ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2020 ಕ್ಕೆ ಪೂರ್ಣವಾಗಲಿದೆ ರಾಗಿಗುಡ್ಡ-ಸಿಲ್ಕ್ ಬೋರ್ಡ್ ಮೇಲ್ಸೇತುವೆ

|
Google Oneindia Kannada News

ಬೆಂಗಳೂರು, ಜುಲೈ 10: ಬಿಬಿಎಂಪಿ ಮತ್ತು ಬಿಎಂಆರ್ ಸಿಎಲ್ ಜಂಟಿಯಾಗಿ ಹಣಹೂಡುವ ಮೂಲಕ ರಾಗಿಗುಡ್ಡ-ಸಿಲ್ಕ್ ಬೋರ್ಡ್ ಮೇಲ್ಸೇತುವೆಯನ್ನು ಕೈಗೆತ್ತಿಕೊಳ್ಳಲಿದೆ.

ಕಂಬದ ಮೇಲೊಂದು ಗಿಡವ ನೆಟ್ಟು.. ಏನಿದು 'ವರ್ಟಿಕಲ್ ಗಾರ್ಡನ್'?ಕಂಬದ ಮೇಲೊಂದು ಗಿಡವ ನೆಟ್ಟು.. ಏನಿದು 'ವರ್ಟಿಕಲ್ ಗಾರ್ಡನ್'?

ಜಯನಗರದ 9 ನೇ ಬ್ಲಾಕ್ ನಲ್ಲಿರುವ ರಾಗಿಗುಡ್ಡ ದೇವಸ್ಥಾನದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ 800 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಪಥದ ಮೇಲ್ಸೇತುವೆ ನಿರ್ಮಿಸುವ ಯೋಜನೆ ಮೆಟ್ರೋ ರೈಲು ಮಾರ್ಗಗಳನ್ನೂ ಒಳಗೊಂಡಿರುತ್ತದೆ ಎಂಬುದು ವಿಶೇಷ.

ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಮೇಲ್ಸೇತುವೆ ಸಂಚಾರಕ್ಕೆ ಮುಕ್ತದೇವೇಗೌಡ ಪೆಟ್ರೋಲ್ ಬಂಕ್ ಬಳಿ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ

Bengaluru: Ragigudda-Silk board Flyover will be opened to public on 2020

2016-17 ನೇ ಸಾಲಿನ ಬಜೆಟ್ ನಲ್ಲಿ ಈ ಮೇಲ್ಸೇತುವೆ ಯೋಜನೆಯನ್ನು ಘೋಷಿಸಲಾಗಿತ್ತು. 4 ಕಿ.ಮೀ.ಉದ್ದದ ಈ ಮೇಲ್ಸೇತುವೆ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. 8 ಮೀ ಎತ್ತರದಲ್ಲಿ ವಾಹನ ಸಂಚಾರಕ್ಕೆ ಚತುಷ್ಪಥ ಎಲಿವೇಟರ್ ರಸ್ತೆ ಮತ್ತು 16 ಮೀ. ಎತ್ತರದ ಎರಡನೇ ಅಂತಸ್ತಿನಲ್ಲಿ ಮೇಲ್ಸೇತುವೆಯಲ್ಲಿ ಮೆಟ್ರೋ ಹಳಿ ನಿರ್ಮಾಣವಾಗಲಿದೆ.

English summary
BBMP and BMRCL mutually agreed to share cost to build an integrated flyover and metro track from Ragigudda temple in Jayanagar 9th block to Silk Board junction. The total project costs Rs 800 crore. It will be opened for publics probably on 2020
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X