ಹಿರಿಯ ಕಲಾವಿದ ಯೂಸುಫ್ ಅರಕ್ಕಲ್ ನಿಧನ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 04: ಹಿರಿಯ ಚಿತ್ರ ಕಲಾವಿದ ಯೂಸುಫ್ ಅರಕ್ಕಲ್ ಮಂಗಳವಾರ ಮುಂಜಾನೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಯೂಸುಫ್ ಅವರು ಪತ್ನಿ ಸಾರಾ ಹಾಗೂ ಪುತ್ರ ಶಿಬು ಅವರನ್ನು ಅಗಲಿದ್ದಾರೆ.

ಕೇರಳದ ಚವಕ್ಕಾಡ್ ಮೂಲದವರಾದರೂ ಯೂಸುಫ್ ಅವರು ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ವಿದ್ಯಾಭ್ಯಾಸ ಮಾಡಿ, ಬೆಂಗಳೂರಿನಲ್ಲೇ ತಮ್ಮ ವೃತ್ತಿ ಬದುಕು ಕಂಡುಕೊಂಡು ಅಂತಾರಾಷ್ಟ್ರೀಯ ಮಟ್ಟಕ್ಕೇರಿದರು. ದೇಶದ ನವ್ಯ ಕಲಾವಿದರ ಸಾಲಿನಲ್ಲಿ ಅಗ್ರಪಂಕ್ತಿಯ ಕಲಾವಿದರಾಗಿದ್ದರು.

Bengaluru: : Senior Artist Yusuf Arakkal passed away

ಕರ್ನಾಟಕ ಚಿತ್ರಕಲಾ ಪರಿಷತ್​ನಲ್ಲಿ ಚಿತ್ರಕಲಾ ಡಿಪ್ಲೋಮಾ ಮುಗಿಸಿದ ಬಳಿಕ ಮುದ್ರಣ ಕಲೆಯಲ್ಲಿ ವಿಶೇಷವಾದ ತರಬೇತಿ ಪಡೆದರು. ನಂತರ ದೆಹಲಿಯ ರಾಷ್ಟ್ರೀಯ ಅಕಾಡೆಮಿ ಕಮ್ಯೂನಿಟಿ ಸ್ಟುಡಿಯೋದಲ್ಲಿ ಮುದ್ರಣ ಕಲೆಯ ವಿಶೇಷ ಅಧ್ಯಯನ ಮಾಡಿದರು. ಫ್ಲಾರೆನ್ಸ್ ಬಿಯನ್ನಾಲೆಯ ಪ್ರತಿಷ್ಠಿತ ಲಾರೆನ್ಜೋ ಡೆ ಮೆಡಿಸಿ ಸ್ವರ್ಣ ಪದಕ ಗೌರವ ಪಡೆದರು.

ಬಾಲ್ಯದಲ್ಲಿಯೇ ಬೆಂಗಳೂರಿಗೆ ಬಂದು ಚಿತ್ರಕಲೆಯನ್ನು ಆಯ್ಕೆಮಾಡಿಕೊಂಡು ಯೂಸುಫ್ ಅರಕ್ಕಲ್, ಕರ್ನಾಟಕ ಚಿತ್ರಕಲಾ ಪರಿಷತ್​ನಲ್ಲಿ ಚಿತ್ರಕಲಾ ಡಿಪ್ಲೋಮಾ ಮುಗಿಸಿದ ಬಳಿಕ ಮುದ್ರಣ ಕಲೆಯಲ್ಲಿ ವಿಶೇಷವಾದ ತರಬೇತಿ ಪಡೆದುಕೊಂಡಿದ್ದರು. ದೆಹಲಿಯ ರಾಷ್ಟ್ರೀಯ ಅಕಾಡೆಮಿ ಕಮ್ಯೂನಿಟಿ ಸ್ಟುಡಿಯೋದಲ್ಲಿ ಮುದ್ರಣ ಕಲೆಯ ವಿಶೇಷ ಅಯಯನ ನಡೆಸಿದ ಯೂಸುಫ್ ಅರಕ್ಕಲ್, ಫ್ಲಾರೆನ್ಸ್ ಬಿಯನ್ನಾಲೆಯ ಪ್ರತಿಷ್ಠಿತ ಲಾರೆನ್ಜೋ ಡೆ ಮೆಡಿಸಿ ಸ್ವರ್ಣ ಪದಕ ಗೌರವ ಸಂಪಾದಿಸಿದ್ದರು.

ರೇಖಾಚಿತ್ರ, ವರ್ಣಚಿತ್ರ, ಶಿಲ್ಪ, ಮ್ಯೂರಲ್, ಮುದ್ರಣ ಕಲೆ ಮತ್ತು ತಮ್ಮದೇ ಶೈಲಿಯ ಛಾಪು ಮೂಡಿಸಿದ್ದರು. ಯೂಸುಫ್ ಅವರಿಗೆ ಎರಡು ಬಾರಿ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ, 1983ರಲ್ಲಿ ರಾಷ್ಟ್ರೀಯ ಪ್ರಶಸ್ತಿ, 1986ರಲ್ಲಿ ಢಾಕಾದಲ್ಲಿ ನಡೆದ ಬಿಯೆನ್ನಾಲೆ ಪ್ರದರ್ಶನದಲ್ಲಿ ವಿಶೇಷ ಪ್ರಶಸ್ತಿ ಲಭಿಸಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Senior artist Yusuf Arakkal passed away this morning in Bengaluru. He is survived by his wife Sara Arakkal and son Shibu Arakkal. The senior figurative artist had been unwell for the past few months.
Please Wait while comments are loading...