ನೀವು ಶೂಟಿಂಗ್ ಕಲಿಗಳಾಗಬೇಕೆ? ಇಲ್ಲಿದೆ ಅವಕಾಶ

Subscribe to Oneindia Kannada

ಬೆಂಗಳೂರು, ಏಪ್ರಿಲ್, 04: ಕೈಯಲ್ಲಿ ಗನ್ ಹಿಡಿದು ಗುರಿ ಇಟ್ಟು ಹೊಡೆಯೋದು ಅಂದ್ರೆ ಯಾರಿಗೆ ಮಜಾ ಅನಿಸೋದಿಲ್ಲ ಹೇಳಿ. ಅದ್ರಲ್ಲೂ ರಾಜವರ್ಧನ್ ಸಿಂಗ್ ರಾಥೋಡ್, ಅಭಿನವ್ ಬಿಂದ್ರಾ, ಜಸ್ಪಾಲ್ ರಾಣಾ, ಗಗನ್ ನಾರಂಗ್, ಅಂಜಲಿ ಭಾಗವತ್ ಅವರಂಥ ಶೂಟಿಂಗ್ ಶೂರರನ್ನು ನೋಡಿದ್ರೆ, ಶೂಟಿಂಗ್ ನಲ್ಲಿ ನಾವೂ ಒಂದು ಕೈ ನೋಡಿ ಬಿಡೋಣ ಅನಿಸಿಬಿಡುತ್ತೆ.

ಒಂದಲ್ಲಾ ಒಂದ್ ಸಾರಿ ಜಾತ್ರೆಯಲ್ಲೋ, ಮಾಲ್ ನಲ್ಲೋ ಗುರಿ ಇಟ್ಟು ಗೆದ್ದವರಿಗೆ ಶೂಟಿಂಗ್ ಕಲಿಯೋದಾದ್ರೂ ಎಲ್ಲಿ ? ಏಕಾಂಗಿಯಾಗಿ ಕಲಿಯೋಕೆ ನಾವೇನು ಏಕಲವ್ಯರಾ? ಅನ್ನೋ ಪ್ರಶ್ನೆ ಮೂಡಿಬಿಡುತ್ತದೆ. ಅದೆಲ್ಲದಕ್ಕೆ ಉತ್ತರವನ್ನು ನಾವು ಹೇಳುತ್ತೇವೆ.[ಡಾಕ್ಟರ್ ನ ಶೂಟ್ ಮಾಡಿ, ಸೂಸೈಡ್ ಮಾಡ್ಕೊಂಡ ಡಾಕ್ಟರ್]

ಚಿಂತಿಸಬೇಕಿಲ್ಲ.. ನಿಮಗೂ ಶೂಟಿಂಗ್ ಕಲಿಗಳಾಗಬೇಕು ಅನ್ನೋ ಹಂಬಲ ಇದ್ದರೆ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀವೂ ದೇಶದ ಶೂಟಿಂಗ್ ಶೂರರಾದ ಅಭಿನವ್ ಬಿಂದ್ರಾ, ಅಂಜಲಿ ಭಾಗವತ್‍ರಂತೆ ಮಿಂಚಬೇಕು ಅನ್ನೋ ಕನಸು ಕಟ್ಟಿಕೊಂಡಿದ್ರೆ.. ನಿಮ್ಮ ಕನಸನ್ನು ನನಸು ಮಾಡೋಕೆ ಅಂತಲೇ ಬೆಂಗಳೂರಿನಲ್ಲೊಂದು ಶೂಟಿಂಗ್ ಟ್ರೈನಿಂಗ್ (ತರಬೇತಿ) ಅಕಾಡೆಮಿ ಆರಂಭಗೊಂಡಿದೆ. ಅದೇ ಬೆಂಗಳೂರು ರೈಫೆಲ್ ಶೂಟರ್ರ್ ಅಕಾಡೆಮಿ. ಹೆಚ್ಚಿನ ವಿವರಗಳು ಮುಂದಿದೆ.

ಗುಣಮಟ್ಟದ ಅಕಾಡಮಿ

ಗುಣಮಟ್ಟದ ಅಕಾಡಮಿ

'ಮುಂಜಾನೆ ಛಲದಿಂದ ಆರಂಭವಾಗಲಿ ಕನಸು ನನಸಿನೊಂದಿಗೆ ದಿನ ಮುಗಿಯಲಿ.' ಎಂಬ ಧ್ಯೇಯದೊಂದಿಗೆ ಆರಂಭಗೊಂಡಿರುವ ಅಕಾಡಮಿ ಅಂತಾರಾಷ್ಟ್ರೀಯ ಮಟ್ಟದ ತರಬೇತಿ ನೀಡಲು ಸಜ್ಜಾಗಿದೆ.

ಒಳಾಂಗಣ ಸ್ಟುಡಿಯೋ

ಒಳಾಂಗಣ ಸ್ಟುಡಿಯೋ

ಅಂತಾರಾಷ್ಟ್ರೀಯ ಮಟ್ಟದ ರೈಫಲ್ ಶೂಟಿಂಗ್ ಒಳಾಂಗಣ ಸ್ಟುಡಿಯೋ ಇದರ ವಿಶೇಷ. 10 ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಶೂಟಿಂಗ್ ಟ್ರೈನಿಂಗ್ ಕೋರ್ಸ್ ಪಡೆಯಬಹುದು.

ಅಕಾಡೆಮಿ ಎಲ್ಲಿದೆ

ಅಕಾಡೆಮಿ ಎಲ್ಲಿದೆ

ಬೆಂಗಳೂರಿನ ಚಂದ್ರಾ ಲೇಔಟ್ ನ ಕಣ್ವ ಮಾರ್ಟ್ ಎದುರಿಗೆ ಅಕಾಡೆಮಿ ನಿರ್ಮಾಣವಾಗಿದ್ದು ತರಬೇತಿ ನೀಡಲು ಸಜ್ಜಾಗಿದೆ. 10 ರಿಂದ 18 ವರ್ಷ ಒಳಗಿನವರಿಗೆ 3 ಸಾವಿರ, 18 ವರ್ಷ ಮೇಲ್ಪಟ್ಟವರಿಗೆ 5ಸಾವಿರ ಶುಲ್ಕ ನಿಗದಿ ಮಾಡಿದ್ದು ವಿವಿಧ ಕೋರ್ಸ್ ಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗೆ 9739565622 ಸಂಪರ್ಕಿಸಬಹುದು.

ವಾರಾಂತ್ಯವೂ ತರಗತಿ ಇದೆ

ವಾರಾಂತ್ಯವೂ ತರಗತಿ ಇದೆ

ಒಂದು ತಿಂಗಳ ಕೋರ್ಸ್ ಜತೆಗೆ ವೀಕೆಂಡ್ (ಶನಿವಾರ ಮತ್ತು ಭಾನುವಾರ) ನಲ್ಲೂ ಶೂಟಿಂಗ್ ಟ್ರೈನಿಂಗ್ ಕ್ಲಾಸ್ ಇಲ್ಲಿ ನಡೆಯುತ್ತವೆ.. ರೈಫೆಲ್ ಶೂಟಿಂಗ್ ತರಬೇತಿಗೆ ಬೇಕಾದ ಅಗತ್ಯ ಉಪಕರಣಗಳನ್ನೂ ಅಕಾಡಮಿಯೇ ಪೂರೈಸುತ್ತದೆ.

ಬೇರೆಡೆ ಅವಕಾಶ

ಬೇರೆಡೆ ಅವಕಾಶ

ಇಲ್ಲಿ ತರಬೇತಿ ಪಡೆದವರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಅಕಾಡಮಿಯೇ ಅವಕಾಶ ಕಲ್ಪಿಸುತ್ತದೆ. ಬೇಸಿಗೆ ಶಿಬರ ನಡೆಸುವ ಅಕಾಡೆಮಿ ಯೋಗ, ಧ್ಯಾನ ಆಹಾರ ಕ್ರಮದ ಬಗ್ಗೆಯೂ ಟ್ರೈನಿಂಗ್ ನೀಡಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Shoot at Sight is an unique experience for any budding shooters. Name of the legendary shooters of the country including Rajyavardhan Singh Rathore, Abhinav Bindra, Jaspal Rana, Anjali Bhagwat etc inspires all irrespective of age. Even the kids of tender age like to shoot in the car festivals or in shopping malls when ever they see balloons and rifles. Bengaluru Rifle Shooters Academy has brought you the learning opportunity in the silicon city.
Please Wait while comments are loading...