ರಾಜಗೋಪಾಲ ನಗರ, ಹೆಗ್ಗನಹಳ್ಳಿ ಇನ್ನೂ ಉದ್ವಿಗ್ನ

Posted By:
Subscribe to Oneindia Kannada

ಬೆಂಗಳೂರು, ಸೆ. 13: ಕಾವೇರಿ ವಿವಾದ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ರಾಜಗೋಪಾಲ ನಗರ, ಹೆಗ್ಗನಹಳ್ಳಿ ಸೇರಿದಂತೆ ನಗರದ 16 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಗ್ಯಾಲರಿ: ಸುಟ್ಟು ಭಸ್ಮವಾದ ಬಸ್ಸು ಲಾರಿಗಳು

ಆದರೆ, ರಾಜಗೋಪಾಲನಗರದಲ್ಲಿ ಕರ್ಫ್ಯೂ ಆದೇಶ ಉಲ್ಲಂಘಿಸಿ ಲಾರಿಯೊಂದಕ್ಕೆ ಬೆಂಕಿ ಹಚ್ಚಿರುವ ಘಟನೆ ಮಂಗಳವಾರ ನಡೆದಿದೆ.[ಬೆಂಗಳೂರಿನಲ್ಲಿ ಎಲ್ಲೆಲ್ಲಿ ಗಲಾಟೆ, ಪೊಲೀಸರ ಹೇಳಿಕೆ ಮಾತ್ರ ನಂಬಿ!]

Bengaluru : Rajagoplanagar Hegganahalli remains tense

ಇನ್ನೊಂದೆಡೆ ಹೆಗ್ಗನಹಳ್ಳಿಯಲ್ಲಿ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ. ಹೆಗ್ಗನಹಳ್ಳಿ ಮುಖ್ಯ ರಸ್ತೆಯಲ್ಲಿಮತ್ತೆ ಪ್ರತಿಭಟನೆ ಶುರುವಾಗಿದೆ. ಸಮೀಪದ ಪೀಣ್ಯದಲ್ಲಿ ಟೈರ್ ಗಳಿಗೆ ಬೆಂಕಿ ಹಾಕಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಬಿಗುವಿನ ವಾತಾವರಣ ಉಂಟಾಗಿದೆ.[ಕಾವೇರಿ ವಿವಾದದ ಬಗ್ಗೆ ಮೌನ ಮುರಿದ ಪ್ರಧಾನಿ ಮೋದಿ]

ನಗರದಲ್ಲಿ ಕೆಲವೆಡೆ ಬಿಎಂಟಿಸಿ ಬಸ್ ಗಳ ಓಡಾಟ ಆರಂಭಗೊಂಡಿದೆ. ಮೆಟ್ರೋ ರೈಲುಗಳ ಓಡಾಟ ಎರಡನೇ ದಿನವೂ ರದ್ದಾಗಿದೆ.

ಈ ನಡುವೆ ನಿನ್ನೆ ನಡೆದ ವಿಧ್ವಂಸಕ ಕೃತ್ಯದ ಬಗ್ಗೆ ಯಾವುದೇ ವಿಡಿಯೋ, ಫೋಟೋಗಳಿದ್ದರೆ ನಮಗೆ ಕಳಿಸಿ @BlrCityPolice ಗೆ ಕಳಿಸಿ ಅಥವಾ ವಾಟ್ಸಪ್ ನಂಬರ್ 9480801000 , ಇಮೇಲ್ : compolbcp@ksp.gov.in ಮಾಡಿ ಎಂದು ಬೆಂಗಳೂರು ನಗರ ಪೊಲೀಸರು ಕೋರಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Rajagoplanagar : Hegganahalli where a protestor who was shot down remains tense. Tyres burnt. Effigies of Jayalalithaa too burnt. Protestors set fire to the same bus they had burnt half yesterday at Timber Yard layout.
Please Wait while comments are loading...