ಹೆಸರಿಗೆ ಇದು ಮಸಾಜ್ ಪಾರ್ಲರ್, ಒಳಗೆ ವೇಶ್ಯಾವಾಟಿಕೆ!

Written By:
Subscribe to Oneindia Kannada

ಬೆಂಗಳೂರು, ಮೇ 11: ಹೆಸರಿಗೆ ಮಸಾಜ್ ಪಾರ್ಲರ್ ಆದರೆ ಒಳಗೆ ನಡೆಯುತ್ತಿದ್ದದ್ದು ವೇಶ್ಯಾವಾಟಿಕೆ. ಸಿಸಿಬಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯ ಬಲೆಗೆ ಐವರು ಕಿರಾತಕರು ಬಿದ್ದಿದ್ದಾರೆ.

ಕೆಆರ್ ಪುರ ಅಯ್ಯಪ್ಪ ನಗರ ನಿವಾಸಿ ಸಂದೀಪ್, ಬಂಗಾರಪೇಟೆಯ ಹರೀಶ್ ಎಂ. ಬಿಟಿಎಂ ಜಯದೇವ ಸಮೀಪದ ನಿವಾಸಿ ಶ್ಯಾಮ್, ಮಂಡ್ಯ ಜಿಲ್ಲೆ ಬಸರಾಳು ಹೋಬಳಿಯ ಸಂತೋಷ್, ಕಡೂರಿನ ನವೀನ್ ಎಸ್.ಕೆ ಎಂಬುವರನ್ನು ಬಂಧಿಸಲಾಗಿದೆ.[ಬೆಂಗಳೂರಿನ ಬಾರಲ್ಲಿ ಅಶ್ಲೀಲ ನೃತ್ಯ : 37 ಜನರ ಬಂಧನ]

bengaluru

ಆರೋಪಿಗಳಿಂದ 8 ಮೊಬೈಲ್, 5 ಸಾವಿರ ರೂ. ಮತ್ತು ವೇಶ್ಯಾವಾಟಿಕೆಗೆ ಬಳಸುತ್ತಿದ್ದ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ವಿದೇಶಿ ಯುವತಿ ಸೇರಿದಂತೆ ನಾಲ್ವರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.

ಶಿವಾಜಿನಗರದ ಕಮರ್ಷಿಯಲ್ ಸ್ಟ್ರೀಟ್ ವೀರಪಿಳೈ ಸ್ಟ್ರೀಟ್‌ನಲ್ಲಿರುವ ಮಸಾಜ್ ಪಾರ್ಲರ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.[ಬೆಂಗಳೂರು: ಆನ್‌ಲೈನ್ ವೇಶ್ಯಾವಾಟಿಕೆ ಜಾಲದ ಬಗ್ಗೆ ಎಚ್ಚರ]

ಅಶೋಕ್ ನಗರ ಪೊಲೀಸ್ ಠಾಣಾ ಸರಹದ್ದಿನ ರೆಸಿಡೆನ್ಸಿ ರಸ್ತೆಯಲ್ಲಿರುವ ಗೋಲ್ಡ್ ಟವರ್‌ನಲ್ಲಿನ ಟೈಮ್ಸ್ ಬಾರ್ ಮೇಲೆ ದಾಳಿ ನಡೆಸಿ ಯುವತಿಯರಿಂದ ಅಶ್ಲೀಲ ನೃತ್ಯ ಮಾಡಿಸುತ್ತಿದ್ದ 37 ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಮೇ 8 ರಂದು ಬಂಧಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A prostitution racket being run from a massage parlour in commercial street Bengaluru was busted. Police arrested Sandeep, Harish, Sham, Santosh, Naveen.
Please Wait while comments are loading...