ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುರಭವನದೆದುರು ರಾಘವೇಶ್ವರ ಭಕ್ತರ 'ಯಕ್ಷಗಾನ' ಪ್ರತಿಭಟನೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್. 11: ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ಗಳ ತೇಜೋವಧೆ ಮಾಡಲಾಗುತ್ತಿದೆ. ಹಣದ ಆಸೆಗೆ ಬಿದ್ದು ಸುಳ್ಳು ದೂರಿ ದಾಖಲು ಮಾಡಲಾಗುತ್ತಿದೆ ಎಂದು ಆರೋಪಿಸಿ ರಾಮಚಂದ್ರಾಪುರ ಮಠದ ಭಕ್ತರು ಪ್ರತಿಭಟನೆ ನಡೆಸಿದರು.

ಬೆಂಗಳೂರಿನ ಪುರಭವನದ ಎದುರು ಯಕ್ಷಗಾನದ ವೇಷಧಾರಿಗಳನ್ನು ಬಳಸಿಕೊಂಡು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ ಭಕ್ತರು, ಮಠ ಮತ್ತು ಸ್ವಾಮೀಜಿ ಪರ ಘೋಷಣೆ ಕೂಗಿದರು.[ರಾಘವೇಶ್ವರ ಶ್ರೀ ಭಕ್ತರಿಂದ ಮಾಧ್ಯಮಗಳಿಗೆ 13 ಪ್ರಶ್ನೆಗಳು]

ಹಣ ಮತ್ತು ಇತರ ಆಮಿಷಕ್ಕೆ ಒಳಗಾಗಿರುವ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮಠದ ಪರಂಪರೆಗೆ ಧಕ್ಕೆ ತರಲು ಯತ್ನ ಮಾಡುತ್ತಿದ್ದಾರೆ. ಸ್ವಾಮೀಜಿ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂಬ ಆರೋಪ ಸುಳ್ಳು. ಈಗಾಗಲೇ ಒಂದು ಬಾರಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಮತ್ತೆ ಮತ್ತೆ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನ ಮಾಡಲಾಗುತ್ತಿದೆ ಎಂದು ಮರಳು ಕಲಾಕೃತಿ ಕಲಾವಿದ ರಾಘವೇಂದ್ರ ಹೆಗಡೆ ಆರೋಪಿಸಿದರು. ಮಹಿಳಾ ಭಕ್ತರು ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷ.

ಯಕ್ಷಗಾನ ವೇಷಧಾರಿಗಳು

ಯಕ್ಷಗಾನ ವೇಷಧಾರಿಗಳು

ಪ್ರತಿಭಟನೆಯಲ್ಲಿ ಯಕ್ಷಗಾನ ವೇಷಧಾರಿಗಳು ಪಾಲ್ಗೊಂಡಿದ್ದರು. ಚಂಡೆ ನಾದಕ್ಕೆ ಹೆಜ್ಜೆ ಹಾಕಿ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.

ಸದ್ಭಾವನಾ ಒಕ್ಕೂಟ

ಸದ್ಭಾವನಾ ಒಕ್ಕೂಟ

ಸದ್ಭಾವನಾ ಒಕ್ಕೂಟ ಆಶ್ರಯದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಸನಾತನ ಸಂಪ್ರದಾಯ ಮುರಿಯಲು ಯತ್ನ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಚಂಡೆ ನಾದಕ್ಕೆ ಹೆಜ್ಜೆ

ಚಂಡೆ ನಾದಕ್ಕೆ ಹೆಜ್ಜೆ

ಸ್ವಾಮೀಜಿಗಳ ತೇಜೋವಧೆ ಮಾಡಲಾಗುತ್ತಿದ್ದು ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಭಕ್ತರು ಆರೋಪ ಮಾಡಿದರು.

ಮಹಿಳೆಯರು ಭಾಗಿ

ಮಹಿಳೆಯರು ಭಾಗಿ

ಪ್ರತಿಭಟನೆಯಲ್ಲಿ ಮಠದ ಮಹಿಳಾ ಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷ. ಸ್ಮಾಮೀಜಿಗಳ ವಿರುದ್ಧ ಆರೋಪ ಮಾಡಿದವರ ನಡವಳಿಕೆಯನ್ನು ಮಹಿಳೆಯರು ಖಂಡಿಸಿದರು.

English summary
Raghaveshwara Bharathi Swamiji's devotees have staged a protest on October 11, Bengaluru Townhall. Some People trying to Humiliate Raghaveshwara swamiji in the name of rape complaint devotees claimed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X