀಕರು ನಡೆಸಿದ ಸಂಧಾನ ಯಶಸ್ವಿಯಾಗಿದ್ದು ಭರವಸೆ ನಂತರ ಧರಣಿಯನ್ನು ಹಿಂದಕ್ಕೆ ಪಡೆಯಲಾಗಿದೆ.[ಬೆಂಗಳೂರಿಗೆ ತೈಲ ಸಾಗಾಟ ಬಂದ್ ಮಾಡಿದ್ದು ಯಾಕೆ?]

petrol

ಚಾಲಕರು ಹಾಗೂ ಕ್ಲೀನರ್ ಗಳ ಸಮಸ್ಯೆಗಳ ಪರಿಹಾರಕ್ಕಾಗಿ ಮೂರು ತಿಂಗಳಲ್ಲಿ ಸಮಿತಿ ರಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು. ಸಮಿತಿ ಮುಂದೆ ಸಮಸ್ಯೆಯನ್ನು ಚಾಲಕರು ತೆರೆದಿಡಬಹುದು ಎಂದು ತಿಳಿಸಲಾಗಿದೆ.

ದೇವನಹಳ್ಳಿ ಮತ್ತು ಹೊಸಕೋಟೆಯಲ್ಲಿರುವ ಪೆಟ್ರೋಲ್ ಟ್ಯಾಂಕರ್ ಟರ್ವಿುನಲ್​ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ನೂರಾರು ಚಾಲಕರು, ಕ್ಲೀನರ್​ಗಳು, ಟ್ಯಾಂಕರ್ ಗಳನ್ನು ಪ್ರತಿಭಟನೆ ಆರಂಭಿಸಿದ್ದು ರಾಜಧಾನಿಯ ನಾಗರಿಕರಿಗೆ ಬಿಸಿ ಮುಟ್ಟಿಸಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After the meeting of Indian Oil Corporation officers petrol tanker drivers withdraw their protest on Tuesday. The petrol tanker drivers and cleaners association has been on strike since Monday morning.
Please Wait while comments are loading...