ಬೆಂಗಳೂರು: ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಕಾಣಿಸಿಕೊಂಡ ಬೆಂಕಿ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಫೆಬ್ರವರು 17: ಗುರುವಾರ ಮತ್ತೆ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಇಲ್ಲಿನ ನಿವಾಸಿಗಳು ಮತ್ತು ವಾಹನ ಸವಾರರು ಭಯಭೀತರಾಗಿದ್ದಾರೆ.

ಈ ಬಾರಿ ದೊಡ್ಡ ಮಟ್ಟಕ್ಕೆ ಬೆಂಕಿ ಹತ್ತಿಕೊಂಡಿದ್ದು ಸುತ್ತಮುತ್ತಲಿನ ಪ್ರದೇಶ ಹೊಗೆಯಿಂದ ತುಂಬಿಕೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಬಂದಿದ್ದರೂ ದಟ್ಟ ಹೊಗೆಯ ಮಧ್ಯೆ ಬೆಂಕಿ ಎಲ್ಲಿ ಹತ್ತಿಕೊಂಡಿದೆ ಎಂದು ಕಾಣಿಸುತ್ತಿಲ್ಲ. ಕೆರೆಯಲ್ಲಿ ಕಸ ದೊಡ್ಡಮಟ್ಟಕ್ಕೆ ಶೇಖರಣೆಯಾಗಿದ್ದು ಇದಕ್ಕೆ ಬೆಂಕಿ ಬಿದ್ದಿದೆ. 2016ರ ಮೇನಲ್ಲೂ ಇದೇ ರೀತಿ ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.[ಬೆಳ್ಳಂದೂರು ಕೆರೆ ಮತ್ತೆ ನೊರೆ ಉಗುಳಲು ಯಾರು ಕಾರಣ?]

Bengaluru's Bellandur Lake catches fire again

ರಾತ್ರಿ ಹೊತ್ತು ಟ್ರಾಕ್ಟರುಗಳಲ್ಲಿ ಬಂದು ಕರೆಗೆ ಕಸ ಎಸೆದು ಹೋಗುತ್ತಾರೆ ಎಂದು ಇಲ್ಲಿನ ನಿವಾಸಿಗಳು ಈ ಹಿಂದೆ ದೂರು ನೀಡಿದ್ದರು. ಇದಾದ ನಂತರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೆಲವು ಸ್ಥಳೀಯ ಸಂಸ್ಥೆಗಳಿಗೆ ಕೆರೆಯಲ್ಲಿ ಕಸ ಎಸೆಯದಂತೆ ನೊಟೀಸ್ ಕೂಡಾ ಜಾರಿಗೊಳಿಸಿತ್ತು. ಆದರೆ ಇಲ್ಲೀವರೆಗೂ ಕಸ ಬೀಳುವುದು ಮಾತ್ರ ನಿಂತಿಲ್ಲ.[ಬೆಳ್ಳಂದೂರು ಕೆರೆ ಶುದ್ಧೀಕರಣ ಸಮಿತಿಯಲ್ಲಿ ಯಾರ್ಯಾರಿದ್ದಾರೆ?]

ಕೆರೆಗೆ ಬೆಂಕಿ ಬೀಳುತ್ತಿದ್ದಂತೆ ಕೆಲವು ನಿವಾಸಿಗಳು ಸಿಟ್ಟಿಗೆದ್ದಿದ್ದು ಟ್ವಿಟ್ಟರಿನಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bellandur lake caught fire once again on Thursday which triggered panic among motorists and residents. The fire this time raged so high that the area was enveloped by clouds of smoke.
Please Wait while comments are loading...