ನಾಸಾ ಸಂಸ್ಥೆ ಸ್ಪರ್ಧೆ ಗೆದ್ದ ಬೆಂಗಳೂರಿನ ವಿದ್ಯಾರ್ಥಿನಿ

Posted By:
Subscribe to Oneindia Kannada

ಬೆಂಗಳೂರು,ಮಾರ್ಚ್ 20: ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಸಂಸ್ಥೆಯು ಏರ್ಪಡಿಸಿದ್ದ ಬಾಹ್ಯಾಕಾಶ ವಸಾಹತು (ಸ್ಪೇಸ್ ಸೆಟಲ್ಮೆಂಟ್) ಸ್ವರ್ಧೆಯಲ್ಲಿ ಬೆಂಗಳೂರಿನ ವಿದ್ಯಾರ್ಥಿನಿ ಮೊದಲ ಸ್ಥಾಪ ಪಡೆದುಕೊಂಡಿದ್ದಾರೆ.

ನಗರದ ವೈಟ್ ಫೀಲ್ಡ್ ನಲ್ಲಿರುವ ನಾರಾಯಣ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನ ಒಲಂಪಿಯಾಡ್ ಶಾಲೆಯ ವಿದ್ಯಾರ್ಥಿನಿ ನಿಧಿ ಮಯಾಲಿಕಾ ಮಂಡಿಸಿದ 'ಸೈಕತಮ್' ಎಂಬ ಯೋಜನೆಗೆ ಮೊದಲ ಬಹುಮಾನ ಸಿಕ್ಕಿದೆ.

Nidhi Mayalika

ನಾಸಾ ಸಂಸ್ಥೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಸಿದ ಬಾಹ್ಯಾಕಾಶ ವಸಾಹತು ಸ್ಪರ್ಧೆಯಲ್ಲಿ ದೇಶ ವಿದೇಶಗಳ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ನಿಧಿ ಮಯಾಲಿಕಾ ಮಂಡಿಸಿದ 'ಸೈಕತಮ್' ಎಂಬ ಯೋಜನೆಗೆ ಮೊದಲ ಸ್ಥಾನ ನೀಡಿದ ನಾಸಾ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಾಹ್ಯಾಕಾಶ ವಸಾಹತು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದ್ದಕ್ಕಾಗಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ನಿಧಿ ಮಯಾಲಿಕಾಗೆ ಸತತ ಅಭ್ಯಾಸ ನೀಡಲಾಯಿತು. ಯೋಜನಾ ಕಾರ್ಯದಲ್ಲಿ ಸಾಕಷ್ಟು ನೆರವನ್ನು ಉಪನ್ಯಾಸಕರು ನೀಡಿದ್ದರು. ನಿಧಿ ಮಯಾಲಿಕಾ ಮಾಡಿದ ಸಾಧನೆಗೆ ನಾರಾಯಣ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕಿ ಡಾ.ಪಿ.ಸಿಂಧೂರ ನಾರಾಯಣ ಹಾಗೂ ಕಾರ್ಯಕಾರಿ ನಿರ್ದೇಶಕ ಕೆ.ಪುನೀತ್ ಅವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

 Narayana Olympiad School

ಚಿತ್ರದಲ್ಲಿ : ನಾರಾಯಣ ಒಲಂಪಿಯಾಡ್ ಶಾಲೆಯ ವಿದ್ಯಾರ್ಥಿನಿ ನಿಧಿ ಮಯಾಲಿಕಾ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನಾರಾಯಣ ಗ್ರೂಪ್ ನ ಕಾರ್ಯಕಾರಿ ನಿರ್ದೇಶಕ ಕೆ.ಪುನೀತ್ ಭೌತಶಾಸ್ತ್ರ ಉಪನ್ಯಾಸಕ ಚಂದ್ರಶೇಖರ್ ಇತರರು ವಿದ್ಯಾರ್ಥಿನಿಗೆ ಅಭಿನಂದಿಸಿದ್ದಾರೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru Student win NASA Space Settlement Contest 2016. 6th std student Nidhi Mayalika of Narayana Olympiad Schoolhas presented a scheme called 'Saikatam' which got first prize.
Please Wait while comments are loading...