ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚೀನಿ ಕಾಯಿಗೆಷ್ಟು? ಜೋಡಿ ಕಬ್ಬಿಗೆಷ್ಟು? ಹೂವಿನ ದರ ಎಷ್ಟಿದೆ?

|
Google Oneindia Kannada News

ಬೆಂಗಳೂರು, ಜನವರಿ, 13: ಸಂಕ್ರಾಂತಿ ಹಬ್ಬ ಎದುರಿಗಿದೆ. ಇದಾದ ಮೇಲೆ ಒಂದೊಂದೆ ಹಬ್ಬಗಳ ಸಾಲು. ಜನರಿಗೆ ಹಾಲಿನ ದರ ಏರಿಕೆ ಬಿಸಿಯನ್ನೇ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಅದರೊಂದಿಗೆ ಇದೀಗ ತರಕಾರಿ, ಹಣ್ಣು, ಬೇಳೆ ಕಾಳು ದರ ಏರಿಕೆ ಮನೆ ಯಜಮಾನನ ಜೇಬು ಸುಡುತ್ತಿದೆ.

ಜೋರು ಚಳಿಯ ನಡುವೆ ಖರೀದಿ ಭರಾಟೆಯ ಬಿಸಿ ಹೆಚ್ಚಾಗುತ್ತಿದೆ. ಜಯನಗರ, ಎನ್ ಆರ್ ಕಾಲೋನಿ, ಕೆಆರ್ ಮಾರುಕಟ್ಟೆ, ಮಲ್ಲೇಶ್ವರಂ, ವಿಜಯನಗರ, ಬಸವನಗುಡಿ, ಗಾಂಧಿಬಜಾರ್ ನಲ್ಲಿ ಬುಧವಾರ ಬೆಳಗ್ಗೆಯಿಂದಲೇ ಖರೀದಿ ಬರಾಟೆ ಆರಂಭವಾಗಿದೆ.[ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು?]

ಕಬ್ಬು, ಗೆಣಸು, ಕಡಲೇಕಾಯಿ ಮಾರಾಟ ಭರದಿಂದ ಸಾಗಿದೆ. ಸಂಕ್ರಾಂತಿ ಹಬ್ಬಕ್ಕೆ ಅಗತ್ಯವೆನಿಸಿದ ಅಕ್ಕಿ, ಬೇಳೆ, ಧಾನ್ಯಗಳ ಬೆಲೆಯೊಂದಿಗೆ ಹೂವು ಹಣ್ಣಿನ ಬೆಲೆಗಳು ಸಹ ಗಗನಕ್ಕೇರಿವೆ. ಕಾಕಡ, ಕನಕಾಂಬರ ಮೊದಲಾದ ಹೂವಿನ ಬೆಲೆಗಳು ಕೆಜಿಗೆ ರು.700 ವರೆಗಿದ್ದರೆ, ಸೇವಂತಿಗೆ, ಬಟನ್ಸ್ ಮೊದಲಾದ ಹೂವಿನ ಬೆಲೆಗಳು ರು.300 ರವರೆಗೂ ಇವೆ. ತರಕಾರಿಗಳ ಬೆಲೆಗಳು ಸಹ ಹಬ್ಬಕ್ಕು ಮುನ್ನವೇ ಏರಿಕೆಯಾಗಿವೆ. ಹಬ್ಬದ ಖರೀದಿಗೆ ಹೊರಡುವ ಮುನ್ನ ಈ ಪಟ್ಟಿ ನೋಡಿಕೊಂಡು ಹೋದರೆ ಒಳಿತು.

ಜೋಡಿ ಕಬ್ಬು 80 ರು.

ಜೋಡಿ ಕಬ್ಬು 80 ರು.

ಜೋಡಿ ಕಬ್ಬಿಗೆ ರು.80 ರಿಂದ ರು.130 ರು. ಇದೆ. ಸಂಜೆ ವೇಳೆ ದರದಲ್ಲಿ ಕೊಂಚ ಏರಿಕೆಯಾದರೂ ಆಶ್ಚರ್ಯವಿಲ್ಲ. ಮಂಡ್ಯ ಮತ್ತು ಮೈಸೂರು ಕಡೆಯಿಂದ ಮಹಾನಗರಕ್ಕೆ ಕಬ್ಬಿನ ಲಾರಿಗಳು ಧಾವಿಸಿವೆ.

ಎಲ್ಲಾ ಗ್ರಾಂ ಲೆಕ್ಕ

ಎಲ್ಲಾ ಗ್ರಾಂ ಲೆಕ್ಕ

ಹೂವನ್ನು ಗ್ರಾಂ ಲೆಕ್ಕಕ್ಕೆ ಇಳಿಸಲಾಗಿದ್ದು..100 ಗ್ರಾಂ ಗೆ 30 ರು. ಗುಲಾಬಿ ಹೂವಿಗೆ ಬೇರೆ ದರ ಎಂದು ಎನ್ ಆರ್ ಕಾಲೋನಿಯ ಹೂವಿನ ವ್ಯಾಪಾರಿ ನಂಜಮ್ಮ ಹೇಳಿದರು ಗುಂಡು ಮಲ್ಲಿಗೆ 100 ರಿಂದ 150 ರು. ಮಳ್ಳೆ ಹೂವು, ಕಾಕಡ 400 ರು.(ದಿಂಡು)ಗೆ ಮಾರಾಟವಾಗುತ್ತಿದೆ.

 ಚೀನಿ ಕಾಯಿ ಹೇಗಿದೆ?

ಚೀನಿ ಕಾಯಿ ಹೇಗಿದೆ?

ಹಬ್ಬಕ್ಕೆ ಅಗತ್ಯವಾಗಿ ಬೇಕಾದ ಚೀನಿ ಕಾಯಿ ಕೆಜಿಗೆ 30 ರು. ನಂತೆ ಮಾರಾಟವಾಗುತ್ತಿದೆ. ನಗರದ ಜನರ ಅಗತ್ಯಕ್ಕೆ ತಕ್ಕಂತೆ ಕಾಯಿಯನ್ನು ಕತ್ತರಿಸಿ ನೀಡಲಾಗುತ್ತಿದೆ.

ಶುಕ್ರವಾರ ಹಬ್ಬ?

ಶುಕ್ರವಾರ ಹಬ್ಬ?

ನಿಗದಿಯಂತೆ ಶುಕ್ರವಾರ(ಜನವರಿ 15) ಸಂಕ್ರಾಂತಿ ಹಬ್ಬ. ಆದರೆ ಕೆಲ ಪಂಚಾಂಗಗಳಲ್ಲಿ ಗುರುವಾರವೇ ಹಬ್ಬ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಸೂರ್ಯ ತನ್ನ ಪಥ ಬದಲಿಸಲಿದ್ದಾನೆ.

ಸಂಜೆಯೇ ಬೆಸ್ಟ್

ಸಂಜೆಯೇ ಬೆಸ್ಟ್

ಮಧ್ಯಾಹ್ನ ಅಥವಾ ಸಂಜೆ ಹಬ್ಬದ ಸಾಮಾನು ಖರೀದಿಗೆ ಒಳ್ಳೆಯ ಕಾಲ. ಬೆಳಗ್ಗಿನ ಚಳಿ ಮತ್ತು ರಾತ್ರಿಯ ಕೆಟ್ಟ ವಾತಾವರಣವನ್ನು ಮೀರಿ ಖರೀದಿ ಮಾಡಲು ಸಾಧ್ಯವಾಗುತ್ತದೆ.

ಅರಶಿನದ ಎಲೆ ಕಟ್ಟಿಗೆ 100 ರು

ಅರಶಿನದ ಎಲೆ ಕಟ್ಟಿಗೆ 100 ರು

ಕಡುಬು ಮಾಡಲು ಬಳಸುವ ಎಲೆ ಒಂದು ಕಟ್ಟಿಗೆ 100 ರು. ನಂತೆ ಮಾರಾಟವಾಗುತ್ತಿದೆ. ಒಂದು ಕಟ್ಟಿನಲ್ಲಿ 8 ರಿಂದ 10 ಎಲೆಗಳಿರುತ್ತವೆ.

English summary
Lets begin the year with positive thoughts and celebrate harvest festival Makara Sankranthi with good cheer!. The city bengaluru is ready for celebrating the festival. Here is a look of market prices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X