ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

115 ವರ್ಷಗಳ ದಾಖಲೆ ಮುರಿಯಲು ಸಜ್ಜಾಗಿದೆ ಬೆಂಗಳೂರು ಮಳೆ

By Sachhidananda Acharya
|
Google Oneindia Kannada News

ಬೆಂಗಳೂರು, ಅಕ್ಟೋಬರ್ 15: ನಗರದಲ್ಲಿ ದಿನ ನಿತ್ಯ ಆರ್ಭಟಿಸುತ್ತಿರುವ ಮಳೆ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ಇನ್ನು 60 ಮಿಲಿಮೀಟರ್ ಮಳೆ ಸುರಿದರೆ ಸಾಕು ಕಳೆದ 115 ವರ್ಷಗಳ ದಾಖಲೆ ಪುಡಿಯಾಗಲಿದೆ.

In Pics : ಬೆಂಗಳೂರನನ್ನು ಮುಳುಗಿಸಿದ ಪ್ರಳಯಸದೃಶ ಮಳೆ

ಬೆಂಗಳೂರಿನ ಮಳೆಯ ಬಗ್ಗೆ ಇರುವ 115 ವರ್ಷಗಳ ದಾಖಲೆ ಪ್ರಕಾರ 2005ರಲ್ಲಿ ಅತೀ ಹೆಚ್ಚಿನ ಮಳೆ ಸುರಿದಿದೆ. 2005ರಲ್ಲಿ 1606.8 ಮಿ.ಮೀ. ಮಳೆಗೆ ಬೆಂಗಳೂರು ಸಾಕ್ಷಿಯಾಗಿತ್ತು.

Bengaluru rains going to break 115 years old rainfall record

ಈ ಬಾರಿ ಅಕ್ಟೋಬರ್ 14ರವರೆಗೆ 1540 ಮಿಲಿಮೀಟರ್ ಮಳೆಯಾಗಿದೆ. ಇನ್ನು 60 ಮಿ.ಮೀ ಮಳೆ ಸುರಿದರೆ 2005ರ ದಾಖಲೆ ಮುರಿದು ಕಳೆದ 115 ವರ್ಷಗಳಲ್ಲೇ ಅತೀ ಹೆಚ್ಚು ಮಳೆ ಬಿದ್ದ ವರ್ಷ ಎಂಬ ದಾಖಲೆಗೆ 2017 ಪಾತ್ರವಾಗಲಿದೆ.

ಬೆಂಗಳೂರು ದಕ್ಷಿಣದ ಜನರಿಗೆ ಮತ್ತೆ ಸಂಕಷ್ಟ ತಂದ ಮಳೆಬೆಂಗಳೂರು ದಕ್ಷಿಣದ ಜನರಿಗೆ ಮತ್ತೆ ಸಂಕಷ್ಟ ತಂದ ಮಳೆ

ಇನ್ನು ಅಕ್ಟೋಬರ್ ತಿಂಗಳ ವಿಚಾರಕ್ಕೆ ಬಂದರೆ ಇಲ್ಲಿಯವರೆಗೆ 312 ಮಿಲಿಮೀಟರ್ ಮಳೆಯಾಗಿದೆ. ಕಳೆದ 10 ವರ್ಷಗಳಲ್ಲಿ ಗರಿಷ್ಠ ಅಂದರೆ 2014ರಲ್ಲಿ 343.8 ಮಿಲಿಮೀಟರ್ ಮಳೆ ಸುರಿದಿದ್ದು ಇದೀಗ ಆ ದಾಖಲೆಯನ್ನು ಮೀರಿಸುವ ಹಾದಿಯಲ್ಲಿ 2017ರ ಅಕ್ಟೋಬರ್ ತಿಂಗಳಿದೆ.

English summary
With the southwest monsoon continuing to stay heavy over interior regions of Karnataka, the Bengaluru city witnessed highest ever annual rainfall this year breaking the record of 115 years. The highest ever was recorded earlier in 2005 with more than 1606.8 mm rainfall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X