ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ರೈಲ್ವೆ ಮುಂಗಡ ಟಿಕೆಟ್ ಬುಕಿಂಗ್ ಗಾಗಿ ಹೊಸ ವ್ಯವಸ್ಥೆ

By Vanitha
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್,23: ಮುಂಗಡ ರೈಲ್ವೆ ಟಿಕೆಟ್ ನ್ನು ಕೆಲವರು ಆನ್ ಲೈನ್ ನಲ್ಲಿ ಬುಕ್ ಮಾಡುತ್ತಾರೆ. ಇನ್ನು ಕೆಲವರು ಸಿಟಿ ರೈಲ್ವೆ ನಿಲ್ದಾಣಕ್ಕೆ ಬಂದು ಟಿಕೆಟ್ ಬುಕ್ ಮಾಡುವವರು ಮಾರುದ್ದದ ಸಾಲಿನಲ್ಲಿನ ನೂಕಾಟ, ತಳ್ಳಾಟಗಳನ್ನು ಅನುಭವಿಬೇಕಾಗಿತ್ತು. ಆದರೆ ಇದೀಗ ಟೋಕನ್ ಸಂಖ್ಯೆ ಕರೆದಾಗ ಹೋಗಿ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸಿಟಿ ರೈಲ್ವೆ ನಿಲ್ದಾಣದಲ್ಲಿ 'ಡಿಜಿಟಲ್ ಡೈನಮಿಕ್ ಕ್ಯೂ ಮ್ಯಾನೇಜ್ ಮೆಂಟ್ ಸಿಸ್ಟಂ' ಅಳವಡಿಸಲಾಗಿದ್ದು, ಸೆಪ್ಟೆಂಬರ್ 22ರ ಮಂಗಳವಾರದಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸಂಜೀವ್ ಅಗರ್ ವಾಲಾ ಚಾಲನೆ ನೀಡಿದರು.[ರೈಲ್ವೆ ಟಿಕೆಟ್ ಕನ್ ಆರ್ಮ್ ಆಗಿಲ್ಲವೇ? ಚಿಂತೆ ಬಿಡಿ]

bengaluru railway station gets digital dynamic queue management system

ಟೋಕನ್ ಮಾದರಿ:

ಟಿಕೆಟ್ ಕಾಯ್ದಿರಿಸಲು ಒಂದು ಅರ್ಜಿಯನ್ನು ನೀಡಲಾಗುತ್ತದೆ. ಇದರಲ್ಲಿ ದಿನಾಂಕ ಮತ್ತು ಸಮಯದ ಸಮೇತ ಟೋಕನ್ ನಂಬರ್ ಮೊದಲೇ ಮುದ್ರಿತವಾಗಿರುತ್ತದೆ. ನಂತರ ಈ ಅರ್ಜಿಯನ್ನು ಭರ್ತಿ ಮಾಡಿ ಆರಾಮವಾಗಿ ಕುಳಿತುಕೊಳ್ಳಬಹುದು. ಬಳಿಕ ಕೌಂಟರ್ ಮೇಲಿನ ಡಿಸ್ ಪ್ಲೇನಲ್ಲಿ ಟೋಕನ್ ಸಂಖ್ಯೆ ಮೂಡಿದಾಗ ನಿಗದಿತ ಕೌಂಟರ್ ಗೆ ಹೋಗಿ ಟಿಕೆಟ್ ಕಾಯ್ದಿರಿಸಬಹುದು.

ಈ ಮೊದಲು ಹೇಗಿತ್ತು ವ್ಯವಸ್ಥೆ ?

ಈ ಮೊದಲು ಟಿಕೆಟ್ ಬುಕ್ ಮಾಡಲು ಅರ್ಜಿ ಪಡೆದು, ಭರ್ತಿ ಮಾಡಿದ ನಂತರ ಟಿಕೆಟ್ ಪಡೆಯಲು ಸಾಲಿನಲ್ಲಿ ನಿಂತು ಟಿಕೆಟ್ ಪಡೆಯಬೇಕಿತ್ತು. ಅರ್ಜಿ ಭರ್ತಿ ಮಾಡುವುದರೊಳಗೆ ಸಾಲು ಮಾರುದ್ದ ಹೋಗಿದ್ದರೆ, ಪುನಃ ಕೊನೆಯಲ್ಲಿ ನಿಂತು ದಿನಗಟ್ಟಲೇ ಟಿಕೆಟ್ ಕಾಯ್ದಿರಿಸಲು ಹೆಣಗಾಡಬೇಕಾಗಿತ್ತು. ಈಗ ಈ ಎಲ್ಲಾ ಸಮಸ್ಯೆಗಳಿಗೆ ತೆರೆ ಎಳೆದು ಬ್ಯಾಂಕ್ ಗಳಲ್ಲಿನ ಟೋಕನ್ ವ್ಯವಸ್ಥೆ ಮಾದರಿಯನ್ನು ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾಗಿದೆ.

English summary
bengaluru railway station gets digital dynamic queue management system. This system was inaguarated by the divisional manager of Bangalore railway division, Sanjiv Agarwal on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X