ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ಕಿಡ್ಸ್ ಕೆಂಪ್ ಶಾಶ್ವತವಾಗಿ ಬಂದ್

Posted By: Nayana
Subscribe to Oneindia Kannada

ಬೆಂಗಳೂರು, ನವೆಂಬರ್ 11 : ದೇಶಾದ್ಯಂತ ನೆಚ್ಚಿನ ಗ್ರಾಹಕರನ್ನು ಹೊಂದಿರುವ ಬೆಂಗಳೂರಿನ ಐಕಾನಿಕ್ ಆದಂತಹ ಬಿಗ್ ಕಿಡ್ಸ್ ಕೆಂಪ್ ಬಟ್ಟೆ ಅಂಗಡಿ ಇನ್ನು ನೆನಪು ಮಾತ್ರ. ಕಿಡ್ಸ್ ಕೆಂಪ್ ಬೆಂಗಳೂರಿನ ಎಂ.ಜಿ. ರಸ್ತೆಯ ಪ್ರಮುಖ ಲ್ಯಾಂಡ್ ಮಾರ್ಕ್ ಕೂಡ ಆಗಿತ್ತು. ಮಕ್ಕಳು ಬಯಸುವ ವಿಭಿನ್ನವಾದ ಉಡುಪುಗಳ ಜತೆಗೆ ಇಡೀ ಕುಟುಂಬದವರಿಗೆ ಬೇಕಾದ ರೀತಿಯ ಬಟ್ಟೆಗಳೂ ಲಭ್ಯವಿದ್ದವು.

ಜಿಎಸ್ ಟಿ ಎಫೆಕ್ಟ್: ಬಿಗ್ ಬಜಾರ್ ಮಾಲ್ ನಲ್ಲಿ ಮಧ್ಯರಾತ್ರಿ ಶಾಪಿಂಗ್!

ಕಿಡ್ಸ್ ಕೆಂಪ್ ಎಂದರೆ ಬೆಂಗಳೂರಿಗರಿಗೆ ಅಚ್ಚುಮೆಚ್ಚು ಪ್ರತಿ ವಾರವೂ ಕೂಡ ಬಟ್ಟೆ ಕೊಂಡುಕೊಳ್ಳಲು ಬೆಂಗಳೂರು ಸುತ್ತಮುತ್ತಲಿಂದ ಜನರು ಬರುತ್ತಿದ್ದರು.ಆದರೆ ಅಂಗಡಿಯನ್ನು ಕಾರಣಾಂತರಗಳಿಂದ ಶನಿವಾರ (ನ.11)ರಂದು ಮುಚ್ಚಲಾಗುತ್ತಿದೆ. ಹಾಗಾಗಿ ಎಲ್ಲ ಉಡುಪುಗಳ ಮೇಲೆ ಶೇ.೭೫ರವರೆಗೆ ರಿಯಾಯಿತಿ ನೀಡಲಾಗುತ್ತಿದೆ. 1985ರಲ್ಲಿ ಕೆಜಿ ರಸ್ತೆಯಲ್ಲಿ ಸಣ್ಣದಾಗಿ ಸ್ಥಾಪನೆಗೊಂಡಿದ್ದ ಕಿಡ್ಸ್ ಕೆಂಪ್ 1990ರಲ್ಲಿ ಎಂಜಿ ರಸ್ತೆಗೆ ಸ್ಥಳಾಂತರಿಸಲಾಯಿತು.

Bengaluru super store Big Kids kemp shuts shop

ಬೇರೆ ಬಟ್ಟೆ ಅಂಗಡಿಗಳಿಗೆ ಹೋಲಿಸಿದರೆ ಕಿಡ್ಸ್ ಕೆಂಪ್ ನಲ್ಲಿ ಸಾಕಷ್ಟು ಆಫರ್ ಗಳು ಎಂದಿಗೂ ಲಭ್ಯವಿರುತ್ತಿದ್ದವು. ಕೆಂಪ್ನಲ್ಲಿದ್ದ ಮಿಕ್ಕಿ ಮೌಸ್, ಬಸ್‌, ಕಾರುಗಳು ಹೀಗೆ ಕಾರ್ಟೂನ್ ಚಿತ್ರಗಳನ್ನು ಹೊಂದಿರುವಂತಹ ಬಟ್ಟೆಗಳು ಬಹುಬೇಗ ಮಕ್ಕಳನ್ನು ಆಕರ್ಷಿತರನ್ನಾಗಿಸುತ್ತಿತ್ತು.

ಬೆಂಗಳೂರಿನಲ್ಲಿ ಎಷ್ಟೇ ದೊಡ್ಡ ಮಾಲ್ಗಳು ತಲೆ ಎತ್ತಿದ್ದರೂ ಕೂಡ ಕಿಡ್ಸ್ ಕೆಂಪ್ ಗೆ ಇದರಿಂದ ಯಾವುದೇ ನಷ್ಟವಾಗಿಲ್ಲ. ಅಂಗಡಿ ಪ್ರಾರಂಭವಾಗಿ ಮುಚ್ಚುವ ಸಂದರ್ಭದವರೆಗೂ ತನ್ನ ಹೆಸರನ್ನು ಉಳಿಸಿಕೊಂಡಿದೆ. ನೌಕರರು ಹಾಗೂ ಮಾಲಿಕರ ಮಧ್ಯೆ ಸಂಬಂಧ ಉತ್ತಮವಾಗಿದೆ.
ಕಳೆದ ತಿಂಗಳು ಕಿಡ್ಸ್ ಕೆಂಪ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲರಿಗೂ ನೊಟೀಸ್ ನೀಡಲಾಗಿತ್ತು ಇದಾದ ಬಳಿಕ ಕೆಲಸಗಾರರಿಗೆ ಮೋಸವಾಗಬಾರದು ಎಂದು ಆಲೋಚಿಸಿ, ಎಚ್‌ಎಎಲ್ ಹಳೆಯ ವಿಮಾನ ರಸ್ತೆಯಲ್ಲಿರುವ ಕೆಂಪ್ ಫೋರ್ಟ್‌ ಮಾಲ್ನಲ್ಲಿ ಕಿಡ್ಸ್ ಕೆಂಪ್ನಲ್ಲಿ ಕೆಲಸಮಾಡುತ್ತಿದ್ದ ಪ್ರತಿಯೊಬ್ಬ ನೌಕರನಿಗೂ ಕೆಲಸವನ್ನು ಕಲ್ಪಿಸಲಾಗಿದೆ.

ವರನಟ ಡಾ. ರಾಜ್‌ಕುಮಾರ್‌ ಕುಟುಂಬದವರೂ ಸೇರಿದಂತೆ ಪ್ರಸಿದ್ಧ ನಟ-ನಟಿಯರೂ ಕೂಡ ಭೇಟಿ ನೀಡುತ್ತಿದ್ದರು. ಕಾರಣಾಂತರಗಳಿಂದ ನಾಲ್ಕು ವರ್ಷದ ಹಿಂದೆಯೇ ಅಂಗಡಿಯನ್ನು ಮುಚ್ಚುಲು ನಿರ್ಧರಿಸಿದ್ದರು ಕೂಡ ಸಾಧ್ಯವಾಗಿರಲಿಲ್ಲ. ಆದರೆ ಈಗ ದೃಢ ನಿರ್ಧಾರ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru super store Big Kids kemp shuts shop,super store with iconic mascots dressed as cartoon characters was mecca for children.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ