15ರ ಹರೆಯದ ಬಾಲಕಿ ಮೇಲೆ ಅತ್ಯಾಚಾರ ಎಸಗಿದವನ ಬಂಧನ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 01 : ರಾಜ್ಯದ ರಾಜಧಾನಿ ಬೆಂಗಳೂರು ಅಪರಾಧಗಳಿಗೂ ರಾಜಧಾನಿಯೇ ಆಗಿದೆ. ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಇಲ್ಲಿ ಅಪರಾಧಗಳು ಹೆಚ್ಚು, ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವುದು ಮತ್ತೊಂದು ಆತಂಕ.

ನಗರದಲ್ಲಿ ಮತ್ತೊಂದು ಅಮಾನುಷ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ, ಕಾಮುಕನೊಬ್ಬ 15 ವರ್ಷದ ಬಾಲಕಿಮೇಲೆ ಅತ್ಯಾಚಾರ ನಡಸಿ ಸಿಕ್ಕಿಹಾಕಿಕೊಂಡಿದ್ದಾನೆ.

ಪ್ರೀತಿಸಿದ ತಪ್ಪಿಗೆ ತಂದೆ, ಅಣ್ಣ, ಬಂಧುಗಳಿಂದ ಅತ್ಯಾಚಾರದ ಶಿಕ್ಷೆ!

ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯ ಚೌಡೇಶ್ವರಿ ದೇವಸ್ಥಾನ ಬಳಿ ಘಟನೆ ನಡೆದಿದ್ದ, ಬಿಹಾರ ಮೂಲದ ಬಡಗಿ ವಿಮಲ್ ಶರ್ಮಾ ಎಂಬುವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Bengaluru : Rapist arrested in Yelahanka

ಬಾಲಕಿಯೂ ಬಿಹಾರ ಮೂಲದವಳೇ ಎಂದು ಪೊಲೀಸರು ತಿಳಿಸಿದ್ದಾರೆ, ಆರೋಪಿ ಮತ್ತು ಸಂತ್ರಸ್ತೆ ಕುಟುಂಬದವರು ಸ್ನೇಹಿತರೆ ಆಗಿದ್ದು ಮೂರು ವರ್ಷಗಳಿಂದಲೂ ನಗರದಲ್ಲಿ ವಾಸಿಸುತ್ತಿದ್ದಾರೆ.

ಸಂಸ್ತ್ರಸ್ತೆಯ ತಂದೆ ಆರೋಪಿ ವಿಮಲ್ ಶರ್ಮನಿಗೆ ಸ್ನೇಹಿತ, ಆದರೆ ಆತ ಆರು ತಿಂಗಳ ಹಿಂದೆ ಅನಾರೋಗ್ಯದಿಂದ ನಿಧನಹೊಂದಿದ್ದ. ಪರಿಚಯದ ಕಾರಣ ವಿಮಲ್ ಶರ್ಮ ಸಂಸ್ತ್ರಸ್ಥೆಯ ಮನೆಗೆ ಹೋಗಿ ಬರುತ್ತಿದ್ದ.

ಬೆಂಗಳೂರಿನಲ್ಲಿ ರೌಡಿಶೀಟರ್ ತಂಡದಿಂದ ಗೃಹಿಣಿ ಮೇಲೆ ಸಾಮೂಹಿಕ ಅತ್ಯಾಚಾರ

ಮನೆಯಲ್ಲಿ ಸಂಸ್ತ್ರಸ್ತೆಯ ತಾಯಿ ಇಲ್ಲದ್ದನ್ನು ನೋಡಿಕೊಂಡು ಬಾಲಕಿ ಮೇಲೆ ಅತ್ಯಾಚಾರ ಮಾಡಿದ ವಿಮಲ್ ಶರ್ಮಾ, ಯಾರಿಗಾದರೂ ಹೇಳಿದರೆ ಹತ್ಯೆ ಮಾಡುವುದಾಗಿ ಬೆದರಿಸಿದ್ದಾನೆ. ವಿಮಲ್ ಶರ್ಮಾ ಮಾತಿಗೆ ಹೆದರಿದ ಬಾಲಕಿ ತಾಯಿಗೆ ವಿಷಯ ಹೇಳದೆ ಸುಮ್ಮನಾಗಿಬಿಟ್ಟಿದ್ದಾಳೆ.

ಬೆಳಕಿಗೆ ಬಂದದ್ದು ಹೀಗೆ
ಸಂತ್ರಸ್ತೆ ಓದುತ್ತಿರುವ ಶಾಲೆಯಲ್ಲಿ ಇತ್ತೀಚೆಗೆ 'ಲೈಂಗಿಕ ದೌರ್ಜನ್ಯ ತಡೆ' ಜಾಗೃತಿ ಕಾರ್ಯಕ್ರಮ ನಡೆದಿತ್ತು. ಯಾರಾದರೂ ಲೈಂಗಿಕ ಕಿರುಕುಳಕ್ಕೆ ಒಳಗಾದರೆ ತಮ್ಮ ಗಮನಕ್ಕೆ ತರುವಂತೆ ಆಡಳಿತ ಮಂಡಳಿಯು ವಿದ್ಯಾರ್ಥಿನಿಯರಿಗೆ ಹೇಳಿತ್ತು. ಆಗ ಸಂತ್ರಸ್ತೆ ಶಿಕ್ಷಕಿಯೊಬ್ಬರ ಬಳಿ ತನ್ನ ಪರಿಸ್ಥಿತಿಯನ್ನು ಹೇಳಿಕೊಂಡಿದ್ದಾಳೆ.

ಬಳಿಕ ಶಿಕ್ಷಕಿಯು ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ದರು. ಅದನ್ನು ಪರಿಶೀಲಿಸಿದ ಆಯೋಗದ ಸದಸ್ಯರು, ಯಲಹಂಕ ಠಾಣೆಗೆ ದೂರು ಕೊಟ್ಟಿದ್ದಾರೆ, ಅದರನ್ವಯ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೊ) ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vinod Sharma from Bihar arrested by Yelahanka police for allegedly raping a 15 year girl. girl says that Vinod Sharma raped her and threatened her if she tells anybody he will kill.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ