ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೀಘ್ರದಲ್ಲೇ 115 ರೈಲ್ವೇ ಸ್ಟೇಶನ್ ಗಳಲ್ಲಿ ಹೈ ಸ್ಪೀಡ್ ವೈಫೈ ಸೌಲಭ್ಯ

|
Google Oneindia Kannada News

Recommended Video

ಶೀಘ್ರದಲ್ಲೇ ರೈಲ್ವೇ ಸ್ಟೇಶನ್ ಗಳಲ್ಲಿ ಹೈ ಸ್ಪೀಡ್ ವೈಫೈ ಸೌಲಭ್ಯ | Oneindia Kannada

ಬೆಂಗಳೂರು, ಜೂನ್ 25: ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮತ್ತು ಯಶವಂತಪುರ ರೈಲು ನಿಲ್ದಾಣ ಸೇರಿದಂತೆ 115 ರೈಲ್ವೇ ನಿಲ್ದಾಣಗಳು ಹೈ ಸ್ಪೀಡ್ ವೈಫೈ ಸೌಲಭ್ಯ ಪಡೆಯಲಿವೆ.

ನೈರುತ್ಯ ರೈಲ್ವೇಯ 115 ರೈಲು ನಿಲ್ದಾಣಗಳು 18 ತಿಂಗಳಿನಲ್ಲಿ ಹೈಸ್ಪೀಡ್ ವೈಫೈ ಪಡೆಯಲಿದ್ದು, ಈಗಾಗಲೇ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಯಶವಂತಪುರ ಮತ್ತು ಮೈಸೂರು, ಹುಬ್ಬಳ್ಳಿ ರೈಲು ನಿಲ್ದಾಣಗಳು ಫ್ರೀ ವೈಫೈ ಸೌಲಭ್ಯ ಪಡೆದಿವೆ.

ನಮ್ಮ ಮೆಟ್ರೋದಲ್ಲಿ ವೈಫೈ? ಆದಾಯ ಹೆಚ್ಚಾದರೆ ಆ ಭಾಗ್ಯವೂ ಇದೆ!ನಮ್ಮ ಮೆಟ್ರೋದಲ್ಲಿ ವೈಫೈ? ಆದಾಯ ಹೆಚ್ಚಾದರೆ ಆ ಭಾಗ್ಯವೂ ಇದೆ!

ಈಗ ಜಗತ್ತು ಡಿಜಿಟಲ್ ಲೋಕಕ್ಕೆ ತೆರೆದುಕೊಂದಿರುವ ಕಾರಣ ಹೈ ಸ್ಪೀಡ್ ವೈಫೈ ಸೌಲಭ್ಯ ನೀಡಿ ರೈಲ್ವೇ ಇಲಾಖೆಯಲ್ಲಿ ಮತ್ತಷ್ಟು ಗುಣಮಟ್ಟ ಹೆಚ್ಚಿಸುವ ಇಂಗಿತವನ್ನು ಇಲಾಖೆ ಹೊಂದಿದೆ. 2016 ಕೇಂದ್ರ ಬಜೆಟ್ ನಲ್ಲಿ ಈ ಪ್ರಸ್ತಾಪವನ್ನಿಡಲಾಗಿತ್ತು.

Bengaluru: Railway stations to get high-speed wifi

ಪ್ರಯಾಣಿಕರು 30 ನಿಮಿಷಗಳಲ್ಲಿ ಅಪ್ಲೋಡ್ ಗೆ ಸೆಕೆಂಡಿಗೆ 1mb ಮತ್ತು ಡೌನ್ ಲೋಡ್ ಗೆ ಸೆಕೆಂಡಿಗೆ 3mb ಸ್ಪೀಡ್ ನಲ್ಲಿ ಅಂತರ್ಜಾಲವನ್ನು ಉಪಯೋಗಿಸಬಹುದಾಗಿದೆ. ಇದು ಮೊದಲ 30 ನಿಮಿಷ ಮಾತ್ರ. ನಂತರ ಕ್ರಮೇಣ ಸ್ಪೀಡ್ ಕಡಿಮೆಯಾಗುತ್ತ ಹೋಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಎಲ್ಲವೂ ಅಂದುಕೊಂಡಂತೆ ಆದರೆ ಇನ್ನು 18 ತಿಂಗಳಿನಲ್ಲಿ ದೇಶದ ಪ್ರಮುಖ ರೈಲ್ವೇ ನಿಲ್ದಾಣಗಳು ಹೈಸ್ಪೀಡ್ ವೈಫೈ ಸೌಲಭ್ಯ ಪಡೆಯಲಿವೆ.

English summary
115 railways stations of South Western Railways(SWR) including Krantiveer Sangolli Rayanna and Yashwantpur railway stations will get high speed WiFi system in 18 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X