ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ನಗರದಲ್ಲಿ ಮಳೆ ಕೊರತೆ, ವಾಡಿಕೆಯಷ್ಟು ಮಳೆ ಇಲ್ಲ!

By Gururaj
|
Google Oneindia Kannada News

ಬೆಂಗಳೂರು, ಆಗಸ್ಟ್ 20 : ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಇರುತ್ತದೆ. ಆದರೆ, ಮಳೆ ಬರುವುದಿಲ್ಲ. ದಿನದಲ್ಲಿ ಒಮ್ಮೆ ಅಥವ ಎರಡು ಬಾರಿ ತುಂತುರು ಮಳೆ ಬಂದು ಮಾಯವಾಗುತ್ತದೆ. ಹೌದು, ಬೆಂಗಳೂರು ನಗರದಲ್ಲಿ ಮಳೆ ಕಡಿಮೆ ಆಗಿದೆ.

ರಾಜ್ಯ ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ ಮಾಹಿತಿಯಂತೆ ಬೆಂಗಳೂರು ನಗರದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. 2017ರ ಆಗಸ್ಟ್ ತಿಂಗಳಿನಲ್ಲಿ ನಗರದಲ್ಲಿ ಭಾರೀ ಮಳೆಯಾಗಿತ್ತು. ಆಗಸ್ಟ್ 19ರ ತನಕ ನಗರದಲ್ಲಿ ಆದ ಮಳೆ ಪ್ರಮಾಣ ಕೇವಲ 77 ಮಿ.ಮೀ..

ಕೊಡಗಿನ ದುರಂತವನ್ನು ಕಣ್ಣಾರೆ ಕಂಡವರು ಹೇಳಿದ್ದು ಹೀಗೆಕೊಡಗಿನ ದುರಂತವನ್ನು ಕಣ್ಣಾರೆ ಕಂಡವರು ಹೇಳಿದ್ದು ಹೀಗೆ

ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಈ ಬಾರಿ ಮಳೆಗೆ ಪೂರಕವಾದ ವಾತಾವರಣವಿಲ್ಲ. ಆದ್ದರಿಂದ, ಹೆಚ್ಚಿನ ಮಳೆಯಾಗಿಲ್ಲ ಎಂಬುದು ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಾಗಿದೆ. ಆದರೆ, ನಗರದಲ್ಲಿ ಸದಾ ಮೋಡ ಕವಿದ ವಾತಾವರಣ ಕಂಡುಬಂದಿದೆ.

Bengaluru receives only 73 mm rain in August 2018

ದಾಖಲೆ ಮಳೆ : 2017ರ ಆಗಸ್ಟ್‌ನಲ್ಲಿ ಬೆಂಗಳೂರು ನಗರದಲ್ಲಿ ಒಟ್ಟು 351.8 ಮೀ.ಮಿ ಮಳೆಯಾಗಿತ್ತು. ಒಂದೇ ದಿನ 128.7 ಮಿ.ಮೀ.ಮಳೆಯಾಗಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಆದರೆ, ಈ ವರ್ಷ ಮಳೆ ಕಡಿಮೆಯಾಗಿದೆ.

ಛೆ, ಎಂಥ ದುರಂತ! ಮನೆ ಪಕ್ಕದ ಬೆಟ್ಟ-ಗುಡ್ಡಗಳೇ ಮೃತ್ಯುಕೂಪವಾಗಿಛೆ, ಎಂಥ ದುರಂತ! ಮನೆ ಪಕ್ಕದ ಬೆಟ್ಟ-ಗುಡ್ಡಗಳೇ ಮೃತ್ಯುಕೂಪವಾಗಿ

ವಾಡಿಕೆಯಂತೆ ಆಗಸ್ಟ್ ತಿಂಗಳಿನಲ್ಲಿ ನಗರದಲ್ಲಿ 141.6 ಮಿ.ಮೀ. ಮಳೆಯಾಗಬೇಕಿದೆ. ಆದರೆ, ಆಗಸ್ಟ್ 20 ಬಂದರೂ ಆಗಿರುವ ಮಳೆ ಕೇವಲ 77 ಮಿ.ಮೀ. ಆಗಿದೆ. ಕಳೆದ ವರ್ಷ ಜೂನ್ ಮತ್ತು ಜುಲೈನಲ್ಲಿ ಹೆಚ್ಚು ಮಳೆ ಆಗಿರಲಿಲ್ಲ. ಆಗಸ್ಟ್‌ನಲ್ಲಿ ಭಾರಿ ಮಳೆಯಾಗಿತ್ತು.

ಮುಂದಿನ 48 ಗಂಟೆಗಳಲ್ಲಿ ನಗರದಲ್ಲಿ ಸಾಧಾರಣ ಮಳೆಯಾಗಲಿದೆ ಎಂಬ ಮುನ್ಸೂಚನೆ ನೀಡಲಾಗಿದೆ. ಆಗಸ್ಟ್ 2ರಂದು ನಗರದಲ್ಲಿ 15 ಮಿ.ಮೀ. ಮಳೆಯಾಗಿತ್ತು. ಇದು ಈ ವರ್ಷದ ಆಗಸ್ಟ್‌ನಲ್ಲಿ ಆದ ಹೆಚ್ಚಿನ ಮಳೆಯಾಗಿದೆ.

ಕೆಎಸ್‌ಎನ್‌ಎಂಡಿಸಿ ವರದಿಯ ಪ್ರಕಾರ ನಗರದಲ್ಲಿ ಶೇ 27ರಷ್ಟು ಮಳೆಯ ಕೊರತೆ ಉಂಟಾಗಿದೆ. ಮುಂಗಾರು ಆರಂಭವಾದ ಬಳಿಕ ಅಂದರೆ ಜೂನ್ 1 ರಿಂದ ಆಗಸ್ಟ್ 14ರ ತನಕ 118.91 ಮಿ.ಮೀ.ಮಳೆಯಾಗಿದೆ.

English summary
Bengaluru city received only 73 millimeter rainfall in the month of August 2018. It is very less than compare to last year. According to Karnataka State Natural Disaster Monitoring Centre (KSNDMC) report in 2017 August month city witnessed for 351.8 millimeter rainfall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X