ಚಾಲುಕ್ಯ ವೃತ್ತ-ಹೆಬ್ಬಾಳ ಉಕ್ಕಿನ ಸೇತುವೆ ಯೋಜನೆಗೆ ಅಸ್ತು

Posted By:
Subscribe to Oneindia Kannada

ಬೆಂಗಳೂರು, ಜೂನ್ 17 : ಬೆಂಗಳೂರು ನಗರದಲ್ಲಿ 6.7 ಕಿ.ಮೀ.ಉದ್ದ ಉಕ್ಕಿನ ಮೇಲ್ಸೇತುವೆ ನಿರ್ಮಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿದ್ದಾರೆ. ಸುಮಾರು 1,350 ಕೋಟಿ ರೂ.ಗಳ ಯೋಜನೆ ಇದಾಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಈ ಯೋಜನೆಯನ್ನು ತಯಾರಿಸಿದೆ. ಚಾಲುಕ್ಯ ವೃತ್ತದಿಂದ ಹೆಬ್ಬಾಳ ಫ್ಲೈ ಓವರ್‌ಗೆ ಈ ಉಕ್ಕಿನ ಮೇಲ್ಸೇತುವೆ ಸಂಪರ್ಕ ಕಲ್ಪಿಸುತ್ತದೆ. ಬಿಡಿಎ ಸಭೆಯಲ್ಲಿ ಯೋಜನೆ ಬಗ್ಗೆ ಇನ್ನೊಮ್ಮೆ ಚರ್ಚಿಸಿ, ಅಂತಿಮ ಒಪ್ಪಿಗೆ ಪಡೆಯಲಾಗುತ್ತದೆ. [6 ಎಲಿವೇಟೆಡ್ ಕಾರಿಡಾರ್, ಬಿಡದಿಯಲ್ಲಿ ಸ್ಮಾರ್ಟ್ ಸಿಟಿ: ಜಾರ್ಜ್]

bda

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಡೆ ರಹಿತ ಸಂಪರ್ಕ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆ ಪೂರ್ಣಗೊಂಡರೆ ಚಾಲುಕ್ಯ ವೃತ್ತದಿಂದ ವಿಮಾನ ನಿಲ್ದಾಣಕ್ಕೆ ಮೂವತ್ತು ನಿಮಿಷಗಳಲ್ಲಿ ಪ್ರಯಾಣಿಸಬಹುದು ಎಂದು ಅಂದಾಜಿಸಲಾಗಿದೆ.[ಬೆಂಗಳೂರು ನಗರಕ್ಕೊಂದು 10 ಪಥದ ರಸ್ತೆ]

ಬಿಡಿಎ ಸಿದ್ಧಪಡಿಸಿದ ಯೋಜನೆಗೆ ಯಾವುದೇ ಬದಲಾವಣೆ ಇಲ್ಲದಂತೆ ಸಿದ್ದರಾಮಯ್ಯ ಅವರು ಒಪ್ಪಿಗೆ ಕೊಟ್ಟಿದ್ದಾರೆ. ಈ ಯೋಜನೆಗೆ ಜಾಗತಿಕ ಟೆಂಡರ್ ಕರೆಯಲಾಗಿತ್ತು. ಎಲ್‌ ಅಂಡ್ ಟಿ ಕಂಪನಿಗೆ ಯೋಜನೆಯ ಗುತ್ತಿಗೆಯನ್ನು ನೀಡುವ ಸಾಧ್ಯತೆ ಇದೆ.

ಐದು ರಸ್ತೆಗಳ ಸಂಪರ್ಕ : ಚಾಲುಕ್ಯ ವೃತ್ತದಲ್ಲಿ ಆರಂಭವಾಗುವ ಉಕ್ಕಿನ ಮೇಲ್ಸೇತುವೆ ಹೆಬ್ಬಾಳ ಫ್ಲೈ ಓವರ್‌ಗೆ ಸಂಪರ್ಕ ಕಲ್ಪಿಸುತ್ತದೆ. ಅರಮನೆ ರಸ್ತೆ, ರೇಸ್‌ ಕೋರ್ಸ್‌ ರಸ್ತೆ, ವಿಧಾನಸೌಧ, ರಾಜಭವನ ರಸ್ತೆ, ಮಿಲ್ಲರ್ಸ್ ರಸ್ತೆಯ ಸಂಪರ್ಕವನ್ನು ಇದಕ್ಕೆ ಕಲ್ಪಿಸಲಾಗುತ್ತದೆ. ಇದರಿಂದಾಗಿ ಐದು ರಸ್ತೆಗಳಿಂದ ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ಸಿಕ್ಕಂತಾಗುತ್ತದೆ.[ಟ್ರಾಫಿಕ್ ನಲ್ಲಿ ಕಾಯ್ಬೇಡಿ, ಮೇಲ್ಸೇತುವೆಯಲ್ಲಿ ಸಂಚರಿಸಿ]

flyover

ಈಗಾಗಲೇ ಹೆಬ್ಬಾಳ ಮೇಲ್ಸೇತುವೆಯನ್ನು 70 ಕೋಟಿ ವೆಚ್ಚದಲ್ಲಿ ಪುನರ್ ರೂಪಿಸಲು ಶಂಕುಸ್ಥಾಪನೆ ಮಾಡಲಾಗಿದೆ. 2025ರ ಹೊತ್ತಿಗೆ ವಿಮಾನ ನಿಲ್ದಾಣಕ್ಕೆ ಹೆಚ್ಚಾಗುವ ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka government has decided to go ahead with the 6.7-km steel flyover from Chalukya Circle to Hebbal flyover, Bengaluru. Chief Minister Siddaramaiah approved for plan prepared by Bangalore Development Authority (BDA). The project will cost Rs 1,350 crore.
Please Wait while comments are loading...