ನಾರಾಯಣ ಹೃದಯಾಲಯದಲ್ಲಿ 'ಅಫ್ಘನ್ ಹುಡುಗಿ' ಚಿಕಿತ್ಸೆ!

By: ಅನುಷಾ ರವಿ
Subscribe to Oneindia Kannada

ಬೆಂಗಳೂರು, ನವೆಂಬರ್ 16: ನ್ಯಾಷನಲ್ ಜಿಯಾಗ್ರಫಿಕ್ ನಿಂದಾಗಿ ಪ್ರಸಿದ್ಧಿಗೆ ಬಂದ 'ಅಫ್ಘಾನ್ ಹುಡುಗಿ' ಶರ್ಬತ್ ಗುಲಾಗೆ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಉಅಚಿತ ಚಿಕಿತ್ಸೆ ನೀಡಲು ಎಲ್ಲ ಸಿದ್ಧತೆ ನಡೆದಿದೆ. ಸದ್ಯಕ್ಕೆ ಅಫಘಾನಿಸ್ತಾನದ ಜೈಲಿನಲ್ಲಿ ದಿನ ದೂಡುತ್ತಿರುವ ಆಕೆ, ಹೆಪಟೈಟಿಸ್ ಸಿ ಚಿಕಿತ್ಸೆಗಾಗಿ ಭಾರತಕ್ಕೆ ಬರಲಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅಫಘಾನಿಸ್ತಾನದ ಶಾಯಿದಾ ಮೊಹಮ್ಮದ್ ಅಬ್ದಾಲಿ, ಭಾರತದ ಸಹಾಯಕ್ಕೆ ಧನ್ಯವಾದ ಹೇಳಿದ್ದಾರೆ. ಉಚಿತವಾಗಿ ಆಕೆಗೆ ಚಿಕಿತ್ಸೆ ನೀಡಲಿರುವ ನಾರಾಯಣ ಹೃದಯಾಲಯಕ್ಕೂ ಕೃತಜ್ಞತೆ ತಿಳಿಸಿದ್ದಾರೆ. ಇದೇ ವೇಳೆ ವಿದೇಶ ಪ್ರವಾಸದಲ್ಲಿರುವ ಡಾ.ದೇವಿಶೆಟ್ಟಿ ಅವರು ಪ್ರತಿಕ್ರಿಯೆಗೆ ಸಿಗುವುದಿಲ್ಲ ಎಂದು ಆಸ್ಪತ್ರೆ ಮೂಲಗಳು ಒನ್ಇಂಡಿಯಾಗೆ ತಿಳಿಸಿವೆ.[ತಾಲಿಬಾನಿಗಳಿಂದ ತಪ್ಪಿಸಿಕೊಂಡವಳ ಬದುಕು ಪಾಕಿಸ್ತಾನದಲ್ಲಿ ಹೀಗಾಯಿತು]

Sharbat Gula

ಈ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಕಾಗದಪತ್ರಗಳನ್ನು ಸಿದ್ಧಪಡಿಸಬೇಕಿದೆ ಎಂದು ತಿಳಿಸಲಾಗಿದೆ. 'ನಾವೇನಿದ್ದರೂ ಅನೌಪಚಾರಿಕ ಮಾತುಕತೆ ನಡೆಸಿದ್ದೇವೆ. ರಾಯಭಾರ ಕಚೇರಿಯಿಂದ ಶರಬತ್ ಚಿಕಿತ್ಸೆ ಬಗ್ಗೆ ನಮ್ಮನ್ನು ಸಂಪರ್ಕಿಸಿದ್ದಾರೆ. ಮತ್ತು ಅದಕ್ಕೆ ಸಿದ್ಧರಿದ್ದೇವೆ ಎಂದು ತಿಳಿಸಿದ್ದೇವೆ. ನಾವು ಇದನ್ನು ಅಧಿಕೃತಗೊಳಿಸಬೇಕಿದೆ' ಎಂದು ಮೂಲಗಳು ತಿಳಿಸಿವೆ.

ಆಸ್ಪತ್ರೆಯ ಈ ನಿರ್ಧಾರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ನಮಗೆ ರಾಯಭಾರ ಕಚೇರಿಯಿಂದ ಅಕೆ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಅದು ಬಂದ ನಂತರವಷ್ಟೇ ಮುಂದಿನ ಯೋಜನೆಗಳನ್ನು ಮಾಡಿಕೊಳ್ಳಬಹುದು. ನಾವು ದೇವಿ ಶೆಟ್ಟಿಯವರು ವಾಪಸ್ ಬರಲಿ ಅಂತ ಕಾಯ್ತಿದ್ದೀವಿ' ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
National geographic's famed 'Afghan girl' Sharbat Gula is all set to receive free treatment from Bengaluru's Narayana Hrudayalaya. Currently serving jail time in Afghanistan, she is expected to come to India for treatment of Hepatitis C from Afghanistan.
Please Wait while comments are loading...