ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆಯಾಗಿದ್ದು ಮಗನಿಂದಲೇ!

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 01 : ತಂದೆಯನ್ನೇ ಕೊಲೆ ಮಾಡಿ ಪರಾರಿಯಾಗಿದ್ದ ಮಗನನ್ನು ಆರ್.ಎಂ.ಸಿ.ಯಾರ್ಡ್‌ ಪೊಲೀಸರು ಬಂಧಿಸಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ಗಿಲ್ಬರ್ಟ್ ಕೊರಿಯಾ ಅವರನ್ನು ಫೆ.22ರಂದು ಕೊಲೆ ಮಾಡಲಾಗಿತ್ತು.

ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿಲ್ಬರ್ಟ್ ಕೊರಿಯಾ ಅವರ ಎರಡನೇ ಪುತ್ರ ಜೆನ್ಸನ್ ಕೊರಿಯಾ (41) ಅವರನ್ನು ಬಂಧಿಸಲಾಗಿದೆ. 1998ರಿಂದಲೂ ತಂದೆ-ತಾಯಿಯಿಂದ ಬೇರೆಯಾಗಿದ್ದ ಜೆನ್ಸನ್, ಚಿಕ್ಕಬಿದರಕಲ್ಲು ಬಳಿ ವಾಸವಾಗಿದ್ದರು. [ರಿಯಲ್ ಎಸ್ಟೇಟ್ ಉದ್ಯಮಿ ಭೀಕರ ಕೊಲೆ]

janson

ಆಸ್ತಿ ಕೊಟ್ಟಿರಲಿಲ್ಲ : ಗಿಲ್ಬರ್ಟ್ ಕೊರಿಯಾ ಅವರು ಪತ್ನಿ ಮೃತಪಟ್ಟ ನಂತರ ಅವರು ಮತ್ತೊಬ್ಬ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದರು. ಪತ್ನಿಯ ಒಡವೆ ಮತ್ತು ಆಸ್ತಿಯನ್ನು ಆಕೆಗೆ ನೀಡಿದ್ದರು ಮತ್ತು ಮಕ್ಕಳಿಗೆ ಆಸ್ತಿಯನ್ನು ನೀಡಿರಲಿಲ್ಲ. ಇದರಿಂದಾಗಿ ಆಕ್ರೋಶಗೊಂಡಿದ್ದ ಜೆನ್ಸನ್ ಕೊರಿಯಾ ಅವರು ತಂದೆಯನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. [ಕಿರಿಕ್ ಮಾಡಿದ ಹುಡುಗನನ್ನು ಅಪಹರಿಸಿ ಕೊಂದರು]

ಫೆ.22ರ ಸೋಮವಾರ ಸಂಜೆ ತಂದೆ ಮನೆಗೆ ಜೆನ್ಸನ್ ಬಂದಾಗ ಅವರು ಮಹಿಳೆಯ ಜೊತೆ ಪೋನಿನಲ್ಲಿ ಮಾತನಾಡುತ್ತಿದ್ದರು. ಇದರಿಂದಾಗಿ ಅಪ್ಪ ಮತ್ತು ಮಕ್ಕಳ ನಡುವೆ ಜಗಳ ಆರಂಭವಾಗಿದೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ.

ತಂದೆಯನ್ನು ನೆಲಕ್ಕೆ ತಳ್ಳಿದ ಜೆನ್ಸನ್ ಉಸಿರುಗಟ್ಟಿಸಿ ಅವರನ್ನು ಕೊಲೆ ಮಾಡಿದ್ದಾನೆ. ನಂತರ ಶವವನ್ನು ಬೆಡ್‌ ರೂಂಗೆ ಎಳೆದುಕೊಂಡು ಹೋಗಿ, ಯಾರಿಗೂ ಅನುಮಾನ ಬರಬಾರದು ಎಂದು ಮೈ ಮೇಲೆ ಕಾರ ಮತ್ತು ಧನಿಯಾ ಪುಡಿಯ ಹಾಕಿ ಅಲ್ಲಿಂದ ಪರಾರಿಯಾಗಿದ್ದ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru RMC Yard Police have solved the murder of realtor Gilbert Correya by arresting his son Janson Correya. Janson killed his father on February 22, 2016. During the police interrogation Janson said that, his father had a lover and was leading a lavish life even though his wife passed away and blamed his father for not taking care of his mother, had given a part of his property to his alleged lover.
Please Wait while comments are loading...