ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ರೈಲ್ವೆ ನಿಲ್ದಾಣ ಸ್ವಚ್ಛತೆಯಲ್ಲಿ ಪರ್ವಾಗಿಲ್ಲ ಅಂತೆ!

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 18: ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಒದಗಿಸುವ ಸೌಲಭ್ಯ ಕುರಿತು ನಡೆಸಿದ್ದ ಥರ್ಡ್‌ ಪಾರ್ಟಿ ಸಮೀಕ್ಷೆಯಲ್ಲಿ ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ ರೈಲ್ವೆ ನಿಲ್ದಾಣ 11ನೇ ಸ್ಥಾನ ಗಳಿಸಿದೆ.

ವಾರ್ಷಿಕ 50 ಕೋಟಿ ಆದಾಯಗಳಿಸುವ ಎ1 ವಿಭಾಗದ ಒಟ್ಟು 75 ರೈಲ್ವೆ ನಿಲ್ದಾಣಗಳು ಹಾಗೂ 6ರಿಂದ 50 ಕೋಟಿ ರೂ.ಆದಾಯವಿರುವ ಮೂರು ವಿಭಾಗಗಳ 332 ರೈಲು ನಿಲ್ದಾಣಗಳಲ್ಲಿನ ಶೌಚಗೃಹಗಳು, ಸ್ವಚ್ಛತೆ ಕುರಿತು ಸಮೀಕ್ಷೆ ನಡೆಸಲಾಗಿದೆ. ಎ1ವಿಭಾಗದಲ್ಲಿ ಬೆಂಗಳೂರು ನಗರ ನಿಲ್ದಾಣ 11 ನೇ ಸ್ಥಾನ ಪಡೆದಿದ್ದರೆ ಯಶವಂತಪುರ ರೈಲ್ವೆ ನಿಲ್ದಾಣ 28ನೇ ಸ್ಥಾನ ಪಡೆದಿದೆ.

ಚೇರ್‌ಕಾರ್‌ ಪ್ರಯಾಣ ಉತ್ತೇಜನಕ್ಕೆ ನೈಋತ್ಯ ರೈಲ್ವೆ ಕ್ರಮ: ದರವೂ ಕಡಿತಚೇರ್‌ಕಾರ್‌ ಪ್ರಯಾಣ ಉತ್ತೇಜನಕ್ಕೆ ನೈಋತ್ಯ ರೈಲ್ವೆ ಕ್ರಮ: ದರವೂ ಕಡಿತ

ಎವಿಭಾಗದಲ್ಲಿ ಮೈಸೂರು ನಿಲ್ದಾಣ 9ನೇ ಸ್ಥಾನ ಪಡೆದರೆ ಒಟ್ಟು 332 ನಿಲ್ದಾಣಗಳ ಪೈಕಿ ಕಲಬುರಗಿ ರೈಲ್ವೆ ನಿಲ್ದಾಣ ಅಂತಿಮ ಸ್ಥಾನ ಪಡೆದಿದೆ. ದಾವಣಗೆರೆ ರೈಲು ನಿಲ್ದಾಣ 74, ಕೆಂಗೇರಿ-112, ಮಂಗಳೂರು-48ನೇ ಸ್ಥಾನ, ರಾಯಚೂರು 121, ಬೆಳಗಾವಿ 154, ಯಾದಗಿರಿ 182, ಬಳ್ಳಾರಿ ನಿಲ್ದಾಣ 210ನೇ ಸ್ಥಾನ ಪಡೆದಿದೆ.

Bengaluru railway station stands at 11 in cleanliness

ಸಮೀಕ್ಷಾ ತಂಡವು ಶೌಚಗೃಹ ನಿರ್ವಹಣೆ, ಕುಡಿಯುವ ನೀರಿನ ವ್ಯವಸ್ಥೆಗಾಗಿ ಕೈಗೊಂಡ ಕ್ರಮಗಳನ್ನು ಪರಿಶೀಲಿಸಿದರು. ಸಮೀಕ್ಷಾ ವರದಿಯಲ್ಲಿ ಎ1 ವಿಭಾಗದಲ್ಲಿ ಜೋಧಪುರ ರೈಲು ನಿಲ್ದಾಣ ಮೊದಲ ಸ್ಥಾನ ಗಳಿಸಿದೆ. ಜೈಪುರ 2ನೇ ಸ್ಥಾನ, ತಿರುಪತಿ 3ನೇ ಸ್ಥಾನ ಗಳಿಸಿದೆ.

ಭಿಕ್ಷೆ ಬೇಡುವ ಮಹಿಳೆಯರ ಕಂಕುಳಲ್ಲಿನ ಮಕ್ಕಳು ಏಕೆ ಸದಾ ಮಲಗಿರ್ತವೆ?ಭಿಕ್ಷೆ ಬೇಡುವ ಮಹಿಳೆಯರ ಕಂಕುಳಲ್ಲಿನ ಮಕ್ಕಳು ಏಕೆ ಸದಾ ಮಲಗಿರ್ತವೆ?

ಎ ವಿಭಾಗದಲ್ಲಿ ಮಾರವಾರ್‌ ನಿಲ್ದಾಣ ಮೊದಲ ಸ್ಥಾನ ಗಳಿಸಿದೆ.ಪುಲೀರಾ ನಿಲ್ದಾಣ ಎರಡನೇ ಸ್ಥಾನ ಹಾಗೂ ವಾರಂಗಲ್‌ ನಿಲ್ದಾಣ ಮೂರನೇ ಸ್ಥಾನ ಪಡೆದಿದೆ.

English summary
Krantiveera Sangollli Rayanna railway station of Bengaluru has got 11th place in cleanliness and providing facility to passengers, a survey revealed conducted by railway department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X