ಬೆಂಗಳೂರಲ್ಲಿ ಮತ್ತೆ ವಿಜೃಂಭಿಸಿದ ದೇಶಭಕ್ತಿಯ ರಂಗು

Subscribe to Oneindia Kannada

ಬೆಂಗಳೂರು, ಫೆಬ್ರವರಿ 24 : "ವಂದೇ ಮಾತರಂ, ಭಾರತ್ ಮಾತಾ ಕೀ ಜೈ. ಕಾಶ್ಮೀರ ಭಾರತದ ಸಿಂಧೂರ, ಕಾಶ್ಮೀರ ನಮ್ಮದು ಎಂಬ ಘೋಷಣೆಗಳು ಬೆಂಗಳೂರಿನಲ್ಲಿ ಶನನಿವಾರ ಕೇಳಿಬಂದವು.

'ದೇಶದ್ರೋಹಿಗಳೇ ಭಾರತ ಬಿಟ್ಟು ತೊಲಗಿ' ಎಂದು ಘೋಷಣೆ ಕೂಗುತ್ತ ಹೆಜ್ಜೆ ಹಾಕಿದ ಮಾಜಿ ಸೈನಿಕರು, ವಿದ್ಯಾರ್ಥಿಗಳಿ, ಐಟಿ ಉದ್ಯೋಗಿಗಳು ದೇಶದ್ರೋಹಿಗಳನ್ನು ಖಂಡಿಸುತ್ತಲೇ ಸಾಗಿದರು. ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ನಡೆದ ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದರು.["ಕನ್ಹಯ್ಯ ಕುಮಾರ್‌ಗೆ ನಾವೆಲ್ಲ ಧನ್ಯವಾದ ಅರ್ಪಿಸಬೇಕು"!]

bengaluru

ಜೆಎನ್ ಯು, ಕಾಶ್ಮೀರ ಪ್ರತ್ಯೇಕತಾ, ಅಸಹಿಷ್ಣುತೆ ವಿವಾದಗಳ ಆಧಾರದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ದೇಶವನ್ನು ಒಡೆಯುತ್ತಿವೆ. ದೇಶದ ರಕ್ಷಣೆ ನಮ್ಮ ಕೈಯಲ್ಲಿದೆ. ಅದು ನಮ್ಮದೇ ಜವಾಬ್ದಾರಿ ಎಂದು ಘೋಷಣೆ ಕೂಗುತ್ತಾ ಸಾಗಿದರು.[ದೇಶದ್ರೋಹಿಗಳೇ ಭಾರತ ಬಿಟ್ಟು ತೊಲಗಿ]

ಫ್ರೀಂಡಂ ಪಾರ್ಕ ಎದುರು ಸಮಾವೇಶಗೊಂಡ ಕಾರ್ಯಕರ್ತರು ದೇಶದ ಪರವಾಗಿ ಘೋಷಣೆ ಕೂಗಿದರು. ನಮ್ಮ ಸೈನ್ಯ ಪ್ರಪಂಚದಲ್ಲಿಯೇ ಐದನೇ ಬಲಿಷ್ಠ ಸೇನೆ. ಇದನ್ನು ಪಾಕಿಸ್ತಾನ ಮೊದಲು ತಿಳಿದುಕೊಳ್ಳಬೇಕು. ಅಣು ಬಾಂಬ್ ನಮ್ಮ ಬಳಿಯೂ ಇದೆ ಅದನ್ನು ಅರ್ಥಮಾಡಿಕೊಳ್ಳಬೇಕು ಎಂದು ಪಾಕಿಸ್ತಾನದ ಮೇಲೆ ಆರೋಪದ ಸುರಿಮಳೆ ಮಾಡಿದರು.

bengaluru

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian National flags off at Bengaluru Centarl Railway station to Freedom Park on Saturday February 27, 2016. Students, IT People and many institutions take part of this protest against anti-nationalists.
Please Wait while comments are loading...