ಯು ಟರ್ನ್ ಸಿನಿಮಾದ ಫ್ಲೈಓವರ್‌ಗೆ ದುರಸ್ತಿ ಭಾಗ್ಯ

By: ಬೆಂಗಳೂರು ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್, 03: ಯು ಟರ್ನ್ ಸಿನಿಮಾದಲ್ಲಿ ಕಾಣಿಸಿಕೊಂಡು ಇಡೀ ಜಗತ್ತಿನ ಗಮನ ಸೆಳೆದಿದ್ದ ರಿಚ್ಮಂಡ್‌ ವೃತ್ತದ ಮೇಲ್ಸೇತುವೆಗೆ ದುರಸ್ತಿ ಭಾಗ್ಯ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಿಚ್ಮಂಡ್‌ ವೃತ್ತದ ಮೇಲ್ಸೇತುವೆ ದುರಸ್ತಿ ಕಾಮಗಾರಿಯನ್ನು ಆರಂಭಮಾಡಿದೆ.

ಮೊದಲ ಹಂತವಾಗಿ ರಿಚ್ಮಂಡ್ ರಸ್ತೆಯಿಂದ ಆರಂಭವಾಗಿ ಡಬಲ್ ರೋಡ್ ನಲ್ಲಿ ಕೊನೆಯಾಗುವ ಮೇಲ್ಸೇತುವೆ ದುರಸ್ತಿ ನಡೆಯಲಿದೆ. 1.5 ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಕೈಗೆ ಎತ್ತಿಕೊಳ್ಳಲಾಗಿದ್ದು ಮುಂದಿನ 45 ದಿನಗಳ ಕಾಲ ಸಂಚಾರ ವ್ಯತ್ಯಯವಾಗಲಿದೆ.[ಯು ಟರ್ನ್ ಚಲನಚಿತ್ರ ವಿಮರ್ಶೆಗೆ ಇಲ್ಲಿ ಕ್ಲಿಕ್ ಮಾಡಿ]

15 ದಿನದಲ್ಲಿ ಮೊದಲ ಹಂತವನ್ನು ಮುಗಿಸುವ ಗುರಿ ಇಟ್ಟುಕೊಳ್ಳಲಾಗಿದ್ದು ಎರಡನೇ ಹಂತದಲ್ಲಿ ಶಾಂತಿನಗರ ಕಡೆಯಿಂದ ರೆಸಿಡೆನ್ಸಿ ರಸ್ತೆ ಮೇಲ್ಸೇತುವೆ ದುರಸ್ತಿ ನಡೆಯಲಿದೆ. ಸದ್ಯ ಒಂದು ಮಾರ್ಗ ಅಂದರೆ ರಿಚ್ ಮಂಡ್ ರಸ್ತೆಯಿಂದ ಆರಂಭವಾಗಿ ಡಬಲ್ ರೋಡ್ ನಲ್ಲಿ ಕೊನೆಯಾಗುವ ಮೇಲ್ಸೇತುವೆಯನ್ನು ಬಂದ್ ಮಾಡಲಾಗಿದ್ದು ಪರ್ಯಾಯ ಮಾರ್ಗ ಬಳಕೆ ಮಾಡಲು ಸೂಚಿಸಲಾಗಿದೆ.

1.5 ಕೋಟಿ ರು. ವೆಚ್ಚ

1.5 ಕೋಟಿ ರು. ವೆಚ್ಚ

ಮೇಲ್ಸೇತುವೆ ಸಂಪೂರ್ಣ ದುರಸ್ತಿಗೆ ಬಿಬಿಎಂಪಿ 1.5 ಕೋಟಿ ರು. ವೆಚ್ಚ ಮಾಡಲಿದೆ. ಕಿರಿದಾದ ಮೇಲ್ಸೇತುವೆಯನ್ನು ದುರಸ್ತಿ ಮಾಡಲು ಬಿಬಿಎಂಪಿ 45 ದಿನಗಳ ಟಾರ್ಗೆಟ್ ಇಟ್ಟುಕೊಂಡಿದೆ.

ದುರಸ್ತಿ ಹೇಗೆ?

ದುರಸ್ತಿ ಹೇಗೆ?

ಮೊದಲು ಹಳೆಯ ಡಾಂಬರು ಪದರವನ್ನು ತೆಗೆಯಲಾಗುತ್ತದೆ. ಅದಾದ ಮೇಲೆ ಮರು ಡಾಂಬರೀಕರಣ ಮಾಡಲಾಗುತ್ತದೆ. ಹೊಸ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲಾಗುತ್ತಿದ್ದು ಕ್ರಿಪ್ರ ಗತಿಯಲ್ಲಿ ಕೆಲಸ ಮುಗಿಸಿಕೊಡಲಾಗುವುದು ನಿರ್ವಹಣೆ ಜವಾಬ್ದಾರಿ ಹೊತ್ತಿರುವ ನರೇಶ್ ಹೇಳುತ್ತಾರೆ.

2005 ರಲ್ಲಿ ನಿರ್ಮಾಣ

2005 ರಲ್ಲಿ ನಿರ್ಮಾಣ

ಮೇಲ್ಸೇತುವೆಯನ್ನು ಬಿಡಿಎ 2005 ರಲ್ಲಿ ನಿರ್ಮಾಣ ಮಾಡಿತ್ತು. ಒಟ್ಟು 1.3 ಕಿ ಮೀ ಮೇಲ್ಸೇತುವೆಗೆ 18 ಕೋಟಿ ವೆಚ್ಚ ಮಾಡಲಾಗಿತ್ತು. ಆದರೆ ಮರು ಡಾಂಬರೀಕರಣ ಆಗಿರಲಿಲ್ಲ.

ಪರ್ಯಾಯ ಮಾರ್ಗ ಬಳಸಿ

ಪರ್ಯಾಯ ಮಾರ್ಗ ಬಳಸಿ

ಸದ್ಯ ಒಂದು ಮಾರ್ಗ ಅಂದರೆ ರಿಚ್ ಮಂಡ್ ರಸ್ತೆಯಿಂದ ಡಬಲ್ ರೋಡ್ ಮೇಲ್ಸೇತುವೆ ಮಾರ್ಗ ಬಂದ್ ಮಾಡಲಾಗಿದೆ. ರಿಚ್‌ಮಂಡ್ ವೃತ್ತದಲ್ಲಿರುವ ಮೇಲ್ಸೇತುವೆಯಿಂದ ರೆಸಿಡೆನ್ಸಿ ರಸ್ತೆ, ಎಂ.ಜಿ. ರಸ್ತೆ ಕಡೆಗೆ, ರಿಚ್‌ಮಂಡ್ ರಸ್ತೆಯಿಂದ ಬರುವ ವಾಹನಗಳು ಶಾಂತಿನಗರ ಡಬಲ್ ರಸ್ತೆ, ಲಾಲ್‌ಬಾಗ್ ಕಡೆಗೆ ತೆರಳುತ್ತವೆ.

ಈ ಮಾರ್ಗ ಬಳಸಿ

ಈ ಮಾರ್ಗ ಬಳಸಿ

ಆದರೆ, ದುರಸ್ತಿ ಕಾರ್ಯದಿಂದಾಗಿ ಮೇಲ್ಸೇತುವೆಯಲ್ಲಿ ಸಂಚರಿಸುತ್ತಿದ್ದ ವಾಹನಗಳು ರಿಚ್‌ಮಂಡ್ ರಸ್ತೆ, ಶಾಂತಿನಗರ ಡಬಲ್ ರಸ್ತೆ, ಆರ್‌ಆರ್‌ಎಂಆರ್ ರಸ್ತೆ, ಮಿಷನ್ ರಸ್ತೆ, ಹಡ್ಸನ್ ವೃತ್ತ, ಸಿದ್ದಲಿಂಗಯ್ಯ ವೃತ್ತ, ಹೊಸೂರು ರಸ್ತೆ, ಒಪೆರಾ ಜಂಕ್ಷನ್ ಮೂಲಕ ಸಂಚರಿಸಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru: The Richmond Circle flyover or Double road fly over which had a full-length Kannada movie based on it (U-Turn,) is set for a makeover. Regular commuters will have to grin and bear with alternative roads over the next 40 days, beginning Friday, with the Bruhat Bengaluru Mahanagara Palike (BBMP) undertaking the work of resurfacing the road on the flyover. Here is the full details of flyover reconstruction.
Please Wait while comments are loading...