ಬೆಂಗಳೂರು: ಬೆಳ್ಳಂದೂರು ಕರೆ ಮತ್ತೆ ವಿಷದ ಒಡಲು

Written By:
Subscribe to Oneindia Kannada

ಬೆಂಗಳೂರು, ಮೇ 23: ಬೆಳ್ಳಂದರು ಕೆರೆ ಮತ್ತೆ ಬೆಳ್ಳಗಾಗಿದೆ. ಮತ್ತೆ ರಾಸಾಯನಿಕ ತುಂಬಿದ ನೊರೆ ಕೆರೆಯಲ್ಲಿ ತುಂಬಿಕೊಂಡಿದ್ದು ಕೋಡಿಯಾಗಿ ಹರಿದಿದೆ.

ನಗರದಲ್ಲಿ ಕಳೆದ ಒಂದು ವಾರದಿಂದ ನಗರದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೀರಿನ ಹರಿವು ಹೆಚ್ಚಿರುವುದರ ಪರಿಣಾಮ ನೊರೆ ತುಂಬಿಕೊಂಡಿದ್ದು ಸ್ಥಳೀಯರಲ್ಲಿ ಅತಂಕಕ್ಕೆ ಕಾರಣವಾಗಿದೆ.[ಒಡಲಲಿ ವಿಷ ತುಂಬಿಕೊಂಡ ಯಮಲೂರು ಕೆರೆಯ ಕಥೆ ವ್ಯಥೆ]

rain

ಒಂದೆಡೆ ರಾಜಕಾಳುವೆ ಕಿರಿದಾಗಿದ್ದು ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ತಗ್ಗು ಪ್ರದೇಶಗಳಿಗೂ ನೀರು ನುಗ್ಗಿದ್ದು ನಾಗರಿಕರು ಪರದಾಡುವಂತಾಗಿದೆ. ಯಮಲೂರಿನಿಂದ ಕರಿಯಮ್ಮನ ಅಗ್ರಹಾರದ ಮೂಲಕ ಹೊರವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗವು ಜಲಾವೃತ್ತವಾಗಿದ್ದು ವಾಹನ ಸಂಚಾರ ಅಸಾಧ್ಯವಾಗಿದೆ.[ಬೆಳ್ಳಂದೂರು ಕೆರೆ ಶುದ್ಧೀಕರಣ ಸಮಿತಿಯಲ್ಲಿ ಯಾರ್ಯಾರಿದ್ದಾರೆ?]

ಸಮಿತಿ ನೇಮಕ: ರಾಸಾಯನಿಕ ತುಂಬಿರುವ ಬೆಳ್ಳಂದೂರು ಕೆರೆ ಪುನಶ್ಚೇತನ ಹಾಗೂ ಅಭಿವೃದ್ಧಿಗೆ ಸಂಬಂಧಿಸಿ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 18 ಸದಸ್ಯರ ತಜ್ಞರ ಸಮಿತಿಯನ್ನು ಸರ್ಕಾರ ರಚನೆ ಮಾಡಲಾಗಿದೆ. ಈ ಕೆರೆಯನ್ನು ಯಾವ ಆಧಾರದಲ್ಲಿ ಶುದ್ಧ ಮಾಡಬಹುದು? ಪರ್ಯಾಯ ಪರಿಹಾರ ಕ್ರಮಗಳು ಏನು? ಎಂಬುದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಆರು ವಾರಗಳಲ್ಲಿ ವರದಿ ಸಲ್ಲಿಸಲು ಸಮಿತಿಗೆ ಸೂಚನೆ ನೀಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The toxic foam is back at the Bengaluru Bellandur lake after heavy rain. The level of froth has doubled giving nightmare to local residents and road users.
Please Wait while comments are loading...