ಸಿದ್ದರಾಮಯ್ಯರಿಂದ ಬೆಂಗಳೂರಿಗೆ ಮಧ್ಯ ರಾತ್ರಿ 'ಮದ್ಯ ಭಾಗ್ಯ'

Posted By:
Subscribe to Oneindia Kannada

ಬೆಂಗಳೂರು, ಜುಲೈ 15: ಬೆಂಗಳೂರಿಗರಿಗರಿಗೆ ಮಧ್ಯರಾತ್ರಿ ನಂತರವೂ ಮದ್ಯ ಹೀರುವ 'ಭಾಗ್ಯ' ವನ್ನು ಸಿದ್ದರಾಮಯ್ಯ ಸರ್ಕಾರ ಕರುಣಿಸಿದೆ. ಇಲ್ಲಿ ತನಕ ವಾರಾಂತ್ಯದಲ್ಲಿ ಮಾತ್ರ ರಾತ್ರಿ 1 ಗಂಟೆ ತನಕ ಓಪನ್ ಇರುತ್ತಿದ್ದ ಮದ್ಯದಂಗಡಿಗಳು ಇನ್ಮುಂದೆ ವರ್ಷದ 365 ದಿನಗಳು ಕೂಡಾ ತೆರೆದಿರುತ್ತವೆ.

ರಾತ್ರಿ 1 ಗಂಟೆವರೆಗೆ ಮದ್ಯದಂಗಡಿಗಳು ಓಪನ್ ಇರುವುದಕ್ಕೆ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಪೊಲೀಸರು ಕೂಡಾ ಅಪರಾಧ ಪ್ರಕರಣಗಳ ಹೆಚ್ಚಳ, ಭದ್ರತೆ ಒದಗಿಸಲು ಸಿಬ್ಬಂದಿ ಕೊರತೆ ಇದೆ ಎಂದು ವಿರೋಧಿಸಿದ್ದರು. [ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ಮದ್ಯ ನಿಷೇಧಿಸಿ!]

ಆದರೆ, ಅಬಕಾರಿ ಇಲಾಖೆ ಶಿಫಾರಸ್ಸಿಗೆ ಸಿದ್ದರಾಮಯ್ಯ ಅವರು ಸಮ್ಮತಿಸಿರುವುದು ರಾತ್ರಿಪಾಳಿ ಮತ್ತು ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳು, ಪ್ರಿಯರಿಗೆ ಖುಷಿ ಕೊಟ್ಟಿದೆ.

Bengaluru's Bars, Restaurants to Stay Open Till 1 AM 365 days

ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ, ಶಿವಾಜಿನಗರ, ರಿಚ್ಮಂಡ್ ಸರ್ಕಲ್, ಮೆಜೆಸ್ಟಿಕ್, ಗಾಂಧಿನಗರ, ಕಲಾಸಿಪಾಳ್ಯ, ಕೆ.ಆರ್.ಮಾರ್ಕೆಟ್ ಸೇರಿ ನಗರದಲ್ಲಿರುವ ಪಬ್, ಕ್ಲಬ್ ಹಾಗೂ ಬಾರ್ ಆಂಡ್ ರೆಸ್ಟೋರೆಂಟ್​ಗಳ ಮಾಲೀಕರಿಗೆ ಭರ್ಜರಿ ಲಾಭ ಸಿಗುವ ನಿರೀಕ್ಷೆಯಿದೆ. [1 ಗಂಟೆವರೆಗೆ ಮಾತ್ರ ಬಾರ್, ಹೋಟೆಲ್ ತೆರೆದಿಡಲು ಒಪ್ಪಿಗೆ]

ರಾತ್ರಿ 1 ಗಂಟೆಯವರೆಗೆ ತೆರೆದಿರುವ ಹೋಟೆಲ್ ಹಾಗೂ ಬಾರ್‌ಗಳು ಭದ್ರತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲೇಬೇಕು. ಅಕ್ಕಪಕ್ಕದಲ್ಲಿ ವಾಸಿಸುತ್ತಿರುವವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಷರತ್ತು ವಿಧಿಸಲಾಗಿದೆ.


ನಗರದಲ್ಲಿ 222 ಹೊಸ ಹೊಯ್ಸಳ ರಸ್ತೆಗೆ ಇಳಿಸಲಾಗಿದೆ. ಪೊಲೀಸ್ ಕಂಟ್ರೋಲ್ ರೂಂ 100ಗೆ ಕರೆ ಬಂದ ತಕ್ಷಣ ಸ್ಥಳಕ್ಕೆ ಹೊಯ್ಸಳ ಸಿಬ್ಬಂದಿ ತೆರಳುತ್ತಾರೆ. ಮದ್ಯ ಮಾರಾಟ ಅವಧಿ ವಿಸ್ತರಣೆಗೆ ಅಭ್ಯಂತರವಿಲ್ಲ ಎಂದು ಅಬಕಾರಿ ಇಲಾಖೆಗೆ ತಿಳಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಪ್ರತಿಕ್ರಿಯಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka government has now officially been extended the Bengaluru city's nightlife upto 1 AM- 365 days. Now, Bars and restaurants serving liquor are opened only on Friday and Saturday up to 1 am.
Please Wait while comments are loading...