ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಳೆದ 7 ವರ್ಷಗಳಲ್ಲಿ ಜನವರಿಯಲ್ಲಿ ದಾಖಲಾದ ಅತಿ ಕಡಿಮೆ ತಾಪಮಾನ

|
Google Oneindia Kannada News

ಬೆಂಗಳೂರು, ಜನವರಿ 3: ನಗರದಲ್ಲಿ ಕೊರೆಯುವ ಚಳಿ ಹೆಚ್ಚಾಗಿದ್ದು, ಕಳೆದ 7 ವರ್ಷಗಳಲ್ಲಿ ಜನವರಿಯಲ್ಲಿ ದಾಖಲಾದ ಅತಿ ಕಡಿಮೆ ತಾಪಮಾನ ಇದಾಗಿದೆ. 12 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.

ಜನವರಿ ಆರಂಭವಾಗುತ್ತಿದ್ದಂತೆ ಚಳಿಯೂ ವಿಪರೀತವಾಗಿದೆ. ಬುಧವಾರ ಬೆಂಗಳೂರು ನಗರದಲ್ಲಿ ತಾಪಮಾನ 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಅದು ಗುರುವಾರವೂ ಕೂಡ ಮುಂದುವರೆದಿದೆ. ಒಂದೆರೆಡು ದಿನಗಳ ತಾಪಮಾನ 10 ಡಿಗ್ರಿಗಿಂತಲೂ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಅತಿ ಹೆಚ್ಚು ಚಳಿ ಇರುವ ದೇಶದ ಒಟ್ಟು 10 ಸ್ಥಳಗಳ ಪಟ್ಟಿ ಅತಿ ಹೆಚ್ಚು ಚಳಿ ಇರುವ ದೇಶದ ಒಟ್ಟು 10 ಸ್ಥಳಗಳ ಪಟ್ಟಿ

ಮುಂದಿನ 24 ಗಟೆಗಳಲ್ಲಿ ತಾಪಮಾನ ಇಳಿಕೆಯಾಗಿ ಚಳಿ ಮತ್ತಷ್ಟು ಹೆಚ್ಚಾಗುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ. ಸಂಜೆ 6ರಿಂದ ಬೆಳಗ್ಗೆ ಸುಮಾರು 8 ಗಂಟೆಯವರೆಗೆ ಅತಿಯಾದ ಚಳಿ ಇದ್ದರೆ, ಬೆಳಗ್ಗೆ 10 ಗಂಟೆಯ ಬಳಿಕ ಬಿಸಿಲೇರುತ್ತದೆ. ಸಾಮಾನ್ಯವಾಗಿ ಡಿಸೆಂಬರ್ ಹಾಗೂ ಜನವರಿಯಲ್ಲಿ ಚಳಿ ಹೆಚ್ಚಾಗುತ್ತದೆ. ಆದರೆ ಈ ಬಾರಿ ದಾಖಲೆ ಪ್ರಮಾಣಕ್ಕೆ ತಲುಪಿದೆ.

ಮುಂದಿನ 24 ಗಂಟೆಗಳಲ್ಲಿ ಚಳಿ ಪ್ರಮಾಣ ಹೆಚ್ಚಳ

ಮುಂದಿನ 24 ಗಂಟೆಗಳಲ್ಲಿ ಚಳಿ ಪ್ರಮಾಣ ಹೆಚ್ಚಳ

ಮುಂದಿನ 24 ಗಂಟೆಗಳಲ್ಲಿ ಚಳಿ ಪ್ರಮಾಣ ಹೆಚ್ಚಾಗಲಿದ್ದು, ಬೆಚ್ಚನೆಯ ಉಡುಪುಗಳು, ಸ್ವೆಟರ್, ಟೋಪಿಗಳನ್ನು ಧರಿಸುವುದು ಉತ್ತಮ, ತಾಪಮಾನ ಇಳಿಕೆಯಾಗಿ ಚಳಿ ಮತ್ತಷ್ಟು ಹೆಚ್ಚಾಗಲಿದೆ. ಮಂಜಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಚಳಿಯ ಪ್ರಭಾವ ಎಷ್ಟು ದಿನಗಳ ಕಾಲ ಇರಲಿದೆ

ಚಳಿಯ ಪ್ರಭಾವ ಎಷ್ಟು ದಿನಗಳ ಕಾಲ ಇರಲಿದೆ

ಚಳಿಯ ಪ್ರಭಾವ ಇನ್ನೂ ಎರಡು ವಾರಗಳ ಕಾಲ ಮುದುವರೆಯಲಿದೆ. ಸಂಕ್ರಾಂತಿ ಬಳಿಕ ತುಸು ಕಡಿಮೆಯಾಗಲಿದೆ. ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಕೂಡ ಚಳಿ ಹೆಚ್ಚಾಗಿದೆ.

ಬೆಂಗಳೂರಲ್ಲಿ ಹೆಚ್ಚಿದ ಶೀತಗಾಳಿ, ಬೇಕೆನಿಸಿದೆ ಎಳೆಬಿಸಿಲು ಬೆಂಗಳೂರಲ್ಲಿ ಹೆಚ್ಚಿದ ಶೀತಗಾಳಿ, ಬೇಕೆನಿಸಿದೆ ಎಳೆಬಿಸಿಲು

ಬೆಂಗಳೂರು ತಾಪಮಾನ ಎಷ್ಟಿದೆ?

ಬೆಂಗಳೂರು ತಾಪಮಾನ ಎಷ್ಟಿದೆ?

ಬೆಂಗಳೂರು ನಗರದಲ್ಲಿ ಗರಿಷ್ಠ ಉಷ್ಣಾಂಶ 27.4 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 12.4 ಡಿಗ್ರಿ ಸೆಲ್ಸಿಯಸ್, ಕೆಐಎಎಲ್‌ನಲ್ಲಿ ಗರಿಷ್ಠ 27.1 ಡಿಗ್ರಿ ಸೆಲ್ಸಿಯಸ್, ಕನಿಷ್ಠ 11.1 ಡಿಗ್ರಿ ಸೆಲ್ಸಿಯಸ್, ಎಚ್‌ಎಎಲ್‌ನಲ್ಲಿ ಗರಿಷ್ಠ 26.5 ಡಿಗ್ರಿ ಸೆಲ್ಸಿಯಸ್, ಕನಿಷ್ಠ 11.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ದೇಶದ ಯಾವ್ಯಾವ ಪ್ರದೇಶದಲ್ಲಿ ಹೆಚ್ಚು ಚಳಿ ಇದೆ

ದೇಶದ ಯಾವ್ಯಾವ ಪ್ರದೇಶದಲ್ಲಿ ಹೆಚ್ಚು ಚಳಿ ಇದೆ

ಜನವರಿ ಆರಂಭದಿಂದಲೇ ದೇಶಾದ್ಯಂತ ಚಳಿ ಆರಂಭವಾಗಿದೆ. ಸಾಮಾನ್ಯವಾಗಿ ಡಿಸೆಂಬರ್‌ನಲ್ಲಿ ಆರಂಭವಾಗುತ್ತಿದ್ದ ಚಳಿ ಈ ಬಾರಿ ಆರಂಭವಾಗಿದ್ದರೂ ಕೂಡ ತಾಪಮಾನ ಏರುಪೇರಾಗುತ್ತಿತ್ತು. ಆದರೆ ಜನವರಿ 1ರಿಂದ ಚಳಿ ವಿಪರೀತವಾಗಿದೆ. ಮಧ್ಯಪ್ರದೇಶದ ಖಜುರಾಹೊದಲ್ಲಿ 3.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.ಮಧ್ಯಪ್ರದೇಶದಲ್ಲಿ 5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

1)ಖಜುರಾಹೊ-ಮಧ್ಯಪ್ರದೇಶ-3.4 ಡಿಗ್ರಿ ಸೆಲ್ಸಿಯಸ್
2)ಅಮೃತಸರ-ಪಂಜಾಬ್-3.6
3)ಮಂಡ್ಲಾ-ಮಧ್ಯಪ್ರದೇಶ-3.6
4)ಉಮರಿಯಾ-ಮಧ್ಯಪ್ರದೇಶ-3.8
5)ಭಿಲ್ವಾರಾ-ರಾಜಸ್ಥಾನ-3.9
6)ಗಯಾ-ಬಿಹಾರ-4.0
7)ಹಿಸರ್-ಹರ್ಯಾಣ-4.0
8)ಅಂಬಾಲಾ-ಪಂಜಾಬ್-4.2
9)ನೌಗಾನ್-ಮಧ್ಯಪ್ರದೇಶ-4.2
10)ಚಿಂದ್ವಾರಾ-ಮಧ್ಯಪ್ರದೇಶ-4.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ

ಶ್ರೀನಗರ್ ನಲ್ಲಿ 11 ವರ್ಷದಲ್ಲೇ ಕನಿಷ್ಠ ತಾಪಮಾನ -6.8 ಡಿಗ್ರಿ; ನೀರೆಲ್ಲ ಮಂಜು ಗಡ್ಡೆ ಶ್ರೀನಗರ್ ನಲ್ಲಿ 11 ವರ್ಷದಲ್ಲೇ ಕನಿಷ್ಠ ತಾಪಮಾನ -6.8 ಡಿಗ್ರಿ; ನೀರೆಲ್ಲ ಮಂಜು ಗಡ್ಡೆ

English summary
How on earth is Bengaluru so cold.Too cold today than usual Bengaluru, Twitter is abuzz with netizens pouring their views on Bengaluru weather, which has suddenly turned colder in the last few days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X