ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಕ್ಕಳ ದತ್ತು ಪಡೆಯುವಲ್ಲೂ ಬೆಂಗಳೂರು 'ಸಾಫ್ಟ್' ಮನಸು!

|
Google Oneindia Kannada News

ಬೆಂಗಳೂರು, ನವೆಂಬರ್ 26: ಮಕ್ಕಳನ್ನು ದತ್ತು ಪಡೆಯುವಲ್ಲಿ ಕೂಡ ಬೆಂಗಳೂರು ಮುಂದಿದೆ, ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ದತ್ತು ಸ್ವೀಕಾರ ಪ್ರಕ್ರಿಯೆ ನಡೆದಿದೆ.

2014ರಲ್ಲಿ ರಾಜ್ಯದಲ್ಲಿ ಕೇವಲ 77 ಮಕ್ಕಳು ದತ್ತು ಪಾಲಕರನ್ನು ಸೇರಿದ್ದರು. ಆದರೆ, ಕೇಂದರ ದತ್ತು ಸಂಪನ್ಮೂಲ ಪ್ರಾಧಿಕಾರ 2005ರಲ್ಲಿ ತಂದ ನೂತನ ದತ್ತು ಮಾರ್ಗಸೂಚಿ ರಾಜ್ಯದಲ್ಲಿ ಮಕ್ಕಳ ಭಾಗ್ಯದಿಂದ ವಂಚಿತರಾಗಿದ್ದ ದಂಪತಿಗಳಿಗೆ ವರದಾನವಾಗಿದೆ. 2018-19 ನೇ ಸಾಲಿನಲ್ಲಿ 282 ಮಕ್ಕಳು ಕೌಟುಂಬಿಕ ಪ್ರೀತಿ ಪಡೆಯಲು ಸಾಧ್ಯವಾಗಿದೆ.

20 ದಿನಗಳ ಹೆಣ್ಣು ಮಗುವನ್ನೇ ಕೊಂದ ದೂರ್ತ ತಂದೆ 20 ದಿನಗಳ ಹೆಣ್ಣು ಮಗುವನ್ನೇ ಕೊಂದ ದೂರ್ತ ತಂದೆ

ಬೆಂಗಳೂರಲ್ಲಿ 76 ಮಕ್ಕಳು ದತ್ತು ಪಾಲಕರ ಮಡಿಲು ಸೇರಿದ್ದಾರೆ, ಚಿಕ್ಕಮಗಳೂರು-38, ರಾಮನಗರ-28, ಹಾಸನ-16, ದಕ್ಷಿಣ ಕನ್ನಡ -16 ಮಂದಿಯನ್ನು ದತ್ತು ತೆಗೆದುಕೊಂಡಿದ್ದಾರೆ.

ಮಗುವನ್ನು ದತ್ತು ತೆಗೆದುಕೊಳ್ಳಲು ಅರ್ಹತೆ

ಮಗುವನ್ನು ದತ್ತು ತೆಗೆದುಕೊಳ್ಳಲು ಅರ್ಹತೆ

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಒಟ್ಟು 29 ವಿಶೇಷ ದತ್ತು ಕೇಂದ್ರಗಳಿದ್ದು, 563 ಮಕ್ಕಳು ನೆಲೆ ಕಂಡುಕೊಂಡಿದ್ದಾರೆ. ಯಾವುದೇ ಮಕ್ಕಳನ್ನು ದತ್ತು ನೀಡುವಾಗ ಸೆಂಟ್ರಲ್ ಅಡಾಪ್ಟೇಷನ್ ರಿಸೋರ್ಸ್ ಅಥಾರಿಟಿಯ ನಿಯಮ ಪಾಲಿಸಬೇಕಾಗುತ್ತದೆ.

ಪರೀಕ್ಷೆಗೆ ತೆರಳಿದ ಬಾಣಂತಿ,ಮಗುವಿನ ಆರೈಕೆಯಲ್ಲಿ ಪೊಲೀಸ್:ವೈರಲ್ ಚಿತ್ರ ಪರೀಕ್ಷೆಗೆ ತೆರಳಿದ ಬಾಣಂತಿ,ಮಗುವಿನ ಆರೈಕೆಯಲ್ಲಿ ಪೊಲೀಸ್:ವೈರಲ್ ಚಿತ್ರ

ಬಂಜೆತನ ಸಂಖ್ಯೆ ಹೆಚ್ಚಳ

ಬಂಜೆತನ ಸಂಖ್ಯೆ ಹೆಚ್ಚಳ

ಹೆಣ್ಣುಮಕ್ಕಳಲ್ಲಿ ಬಂಜೆ ತನ ಹೆಚ್ಚಾಗಿದೆ, ಬದಲಾದ ಆಹಾರ ಪದ್ಧತಿ ಇನ್ನಿತರೆ ಕಾರ್ಯಗಳಿಂದಾಗಿ ಕೂಡ ಬಂಜೆತನದ ಸಮಸ್ಯೆ ಎದುರಾಗಿದೆ. ಮಕ್ಕಳನ್ನು ಮಾಡಿಕೊಳ್ಳುವುದರಲ್ಲಿ ಸಮಯ ಮುಂದೂಡಿಕೆ, ಆಧುನಿಕ ಜೀವನ ಶೈಲಿಯೂ ಒಂದು ಕಾರಣ, ವಿಚ್ಛೇದನ, ವಿವಾಹ ವಿಳಂಬ, ನಾನಾ ಅಪಘಾತದಲ್ಲಿ ಮಕ್ಕಳನ್ನು ಕಳೆದುಕೊಂಡವರು ಕೂಡ ದತ್ತು ಪಡೆಯಲು ಮುಂದೆ ಬಂದಿದ್ದಾರೆ.

ಅಕ್ರಮ ಸಂಬಂಧದಿಂದ ಹುಟ್ಟಿದ ನವಜಾತ ಶಿಶುವನ್ನು ಕೊಂದ ಪಾಪಿ ಅಪ್ಪನ ಬಂಧನ ಅಕ್ರಮ ಸಂಬಂಧದಿಂದ ಹುಟ್ಟಿದ ನವಜಾತ ಶಿಶುವನ್ನು ಕೊಂದ ಪಾಪಿ ಅಪ್ಪನ ಬಂಧನ

ದತ್ತು ಸ್ವೀಕಾರಕ್ಕೆ ಏನೇನು ದಾಖಲೆಗಳು ಬೇಕು

ದತ್ತು ಸ್ವೀಕಾರಕ್ಕೆ ಏನೇನು ದಾಖಲೆಗಳು ಬೇಕು

ದತ್ತು ಸ್ವೀಕಾರಕ್ಕೆ ವೈದ್ಯರ ಅರ್ಹತಾ ದೃಢೀಕರಣ ಪತ್ರ, ಉದ್ಯೋಗ ಮತ್ತು ಆದಾಯ ದೃಢೀಕರಣ ಪತ್ರ, ಸಂಪತಿಗ ಜನ್ಮ ದಿನಾಂಕ ದೃಢೀಕರಣ ಪತ್ರ, ವಿವಾಹದ ಪುರಾವೆ, ಇತ್ತೀಚಿನ ಭಾವಚಿತ್ರ, ಆಸ್ತಿ ವಿವರಗಳನ್ನು ನೀಡಬೇಕು.

ಮಕ್ಕಳಿಗೆ ಏನೇನು ಅರ್ಹತೆ ಇರಬೇಕು

ಮಕ್ಕಳಿಗೆ ಏನೇನು ಅರ್ಹತೆ ಇರಬೇಕು

ಮಗುವಿನ ಪಾಲಕರು-ಪೋಷಕರು ಸ್ವ ಇಚ್ಛೆಯಿಂದ ಮಕ್ಕಳನ್ನು ನೀಡುತ್ತಿದ್ದೇವೆ ಎಂದು ಲಿಖಿತ ರೂಪದಲ್ಲಿ ಬರೆದು ಕೊಡಬೇಕು, ದತ್ತು ಕಾರ್ಯಕ್ರಮ ನಡೆಸಲು ಮನ್ನಣೆ ಪಡೆದ ಸಂಸ್ಥೆಯಲ್ಲಿ ದಾಖಲಾದ ಮಕ್ಕಳ ವಯಸ್ಸು 18ರ ಒಳಗಿರಬೇಕು. ವಾಲೆಂಟರಿ ಕೋ-ಆರ್ಡಿನೇಟಿಂಗ್ ಏಜೆನ್ಸಿಯಲ್ಲಿ ದತ್ತು ನೀಡುವ ಪಟ್ಟಿಯಲ್ಲಿ ದಾಖಲಾಗಿರುವ ಮಕ್ಕಳನ್ನು ದತ್ತು ತೆಗೆದುಕೊಳ್ಳಬಹುದಾಗಿದೆ.

English summary
Bengaluru city has been stands with first place in legal child adoption as 76 children were adopted in 2017-2018 which is highest in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X