ಕಾಡುಗೋಡಿಯಲ್ಲಿ ಟೆಕ್ಕಿ ಶವ ಪತ್ತೆ, ರೂಂಮೇಟ್ಸ್ ಪರಾರಿ!

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 06: ಮುರ್ನಾಲ್ಕು ದಿನಗಳ ಹಿಂದೆ ಗೆಳಯರೊಡನೆ ತನ್ನ ಅಪಾರ್ಟ್ಮೆಂಟ್ ನಲ್ಲಿ ಕಾಕ್ ಟೈಲ್ ಪಾರ್ಟಿ ಮಾಡಿ ಖುಷಿಯಿಂದಿದ್ದ ಟೆಕ್ಕಿ ಸೋಹನ್ ಈಗ ಶವವಾಗಿ ಶನಿವಾರ ಬೆಳಗ್ಗೆ ಪತ್ತೆಯಾಗಿದ್ದಾರೆ. ಸಾಫ್ಟ್ ವೇರ್ ಇಂಜಿನಿಯರ್ ಸೋಹನ್ ಅವರ ಫ್ಲಾಟ್ ನಲ್ಲಿದ್ದ ಇತರೆ ರೂಮ್ ಮೇಟ್ ಗಳು ನಾಪತ್ತೆಯಾಗಿದ್ದಾರೆ.

ಕಾಡುಗೋಡಿಯ ಪ್ರೆಸ್ಟೀಜ್ ಶಾಂತಿನಿಕೇತನ್ ಅಪಾರ್ಟ್ಮೆಂಟ್ ನಿವಾಸಿಯಾಗಿದ್ದ ಸೋಹನ್ ಹಲ್ದಾರ್ ಅವರ ಶತ ಕೊಳತ ಸ್ಥಿತಿಯಲ್ಲಿ ಕಂಡು ಬಂದಿದೆ. ಸೋಹನ್ ಸಾವು ಮುರ್ನಾಲ್ಕು ದಿನಗಳ ಕೆಳಗೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

Bengaluru : Software Engineer found dead at his apartment, Kadugodi

ಶವದ ಮೇಲೆ ಹೆಚ್ಚು ಗಾಯದ ಗುರುತುಗಳಿಲ್ಲ, ಉಸಿರುಗಟ್ಟಿಸಿ ಸಾಯಿಸಿರುವ ಅನುಮಾನ ಬಂದಿದೆ. ದುರ್ಗಂಧ ತಾಳಲಾರದೆ ಅನುಮಾನದಿಂದ ಪೊಲೀಸರಿಗೆ ನೆರಮನೆಯವರು ವಿಷಯ ತಿಳಿಸಿದ ಮೇಲೆ ಈ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸೋಹನ್ ಪಶ್ಚಿಮ ಬಂಗಾಳ ಮೂಲದವರು. ಸೋಹನ್ ಅವರ ಮನೆಯಲ್ಲಿ ಬುಧವಾರದಂದು ಗೆಳೆಯರೆಲ್ಲ ಸೇರಿ ಕಾಕ್ ಟೈಲ್ ಪಾರ್ಟಿ ಮಾಡಿದ್ದರು. ಈ ವೇಳೆ ಗೆಳೆಯರೊಡನೆ ಮಾತಿನ ಚಕಮಕಿ ನಡೆದಿತ್ತು. ನಂತರ ಲಾಕ್ ಆದ ರೂಮ್ ಶನಿವಾರ ಓಪನ್ ಆಗಿದೆ. ರೂಂ ಮೇಟ್ಸ್ ನಾಪತ್ತೆಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕಾಡುಗೋಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru : A 33 year old Software Engineer Sohan Halder found dead today(Aug 06) at his residence Shantiketan Apartments in the Kadugodi police station limits. Techie Sohan Halder hailed from West Bengal and was working at a private firm.
Please Wait while comments are loading...