ಆಗಸ್ಟ್ 5 ಅರಮನೆ ಮೈದಾನದಲ್ಲಿ 'ಬೆಂಗಳೂರು ಪ್ರೆಸ್ ಕ್ಲಬ್ 50' ಸಂಭ್ರಮ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 4: ಬೆಂಗಳೂರು ಪ್ರೆಸ್ ಕ್ಲಬ್ ಐವತ್ತು ವರ್ಷ ಪೂರೈಸಿದ ಸಂಭ್ರಮದಲ್ಲಿ ಆಗಸ್ಟ್ ಐದರ ಶನಿವಾರ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅದರ ವಿವರ ಇಂತಿದೆ. ಬೆಳಗ್ಗೆ ಹಾಗೂ ಸಂಜೆ ಪ್ರೆಸ್ ಕ್ಲಬ್ ಹಾಗೂ ಗಾಯತ್ರಿ ವಿಹಾರ (ಅರಮನೆ ಮೈದಾನ)ದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.

Bengaluru Press Club 50th year celebration on August 5th in palace ground

ಶನಿವಾರ ಬೆಳಗ್ಗೆ 9ಕ್ಕೆ ಪ್ರೆಸ್ ಕ್ಲಬ್ ಆವರಣ, ಕಬ್ಬನ್ ಪಾರ್ಕ್ ನಲ್ಲಿ ಕಾರ್ಯಕ್ರಮ.

ಹಿರಿಯ ಸದಸ್ಯರು ಸಸಿ ನೆಡುವ ಮೂಲಕ ಸುವರ್ಣ ವರ್ಷಾಚರಣೆ ಸಂಭ್ರಮಕ್ಕೆ ಚಾಲನೆ

ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ: ಸಚಿವ ಡಾ.ಎಚ್.ಸಿ.ಮಹದೇವಪ್ಪ

ಕ್ಲಬ್ ಉದ್ಯಾನವನ ನವೀಕರಣ ಶಂಕುಸ್ಥಾಪನೆ: ಮೇಯರ್ ಜಿ.ಪದ್ಮಾವತಿ

ಮೂಲ ವಿಜ್ಞಾನ ಮತ್ತು ಅಭಿವೃದ್ಧಿ ಕುರಿತು ಉಪನ್ಯಾಸ: ಡಾ.ಸಿ.ಎನ್.ಆರ್.ರಾವ್

ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ: ಕಸ್ತೂರಿ ರಂಗನ್

ಸಂಜೆ 4ಕ್ಕೆ ಗಾಯತ್ರಿ ವಿಹಾರ, ಅರಮನೆ ಆವರಣದಲ್ಲಿ ಕಾರ್ಯಕ್ರಮ

ಸುವರ್ಣ ವರ್ಷಾಚರಣೆಯ ಉದ್ಘಾಟನೆ ಮತ್ತು ಲಾಂಛನ ಬಿಡುಗಡೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಅಧ್ಯಕ್ಷತೆ: ಸಚಿವ ಕೆ.ಜೆ.ಜಾರ್ಜ್

ಮುಖ್ಯ ಅತಿಥಿಗಳು: ಸಚಿವ ಎಚ್.ಸಿ.ಮಹದೇವಪ್ಪ, ಮೇಯರ್ ಪದ್ಮಾವತಿ, ಸಂಸದ ಪಿ.ಸಿ.ಮೋಹನ್, ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ನಟ ಸುದೀಪ್.

ಜೀ ಕನ್ನಡ ವಾಹಿನಿಯ ಸ ರಿ ಗ ಮ ಪ, ಡ್ರಾಮಾ ಜ್ಯೂನಿಯರ್ಸ್ ಹಾಗೂ ಕಾಮಿಡಿ ಕಿಲಾಡಿಗಳು ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮವಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru Press Club 50th year celebration on August 5th in palace ground. Morning program in Bengaluru press club, evening celebration in palace ground. Here is the details of function.
Please Wait while comments are loading...