10 ಸೆಂಮೀ ಟ್ಯೂಮರ್ ಹೊರತೆಗೆದ ಮಾರ್ಥಾಸ್ ವೈದ್ಯರು!

Subscribe to Oneindia Kannada

ಬೆಂಗಳೂರು, ಜನವರಿ, 07: ಬೆಂಗಳೂರಿನ ಮಾರ್ಥಾಸ್ ಆಸ್ಪತ್ರೆ ವೈದ್ಯರು ಸಾಧನೆ ಮಾಡಿದ್ದಾರೆ. ವ್ಯಕ್ತಿಯೊಬ್ಬರ ಕಿವಿಯ ಬಳಿ ಇದ್ದ 10 ಸೆಂಟಿ ಮೀಟರ್ ಗಾತ್ರದ ಟ್ಯುಮರ್ ಅನ್ನು ಮಾರ್ಥಾಸ್ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜನ್‌ಗಳು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.

2.30 ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಸೇಲ್ಸ್‌ಮ್ಯಾನ್ ರಮೇಶ್ (35) ಅವರನ್ನು ಮುಜುಗರ ಮತ್ತು ಅಪಾಯದಿಂದ ಪಾರು ಮಾಡಿದ್ದಾರೆ. ರಮೇಶ್ ಹುಟ್ಟಿನಿಂದಲೂ ಸಮಸ್ಯೆ ಎದುರಿಸುತ್ತಿದ್ದರು. ಅವರ ಎಡಕಿವಿಯ ಭಾಗದಲ್ಲಿ ಮಾಂಸ ಬೆಳವಣಿಗೆಯಾಗಿತ್ತು. ಹುಟ್ಟಿದಾಗಿನಿಂದಲೂ ಇದು ಹೀಗೇ ಇದ್ದು, ಇತ್ತೀಚಿನ ದಿನದಲ್ಲಿ ದೊಡ್ಡದಾಗಿ ರಮೇಶ್ ಅವರು ತೊಂದರೆ ಅನುಭವಿಸುತ್ತಿದ್ದರು.[ಈತನಿಗಿತ್ತು ನಾಲ್ಕರ ಬದಲು ಐದು ಹೃದಯ ಕವಾಟ]

bengaluru

ಎಂಆರ್‌ಐ ಮಾಡಿಸಿದಾಗ ಇದೊಂದು ಮ್ಯಾಸ್ಕ್ಯುಲಾರ್ ಟ್ಯೂಮರ್ ಎಂದು ತಿಳಿದುಬಂತು. ಆದರೆ ಶಸ್ತ್ರಚಿಕಿತ್ಸೆ ಸುಲಭವಾಗಿರಲಿಲ್ಲ. ಮುಖದ ಭಾಗದ ನರಗಳಿಗೆ ಘಾಸಿಯುಂಟಾಗಿ, ಹೆಚ್ಚು ರಕ್ತ ಹೋಗುವ ಸಾಧ್ಯತೆಗಳಿವೆ ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದರು. ಆದರೆ ಈ ಸವಾಲನ್ನು ಸ್ವೀಕರಿಸಿದ ಮಾರ್ಥಾಸ್ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜನ್‌ಗಳು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದರು.[ಭಾರತದಲ್ಲಿ ಹೃದಯ ಚಿಕಿತ್ಸೆ ಅಮೆರಿಕಕ್ಕಿಂತಲೂ ದುಬಾರಿ]

ಡಾ. ಬಿ.ರಾಹುಲ್ ಶೆಟ್ಟಿ, ಪ್ಲಾಸ್ಟಿಕ್ ಸರ್ಜನ್, ಮಾರ್ಥಾಸ್ ಆಸ್ಪತ್ರೆ ಮಾತನಾಡಿ, ಶಸ್ತ್ರಚಿಕಿತ್ಸೆಯಿಂದ ಮುಖದ ಭಾಗಕ್ಕೆ ಅಪಾಯವಾಗುವ ಸಾಧ್ಯತೆಗಳು ಹೆಚ್ಚಿತ್ತು. ಹಾಗೂ ಇದು ಅತ್ಯಂತ ಅಪಾಯವಾಗಿತ್ತು. ಕಡಿಮ ರಕ್ತ ಹೋಗುವಂತೆ ಅತ್ಯಂತ ಶೀಘ್ರದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಅಲ್ಲದೆ ಮುಖದ ಭಾಗಕ್ಕೆ ಹೋಗುವ ನರವನ್ನು ಗುರುತಿಸಿ, ಅದಕ್ಕೆ ಘಾಸಿಯಾಗದಂತೆ ಅವನ್ನು ಸ್ಟಿಮಿಲೇಟರ್ ಮೂಲಕ ಪ್ರತ್ಯೇಕಿಸಲಾಯಿತು ಎಂದು ಮಾಹಿತಿ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A group of plastic surgeons at St. Martha's Hospital in the city took up the challenge and after a two-and-a-half-hour surgery , the 15cm-long and 10-cm thick tumour was removed. Ramesh (35) diagnosed with vascular tumour behind his left ear.
Please Wait while comments are loading...