ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುಂಡಿ ಮುಚ್ಚುವ ಟ್ರಾಫಿಕ್ ಪೊಲೀಸ್ ಪೇದೆಗೆ ಸನ್ಮಾನ

|
Google Oneindia Kannada News

ಬೆಂಗಳೂರು, ಜು. 09: ಟ್ರಾಫಿಕ್ ಪೊಲೀಸ್ ಅಂದ ತಕ್ಷಣ ತಲೆಯಲ್ಲಿ ಬರುವ ಚಿತ್ರಣ ಎಂಥಹದು? ದಂಡ ಕಟ್ಟಿದ್ದವರಿಗಾದರೆ, ಮರೆಯಲ್ಲಿ ನಿಂತು ವಾಹನಕ್ಕೆ ಕೈ ಅಡ್ಡ ಹಾಕಿ, ಎಲ್ಲ ದಾಖಲೆಗಳು ಸರಿ ಇದ್ದರೂ ಸಲ್ಲದ ಕಾರಣ ನೀಡಿ ದಂಡ ವಸೂಲಿ ಮಾಡುವರೇ ಟ್ರಾಫಿಕ್ ಪೊಲೀಸ್, ಇಲ್ಲಾ ಸಿಗ್ನಲ್ ಗಳಲ್ಲಿ ಧೂಳು ತಿನ್ನುತ್ತಾ ಕೈ ಅಡ್ಡ ಮಾಡುತ್ತಿರುವವರೇ ಟ್ರಾಫಿಕ್ ಪೊಲೀಸ್ ಎಂದುಕೊಳ್ಳುತ್ತಾರೆ.

ಬೆಂಗಳೂರು ಟ್ರಾಫಿಕ್ ಪೊಲೀಸರ ಬಗ್ಗೆ ನಾಗರಿಕರಲ್ಲಿ ಒಂಥರಾ ಭಯ ಜತೆಗೆ ಅಸಹ್ಯ ಕೂಡಾ ಇದೆ. ಸಿಗ್ನಲ್ ಜಂಪ್ ಮಾಡಿ, ಹೆಲ್ಮೆಟ್ ಧರಿಸದೆಯೋ ಅಥವಾ ಇನ್ನಿತರ ಯಾವುದೋ ತಪ್ಪು ಮಾಡಿ ಕೈಗೆ ಸಿಕ್ಕಿಹಾಕಿಕೊಂಡರೆ ದಂಡ ಕೊಡಲೇ ಬೇಕು, ಇದರಲ್ಲಿ ಪೊಲೀಸರದ್ದೇನು ತಪ್ಪು?[ಟಿನ್ ಫ್ಯಾಕ್ಟರಿ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ರುಜು ಮಾಡಿ]

police

ಕೆಲ ಪೊಲೀಸರು ಟ್ರಾಫಿಕ್ ಸಿಗ್ನಲ್ ಬಿಟ್ಟು ಮರೆಯಲ್ಲಿ ನಿಂತು ಬೇಕೆಂತಲೇ ನಾಗರಿಕರನ್ನು ಹಿಡಿದು ಹಿಂಸಿಸುತ್ತಾರೆ ಎಂಬ ಆರೋಪವೂ ಇದೆ. ಇದರಲ್ಲೂ ಸತ್ಯಾಂಶ ಇಲ್ಲ ಎಂದು ಹೇಳಲಾಗದು. ಇದೆಲ್ಲದರ ನಡುವೆ ಅವರ ಕೆಲಸ ಕಾರ್ಯಸೂಚಿ ತಿಳಿದುಕೊಂಡರೆ ಕಣ್ಣಲ್ಲಿ ನೀರು ಬರುವುದು ಖಂಡಿತ.

ಬೆಳಗ್ಗೆಯಿಂದ ಹೊಗೆ, ಧೂಳು ಸೇವಿಸುತ್ತ ನಿಂತರೆ ಮನೆ ಸೇರುವ ಸಮಯಕ್ಕೆ ಹೈರಾಣರಾಗಿ ಹೋಗಿರುತ್ತಾರೆ. ಶ್ವಾಸಕೋಶದ ತೊಂದರೆ, ಮೇಲಧಿಕಾರಿಗಳ ಮಾತುಗಳು ಎಲ್ಲವನ್ನು ಸಹಿಸಿಕೊಂಡು ಕರ್ತವ್ಯ ನಿಭಾಯಿಸುವವರಿಗೆ ಒಂದು ಸಲಾಂ ಹೇಳಲೇಬೇಕು.[ಬೆಂಗಳೂರು ರಸ್ತೆಗಳಲ್ಲಿರುವ ಗುಂಡಿಗಳ ಲೆಕ್ಕ ಹಾಕಿದ ಬಿಬಿಎಂಪಿ]

police

ಈ ಎಲ್ಲ ಸವಾಲಯಗಳನ್ನು ಮೆಟ್ಟಿ ನಿಂತು, ತನ್ನದಲ್ಲದ ಕೆಲಸವನ್ನು ತನ್ನದು ಎಂದು ಮಾಡಿದ ಟ್ರಾಫಿಕ್ ಪೊಲೀಸ್ ಸತ್ಯನಾರಾಯಣ್ ಅವರಿಗೆ ಇಲಾಖೆ ಗೌರವ ಸಲ್ಲಿಕೆ ಮಾಡಿದೆ. ಹೆಚ್ಚುವರಿ ಪೊಲೀಸ್ ಆಯುಕ್ತ ಡಾ. ಎಂ ಎ. ಸಲಿಂ ನಗದು ಬಹುಮಾನ ನೀಡಿ ಗೌರವಿಸಿದ್ದಾರೆ. ಹಾಗಾದರೆ ಈ ಮಾದರಿ ಪೊಲೀಸ್ ಮಾಡಿದ ಕೆಲಸ ಯಾವುದು? ಮುಂದಕ್ಕೆ ಓದಿ....

ವೈಟ್‌ ಫೀಲ್ಡ್‌ನ ಸಂಚಾರಿ ಪೊಲೀಸ್‌ ಠಾಣೆಯ ಮುಖ್ಯ ಪೇದೆ ಸತ್ಯನಾರಾಯಣ್‌. ತಮ್ಮ ಠಾಣೆಯ ವ್ಯಾಪ್ತಿಯಲ್ಲಿ ಬರುವ ರಸ್ತೆಗಳಲ್ಲಿರುವ ಗುಂಡಿಗಳನ್ನು ಕಲ್ಲು, ಮಣ್ಣು ಹಾಕಿ ಮುಚ್ಚುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟವರು ಸತ್ಯನಾರಾಯಣ್. ಇತ್ತ ಬಿಬಿಎಂಪಿ ಯಾವ್ಯಾವ ರಸ್ತೆಯಲ್ಲಿ ಎಷ್ಟು ಗುಂಡಿಗಳಿವೆ? ಎಂದು ಲೆಕ್ಕ ತೆಗೆಯುತ್ತ ಕುಳಿತಿದ್ದರೆ, ಅತ್ತ ಸತ್ಯನಾರಾಯಣ್ ಬಿಬಿಎಂಪಿಯ ಕೆಲಸವನ್ನು ಏಕಾಂಗಿಯಾಗಿ ಮಾಡುತ್ತಿದ್ದರು.

ರಸ್ತೆಯ ಮಧ್ಯದಲ್ಲಿರುವ ಗುಂಡಿಗಳನ್ನು ಒಬ್ಬರೆ ಮುಚ್ಚುವುದು. ಡಿವೈಡರ್‌ಗಳು ಒಡೆದು ಹೋಗಿದ್ದಲ್ಲಿ ಸರಿಪಡಿಸುವುದು ,ಅಗತ್ಯ ಬಿದ್ದಲ್ಲಿ ಸಿಮೆಂಟ್‌ ಹಾಕಿ ರಸ್ತೆ ಸರಿ ಮಾಡುವುದನ್ನು ತಮ್ಮ ದೈನಂದಿನ ಕೆಲಸದೊಂದಿಗೆ ಮಾಡಿಕೊಂಡು ಬರುತ್ತಿದ್ದಾರೆ.[ಇದು ದೇವೇಗೌಡ ಪೆಟ್ರೋಲ್ ಬಂಕ್ ಫ್ಲೈ ಓವರ್ ಕಥೆ...ವ್ಯಥೆ]

ಸಾಫ್ಟ್ ವೇರ್ ಉದ್ಯೋಗಿ ಒಬ್ಬರು ಇವರ ಸಾಮಾಜಿಕ ಕಾರ್ಯದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಜನರಿಂದ ಅಭಿನಂದನೆ ಮತ್ತು ಪ್ರಶಂಸೆಗೆ ಒಳಗಾದ ಸತ್ಯನಾರಾಯಣ್ ನಿಷ್ಠುರ ಸೇವೆ ಈ ಕಾರಣದಿಂದಲಾದರೂ ಸಮಾಜದ ಮುಂದೆ ಬಂದಿದೆ.

English summary
Meet 56-year-old constable K Sathyanarayana, who is often spotted near Whitefield junction, managing the heavy peak hour traffic near Graphite India signal. But what is different about this man, is that he doesn't think twice before going out of his way, beyond the call of duty, to address the issue of broken dividers. In recognition of his good work, Additional Commissioner of Police (Traffic) Sri M.A. Saleem, IPS has congratulated him and awarded a cash award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X