ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ರೇವ್ ಪಾರ್ಟಿಗೆ ದಕ್ಷಿಣ ಅಮೆರಿಕಾದ ನಂಟು

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಆಗಸ್ಟ್, 29 : ರೇವ್ ಪಾರ್ಟಿಗಳಿಗೆ ಮಾದಕ ವಸ್ತು ರವಾನೆ ಮಾಡುತ್ತಾ, ದಕ್ಷಿಣ ಅಮೆರಿಕಾದೊಂದಿಗೆ ನೇರ ಸಂಪರ್ಕ ಹೊಂದಿದ್ದ ವ್ಯಕಿಯನ್ನು ನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಸಮಾಜ ಘಾತುಕ ಕೃತ್ಯದಲ್ಲಿ ಭಾಗಿಯಾದ ವ್ಯಕ್ತಿಯೇ ಇಸ್ಮಾಯಿಲ್. ಈತ ಕಳೆದ ರಾತ್ರಿ ಸೌತ್ ಅಮೆರಿಕಾದಿಂದ ಬಂದಿದ್ದ 3 ಕೆಜಿ ಮಾದಕ ವಸ್ತುವನ್ನು ತೆಗೆದುಕೊಳ್ಳಲು ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದನು. ಈತನ ದುಷ್ಕೃತ್ಯದ ಸುಳಿವು ಪಡೆದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.[ಕೊಲ್ಲಾಪುರ ರೇವ್ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಸಚಿವರ ಬೆಂಬಲಿಗರು]

Bengaluru rave party and the South American link

ಇಸ್ಮಾಯಿಲ್‌ ನನ್ನು ತನಿಖೆಗೆ ಒಳಪಡಿಸಿದಾಗ ನಗರದಲ್ಲಿ ನಡೆಯುತ್ತಿರುವ ಹಲವಾರು ರೇವ್ ಪಾರ್ಟಿಗೆ ಡ್ರಗ್ಸ್ ರವಾನೆ ಮಾಡುತ್ತಿರುವುದಾಗಿ ಈತ ಒಪ್ಪಿಕೊಂಡಿದ್ದಾನೆ. ಜೊತೆಗೆ ತನ್ನೊಂದಿಗೆ ಭಾಗಿಯಾಗಿದ್ದ ನಗರದ ಕೆಲವು ವ್ಯಕ್ತಿಗಳ ಕುರಿತಾಗಿ ಸಂಪೂರ್ಣ ಮಾಹಿತಿ ನೀಡಿದ್ದಾನೆ.

ಮಾದಕ ವಸ್ತುಗಳಲ್ಲಿ ಕೊಕೈನ್ ಮತ್ತು ಕೆಟಾಮೈನ್ ಗಳಿಗೆ ಅಧಿಕ ಬೇಡಿಕೆ ಇದೆ. ರೇವ್ ಪಾರ್ಟಿಗಳು ನಗರದ ಹೊರ ವಲಯದಲ್ಲಿ ಹೆಚ್ಚಾಗಿ ನಡೆಯುತ್ತದೆ. ಅಲ್ಲದೇ ವೈಟ್ ಫೀಲ್ಡ್ ರೇವ್ ಪಾರ್ಟಿಯ ಪ್ರಮುಖ ಕೇಂದ್ರ ಎಂದು ಆರೋಪಿಯಿಂದ ತಿಳಿದ ಪೊಲೀಸರು ಇದೀಗ ವೈಟ್ ಫೀಲ್ಡ್ ಸುತ್ತಮುತ್ತ ಹದ್ದಿನ ಕಣ್ಣು ಇರಿಸಿದ್ದಾರೆ.

English summary
The Bengaluru Police are on the verge of establishing a direct link between the South American drug market and the rave parties that take place in the city. The arrest of one Islmail from South America has revealed that he was bringing in drugs from South America and supplying it at the rave parties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X